ಕುಣಿಗಲ್ : ರಾಜ್ಯದಲ್ಲಿ ಬಿಜೆಪಿ 120 ಸ್ಥಾನವನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದರು ತಿಳಿಸಿದರು.
ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಡಬಲ್ ಇಂಜಿನ್ ಬಿಜೆಪಿ ಸರ್ಕಾರ ರೈತರಿಗೆ ಬಡವರಿಗೆ ಮಹಿಳೆಯರಿಗೆ ಅನೇಕ ಯೋಜನೆಯ ಸೌಲಭ್ಯಗಳನ್ನು ನೀಡಿದ್ದು ರಾಜ್ಯಾದ್ಯಂತ ಬಿಜೆಪಿಯ ಅಭೂತಪೂರ್ವ ಅಲೆ ಎದ್ದು ಕಾಣುತ್ತಿದ್ದು ಪೂರ್ಣ ಬಹುಮತದೊಂದಿಗೆ 120 ಸ್ಥಾನ ಗಳಿಸುವ ಮೂಲಕ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬರಲಿದೆ ರಾಜ್ಯದ್ಯಂತ ಆರು ಲಕ್ಷ ಜನರ ಸಮೀಕ್ಷೆ ಹಾಗೂ ವ್ಯಾಟ್ಸಪ್ ಮೂಲಕ ಜನಸಾಮಾನ್ಯರ ಸಮಸ್ಯೆ ಲಾಲಿಸಿ ಬಿಜೆಪಿ ಪ್ರಜಾ ಪ್ರಣಾಳಿಕೆ ಸಿದ್ಧಪಡಿಸಿದ್ದು ಮಹಿಳೆಯರಿಗೆ ಉಚಿತ ಬಸ್ ಪಾಸ್ ಬಿಪಿಎಲ್ ಕುಟುಂಬಕ್ಕೆ ಅರ್ಧ ಲೀಟರ್ ಉಚಿತ ಹಾಲು ಅಕ್ಕಿ ಜೊತೆ ಸಿರಿಧಾನ್ಯ ಹಬ್ಬದ ದಿನಗಳಲ್ಲಿ ಮೂರು ಉಚಿತ ಗ್ಯಾಸ್ ಸಿಲಿಂಡರ್ ಸೇರಿದಂತೆ ಅನೇಕ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಿದ್ದು ಡಬಲ್ ಇಂಜಿನ್ ಸರ್ಕಾರವು ಜನರ ಭಾವನೆಗೆ ಸ್ಪಂದಿಸಿ ಕೆಲಸ ಮಾಡುತ್ತಿದೆ ಈಗಾಗಲೇ ರಾಜ್ಯಾದ್ಯಂತ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಷ್ಟ್ರಾಧ್ಯಕ್ಷರಾದ ನಡ್ಡಾಜಿ ಗೃಹ ಮಂತ್ರಿ ಅಮಿತ್ ಶಾ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮುಖ್ಯಮಂತ್ರಿ ಎಸ್ ಆರ್ ಬೊಮ್ಮಾಯಿ ತಾವು ಸೇರಿದಂತೆ ಅನೇಕ ಕೇಂದ್ರ ಮತ್ತು ರಾಜ್ಯ ನಾಯಕರು ಚುನಾವಣಾ ಪ್ರಚಾರದಲ್ಲಿದ್ದು ನೂರಕ್ಕೆ ನೂರರಷ್ಟು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಶತಸಿದ್ದ ಕಾಂಗ್ರೆಸ್ ಭ್ರಷ್ಟಾಚಾರದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಡಿಕೆ ಶಿವಕುಮಾರ್ ಸೇರಿದಂತೆ ಎಲ್ಲರ ಮೇಲೆಯೂ ಪ್ರಕರಣಗಳು ದಾಖಲಾಗಿವೆ ಲಿಂಗಾಯತ ವೀರಶೈವ ಸಮಾಜಕ್ಕೆ ಬಿಜೆಪಿ ನ್ಯಾಯ ದೊರಕಿಸಿ ಕೊಟ್ಟಿದ್ದು ಆ ವರ್ಗದ ಜನರು ಸದಾ ಬಿಜೆಪಿಯೊಂದಿರುತ್ತಾರೆ ಒಳ ಮೀಸಲಾತಿ ಬಂಜಾರ ಸಮುದಾಯವು ತಪ್ಪು ತಿಳುವಳಿಕೆಯಿಂದ ಗಲಾಟಿ ಮಾಡಿದರು ಈಗ ಅವರಿಗೆ ತಪ್ಪಿನ ಅರಿವಿನಿಂದ ಬಿಜೆಪಿ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಅರಬ್ ರಾಷ್ಟ್ರಗಳಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಿಂದ ಗ್ಯಾಸ್ ಸಿಲಿಂಡರ್ ಏರಿಕೆಯಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರೋಡ್ ಶೋ :
ಇದಕ್ಕೂ ಮುನ್ನ ಕುದುರೆ ಫಾರಂ ಮುಂಭಾಗದಿಂದ ಹುಚ್ಚ ಮಾಸ್ತಿ ಗೌಡ ವೃತ್ತದ ವರಿಗೆ ತೆರೆದ ವಾಹನದಲ್ಲಿ ಸಾವಿರಾರು ಕಾರ್ಯಕರ್ತರ ರೊಂದಿಗೆ ರೋಡ್ ಶೋ ನಡೆಸಿದರು ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಡಿ ಕೃಷ್ಣಕುಮಾರ್ .ಮಾಜಿ ಸಂಸದ ಎಸ್ ಪಿ ಮುದ್ದ ಹನುಮೇಗೌಡ. ಮಾಜಿ ಶಾಸಕ ಸುರೇಶ್ ಗೌಡ. ಬಿಜೆಪಿ ಮುಖಂಡ ಎಚ್ ಡಿ ರಾಜೇಶ್ ಗೌಡ. ಬಿಜೆಪಿ ತಾಲೂಕ ಅಧ್ಯಕ್ಷ ಬಲರಾಮ್ ಸೇರಿದಂತೆ ಸಾವಿರಾರು ಕಾರ್ಯಕರ್ತರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.