ಶಿರಾ : ಶಿರಾ ಜನತೆಯ ಆರ್ಶೀವಾದದಿಂದ ಶಾಸಕನಾಗಿ ಅಯ್ಕೆಯಾದ ಬಳಿಕ ಭದ್ರಾ, ಎತ್ತಿನಹೊಳೆ ನೀರಾವರಿ ಯೋಜನೆಗಳನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಿ ಶಿರಾ ಕ್ಷೇತ್ರದಲ್ಲಿ ಶಾಶ್ವತವಾಗಿ ನೀರಿನ ಸಮಸ್ಯೆಗೆ ಮುಕ್ತಿ ಕಾಣಿಸುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಹೇಳಿದರು.
ಅವರು ಹೊನ್ನಗೊಂಡನಹಳ್ಳಿ, ಮಾಗೋಡು ಹಾಗೂ ರತ್ನಸಂದ್ರ ಗ್ರಾ.ಪಂ.ನ ವಿವಿಧ ಹಳ್ಳಿಗಳಲ್ಲಿ ಪ್ರಚಾರ ಕೈಗೊಂಡು ಮಾತನಾಡಿದರು. ಚಿಕ್ಕ ವಯಸ್ಸಿನಲ್ಲೇ ಶಾಸಕನಾಗಿ ವಿಧಾನಸಭೆ ಪ್ರವೇಶಿಸಿದ ನನಗೆ ನಾಲ್ಕು ದಶಕಗಳ ಅನುಭವ, ಸಂಪರ್ಕದ ಕಾರಣದಿಂದ 3500ಕೋಟಿ ಅನುದಾನವನ್ನು ಶಿರಾಕ್ಕೆ ತರಲು ಸಾಧ್ಯವಾಯಿತು. ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಸಾಕಷ್ಟು ಕೈಗಾರಿಕೆಗಳನ್ನು ಆರಂಭಿಸಲು ಸಹಕಾರ ನೀಡಿ ಉದ್ಯೋಗ ಸೃಷ್ಟಿಸಲಾಗುವುದು ಎಂದರು.
ಶಾಸಕರಿಂದ ದರ್ಪದ ಮಾತು : ಶಿರಾ ಅಭಿವೃದ್ಧಿ ಆಗಿರಲಿಲ್ಲ ನಾನೇ ಅಭಿವೃದ್ಧಿ ಮಾಡಿರೋದು, ನಾನು ಬಂದ ನಂತರವೇ ಎಲ್ಲಾ ಅಭಿವೃದ್ಧಿ ಆಗಿದೆ ಎನ್ನುವ ರೀತಿಯಲ್ಲಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರ ದರ್ಪದ ಮಾತು ಈವರೆಗೂ ಕ್ಷೇತ್ರದಲ್ಲಿ ಪ್ರತಿನಿಧಿಸಿದ್ದ ಶಾಸಕರನ್ನು ಅವಮಾನಿಸಿದ ಹಾಗೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಸದಸ್ಯ ಟಿ.ಲೋಕೇಶ್, ಮಾಜಿ ಜಿ.ಪಂ.ಸದಸ್ಯ ಅರೇಹಳ್ಳಿ ರಮೇಶ್, ಮುಖಂಡರಾದ ಗುಳಿಗೇನಹಳ್ಳಿ ನಾಗರಾಜ್, ಚಿಕ್ಕತಿಮ್ಮಣ್ಣ, ಬಾಂಬೆ ರಾಜಣ್ಣ, ಶೋಭ ನಾಗರಾಜ್, ಸುರೇಶ್, ಅಶೋಕ್, ಮಹದೇವಣ್ಣ,ಲಕ್ಷಿ÷್ಮಕಾಂತ್, ವಿಜಯಮ್ಮ, ಮಂಜುನಾಥ್, ರಾಜಣ್ಣ, ಸೋಮಣ್ಣ, ಹೇಮಂತ್ ಗೌಡ ಸೇರಿದಂತೆ ಹಲವರು ಹಾಜರಿದ್ದರು.