ಕೊರಟಗೆರೆ : ಚುನಾವಣಾ ಪ್ರಚಾರದ ಸಮಯದಲ್ಲಿ ಡಾ.ಜಿ.ಪರಮೇಶ್ವರ್ ರವರ ಮೇಲೆ ಕಲ್ಲು ಎಸೆತ ಪುರ್ವನಿಯೋಜಿತ ಸಂಚಾಗಿದ್ದು ತಕ್ಷಣ ಹಲ್ಲೆ ಮಾಡಿದ ಕಿಡಿಗೇಡಿ ಗಳನ್ನು ಪೊಲೀಸರು ಬಂದಿಸಬೇಕು ತಪ್ಪಿದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಕೆ.ಪಿ.ಸಿ.ಸಿ ಸದಸ್ಯ ಹಾಗೂ ಪ.ಪಂ.ಸದಸ್ಯ ಎ.ಡಿ.ಬಲರಾಮಯ್ಯ ಆಗ್ರಹಿಸಿದರು.
ಅವರು ಕೊರಟಗೆರೆ ಪಟ್ಟಣದಲ್ಲಿ ಕಳೆದ 28 ರಂದು ತಾಲೂಕಿನ ಬೈರೇನಹಳ್ಳಿ ಗ್ರಾಮದಲ್ಲಿ ಡಾ.ಜಿ.ಪರಮೇಶ್ವರ್ ರವರ ಮೇಲೆ ಕಿಡಿಗೇಡಿಗಳು ಕಲ್ಲು ಬೀಸಿ ತಲೆಗೆ ಗಾಯಗೊಳಿಸಿ 24 ಗಂಟೆಗಳು ಕಳೆದರೂ ಪೊಲೀಸರು ಸಂಬಂಧಿಸಿದ ಆರೋಪಿಗಳನ್ನು ಬಂದಿಸದೆ ಇರುವದನ್ನು ಕಾಂಗ್ರೆಸ್ ಕಾರ್ಯಕ್ರರ್ತರು ಮತ್ತು ಮುಖಂಡರು ಖಂಡಿಸಿ ಎಸ್‌ಎಸ್‌ಆರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಹಿಂದೆಂದೂ ನೆಡೆಯದಂತಹ ಕೃತ್ಯ ನಡೆದಿದ್ದು, ಇತ್ತೀಚಿನ ದಿನಗಳಲ್ಲಿ ಕೊರಗಟೆರೆ ಕ್ಷೇತ್ರದಲ್ಲಿ ಆಶಾಂತಿಯುತ ಪರಿಸ್ಥಿತಿಯ ವಾತಾವರಣ ನಿರ್ಮಾಣ ಮಾಡಲು ಸಂಚುನಡೆಸುತ್ತಿರುವುದು ಕಂಡುಬರುತ್ತಿದ್ದು, ಇಂತಹ ಕೃತ್ಯಗಳಿಂದ ಭಯದ ವಾತಾವರಣ ಸೃಷ್ಠಿಯಾಗಲಿದೆ, ನಾಮಪತ್ರ ಸಲ್ಲಿಸುವ ಮೇಳೆಯೂ ತಾಲೂಕು ಕಛೇರಿ ಆವರಣದಲ್ಲಿ ಕಲ್ಲು ಎಸೆಯುವ ಕೃತ್ಯ ನಡೆದಿದ್ದು, ಪೊಲೀಸರು ಎಚ್ಚತ್ತು ಕೊಳ್ಳದೆ ಮತ್ತೊಂದು ಕೃತ್ಯ ನಡೆಯಲು ಅವಕಾಶ ನೀಡಿದಂತಾಗಿ ಪೊಲೀಸ್ ವೈಪಲ್ಯ ಎದ್ದು ಕಾಣುತ್ತಿದೆ ಎಂದ ಅವರು ತಕ್ಷಣ ಈ ಬಗ್ಗೆ ತನಿಖೆ ನಡೆಸಿ ಕೃತ್ಯೆ ಎಸಗಿರುವ ಕಿಡಿಗೇಡಿಗಳನ್ನು ಬಂಧಿಸಬೇಕು ಹಾಗೂ ಇದರ ಹಿಂದಿರುವ ಕೈಗಳು ಯಾರೆಂದು ಸಾರ್ವಜನಿಕರಿಗೆ ಸತ್ಯ ತಿಳಿಯಬೇಕು ಎಂದು ಆಗ್ರಹಿಸಿದರು.
ಕೃತ್ಯ ನಡೆದ ಸ್ಥಳದಲ್ಲಿ ಡಾ.ಜಿ.ಪರಮೇಶ್ವರ್ ರವರೊಂದಿಗೆ ನಾನು ಇದ್ದು ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಡಾ.ಜಿ.ಪರಮೇಶ್ವರ್ ರವರಿಗೆ ಬೈರೇನಹಳ್ಳಿ ಕ್ರಾಸ್ ಬಳಿ ಜೆಸಿಬಿ ಯಂತ್ರದ ಮೂಲಕ ಪುಷ್ಪವೃಸ್ಟಿ ಮಾಡುವ ಸಮಯದಲ್ಲಿ ಅಪರಿಚಿತ ವ್ಯಕ್ತಿಗಳು ಡಾ.ಜಿ.ಪರಮೇಶ್ವರ್ ರವರನ್ನು ಗುಂಪಿನೊಳಗೆ ಎಳೆದು ಕೊಂಡು ಮೇಲೆತ್ತಿ ಕುಣಿಸುವ ನಾಟಕವಾಡಿ ಆ ಸಮಯದಲ್ಲಿ ಅವರ ತಲೆಗೆ ಕಲ್ಲು ತೂರಿ ತಲೆಗೆ ಪೆಟ್ಟಾಗಿ ರಕ್ತ ಸ್ರಾವವಾಯಿತು ಇದು ಪೂರ್ವ ನಿಯೋಜನೆಯ ಸಂಚು ಎಂದು ಸ್ಪಷ್ಠವಾಗಿ ತಿಳಿಯುತ್ತಿದ್ದು ಇದು ಡಾ.ಜಿ.ಪರಮೇಶ್ವರ್ ರವರ ವಿರೋಧಿಗಳು ಕೃತ್ಯ ಎಂದು ತಿಳಿಸಿದ ಅವರು ತಕ್ಷಣ ಆರೋಪಿಗಳನ್ನು ಬಂದಿಸ ಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡ ಹಾಗೂ ನಗರಸಭಾ ಮಾಜಿ ಉಪಾಧ್ಯಕ್ಷ ವಾಲೇಚಂದ್ರಯ್ಯ ಪ್ರತಿಭಟನೆಯಲ್ಲಿ ಮಾತನಾಡಿ ರಾಜ್ಯದ ದಲಿತ ನಾಯಕರು ಹಾಗೂ ಮಾಜಿ ಉಪ ಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ್ ರವರು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಸಮಯದಲ್ಲಿ ಹಾಗೂ ನಾಮಪತ್ರ ಸಲ್ಲಿಸುವ ಸಮಯದಲ್ಲಿ ಅವರ ತಲೆಗೆ ಕಲ್ಲು ಎಸೆದು ಗಾಯಗೊಳಿಸಿರುವ ಘಟನೆ ನಿಚಕ್ಕೂ ಖಂಡನೀಯವಾಗಿದ್ದು ಇದು ಉದ್ದೇಶ ಪೂರ್ವಕ ಎಂದು ಸ್ಪಷ್ಟವಾಗುತ್ತಿದೆ ಇದು ಅವರ ವಿರೋದಿಗಳ ಸಂಚಾಗಿದೆ ಇದರಿಂದ ಕ್ಷೇತ್ರದಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ ಡಾ.ಜಿ.ರಪಮೇಶ್ವರ್ ರವರ ರಕ್ಷಣೆಗಾಗಿ ಸರ್ಕಾರ ತಕ್ಷಣ ಭದ್ರತೆ ಒದಗಿಸಬೇಕು ಹಾಗೂ ಕೃತ್ಯ ಎಸಗಿದ ಕಿಡಿಗೇಡಿಗಳನ್ನು ಹಾಗೂ ಅವರ ಹಿಂದಿರುವ ವಿರೋದಿ ವ್ಯಕ್ತಿಗಳನ್ನು ಬಂದಿಸಬೇಕು ಎಂದ ಅವರು ಕೊರಟಗೆರೆ ಕ್ಷೇತ್ರದ ಅಭಿವೃಧ್ದಿಗೆ ಶ್ರಮಿಸಿ ಶಾಂತಿ ಸೌಮ್ಯ ಸ್ವಭಾವದ ವ್ಯಕ್ತಿಯಾದ ಡಾ.ಜಿ.ಪರಮೇಶ್ವರ್ ರವರನ್ನು ಈ ಕೃತ್ಯ ಎಸಗಿದ ವಿರೋದಿಗಳಿಗೆ ಕೊರಟಗೆರೆ ಮತದಾರರು ಮೇ 10 ರಂದು ಸ್ಪಷ್ಠ ಉತ್ತರ ನೀಡಲ್ಲಿದ್ದಾರೆ, ಮೇ 10 ರಂದು ಮತದಾರರು ಡಾ.ಜಿ.ಪರಮೇಶ್ವರ್ ರವರ ಅಭಿವೃದ್ದಿ ಗುರುತಿಸಿ ಮುಂದಿನ ಅಭಿವೃದ್ದಿಗೆ ಹೆಚ್ಚಿನ ಮತ ನೀಡುವ ಮೂಲಕ ಜಯಶೀಲರನ್ನಾಗಿ ಮಾಡುತ್ತಾರೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್‌ಗೌಡ, ಮಾಜಿ.ಜಿ.ಪಂ.ಸದಸ್ಯ ಪ್ರಸನ್ನಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಡ್ಲಹಳ್ಳಿ ಅಶ್ವತ್ಥನಾರಾಯಣ, ರಾಯಸಂದ್ರ ರವಿಕುಮಾರ್, ಮಾತನಾಡಿ ಕೃತ್ಯವನ್ನು ಖಂಡಿಸಿ ತಕ್ಷಣ ಆರೋಪಿಗಳನ್ನು ಬಂದಿಸುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಪ.ಪಂ.ಸದಸ್ಯ ಕೆ.ಆರ್.ಒಬಳರಾಜು, ನಂದೀಶ್, ಮುಖಂಡರುಗಳಾದ ಚಿಕ್ಕರಂಗಯ್ಯ, ರಾಘವೇಂದ್ರ, ವೆಂಕಟೇಶ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಜಯಮ್ಮ, ಲಕ್ಷಿö್ಮದೇವಮ್ಮ ಜಗನ್ನಾಥ್, ಮಂಜುಳಾ ಸೇರಿದಂತೆ ಇನ್ನಿತರ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿ ವಿರೋಧಿಗಳ ವಿರುದ್ದ ಘೋಷಣೆಗಳನ್ನು ಕೂಗಿದರು.