ತುಮಕೂರು : ವಿರೋಧ ಪಕ್ಷಗಳ ಕುಮ್ಮಕ್ಕಿನಿಂದಲೇ ಡಾ.ಜಿ.ಪರಮೇಶ್ವರ್ ಮೇಲೆ ಕಲ್ಲೆಸೆಯಲಾಗಿದೆ ಎಂದು ತುಮಕೂರು ನಗರಸಭೆ ಮಾಜಿ ಉಪಾಧ್ಯಕ್ಷ ವಾಲೆ ಚಂದ್ರಯ್ಯ ಆರೋಪಿಸಿದರು.
ಕೊರಟಗೆರೆಯ ಬೈರೇನಹಳ್ಳಿ ಬಳಿ ಪ್ರಚಾರದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಹೂವನ್ನು ಜೆಸಿಬಿ ಮೇಲಿಂದ ಎಸೆಯುವ ಸಂದರ್ಭ ದಲ್ಲಿಯೇ ಕಲ್ಲೇಟು ಬಿದ್ದಿರುವುದು ಅನುಮಾನಗಳಿಗೆ ಕಾರಣ ವಾಗಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಡಾ.ಜಿ.ಪರಮೇಶ್ವರ್ ಮೇಲೆ ಷಡ್ಯಂತ್ರ ನಡೆಸಿ ಕಲ್ಲೆಸೆಯಲಾಗಿದೆ, ಈ ಹಿಂದೆಯೂ ಈ ರೀತಿ ಆಗಿತ್ತು, ವಿರೋಧಿಗಳ ಕುಮ್ಮಕ್ಕಿನ ಬಗ್ಗೆ ತನಿಖೆ ಯಾಗಬೇಕಿದೆ, ಕಲ್ಲೇಟು ಬಿದ್ದಿದ್ದರಿಂದ ಪರಮೇಶ್ವರ್ ಅವರಿಗೆ ಬಲವಾದ ಏಟು ಬಿದ್ದಿದೆ ಎಂದರು.
ಡಾ.ಜಿ.ಪರಮೇಶ್ವರ್ ಅವರ ಜನಪ್ರಿಯತೆಯನ್ನು ಸಹಿಸಲಾಗದೇ ಈ ರೀತಿ ಷಡ್ಯಂತ್ರ ಮಾಡಲಾಗಿದೆ, ಇದು ಎರಡನೇ ಬಾರಿಗೆ ಈ ರೀತಿಯ ಕೃತ್ಯ ನಡೆದಿದ್ದು, ಇಂತಹ ಕೃತ್ಯವನ್ನು ಕಾಂಗ್ರೆಸ್ ಖಂಡಿಸಲಿದೆ ಎಂದರು.
ಮೊದಲ ಬಾರಿ ಕಲ್ಲೇಸೆತ ಮಾಡಿದ್ದ ಬೇರೆ ಪಕ್ಷದ ಕಾರ್ಯಕರ್ತನೆ ಹೊರತು ನಮ್ಮವರಲ್ಲ, ಹೀಗಲೂ ಹಾಗೆಯೇ ಆಗಿದೆ, ಘಟನೆಯ ಬಗ್ಗೆ ಕೂಲಂಕಷವಾಗಿ ವಿಚಾರಣೆ ಮಾಡಬೇಕು ಎಂದರು.
ಡಾ.ಜಿ.ಪರಮೇಶ್ವರ್‌ಗೆ ಎಸೆದ ಕಲ್ಲು ನನಗೆ ಸಿಕ್ಕಿದ್ದು ಅದನ್ನು ಪೊಲೀಸರಿಗೂ ತೋರಿಸಿದ್ದೇನೆ, ಟಾರು ರಸ್ತೆಯಲ್ಲಿ ಇದ್ದಿದ್ದು ಒಂದೇ ಕಲ್ಲು, ಬೇಕಂತಲೇ ಇಂತಹ ಕೃತ್ಯವನ್ನು ವಿರೋಧಿಗಳು ಮಾಡಿದ್ದಾರೆ ಎಂದು ದೂರಿದರು.
ಘಟನೆ ವಿವರ :ಶುಕ್ರವಾರ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಭೈರೇನಹಳ್ಳಿ ಗ್ರಾಮದಲ್ಲಿ ಚುನಾವಣಾ ಅಬ್ಬರದ ಪ್ರಚಾರದಲ್ಲಿ ತೊಡಗಿದ ವೇಳೆ ಮಾಜಿ ಡಾ.ಜಿ.ಪರಮೇಶ್ವರ್ ರವರನ್ನು ಕಾರ್ಯಕರ್ತರು ಎತ್ತಿ ಕುಣಿಸುತ್ತಿದ್ದು ಜೆ.ಸಿ.ಬಿ ವಾಹನದಲ್ಲಿ ಹೂವಿ ಮಳೆ ಸುರಿಸುತ್ತಿದ್ದ ವೇಳೆ ಕಿಡಿ ಗೇಡಿಯೊಬ್ಬ ಕಲ್ಲುತೂರಿದ್ದು ಪರಮೇಶ್ವರ್ ತಲೆಗೆ ತೀವ್ರ ರೀತಿಯ ಪೆಟ್ಟಾಗಿ ರಕ್ತ ಸ್ರಾವದೊಂದಿಗೆ ಗಾಯವಾದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಇದೇ ತಿಂಗಳು ಏ.19 ರಂದು ಅದ್ದೂರಿ ಮೆರವಣಿಗೆ ನಂತರ ನಾಮಪತ್ರ ಸಲ್ಲಿಸಲು ತಾಲೂಕು ಕಚೇರಿಗೆ ತೆರಳು ತ್ತಿದ್ದ ವೇಳೆಯಲ್ಲೂ ಕಿಡಿಗೇಡಿ ಕಲ್ಲು ತೋರಿದ್ದು ಅಂದು ಡಾ.ಜಿ.ಪರಮೇಶ್ವರ್ಗೆ ಬೀಳದೆ ಕಲ್ಲು ಕರ್ತವ್ಯದಲ್ಲಿದ್ದ ಮಹಿಳಾ ಪೇದೆಯ ತಲೆ ಬಿದ್ದು ಪೇದೆ ಅಲ್ಲೆ ತಕ್ಷಣ ಕುಸಿದು ಬಿದ್ದು ತಲೆಗೆ ತೀವೃವಾದ ಪೆಟ್ಟು ಬಿದ್ದಿದ್ದು ಮಹಿಳಾ ಪೇದೆ ಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು, ಪೊಲೀಸರು ಕಲ್ಲು ಎಸೆದ ವ್ಯಕ್ತಿಯನ್ನು ಬಂದಿಸಿ ಪ್ರಕರಣ ದಾಖಲಿಸಿಕೊಂಡಿದ್ದರು.
ತಲೆಯ ಭಾಗಕ್ಕೆ ಪಟ್ಟು ಬಿದ್ದ ಡಾ.ಜಿ.ಪರಮೇಶ್ವರ್ ರವರು ಅಕ್ಕಿರಾಂಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಸಿದಾರ್ಥ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಡಾ.ಜಿ.ಪರಮೇಶ್ವರ್ ರವರ ಮೇಲೆ ಎರಡನೇ ಬಾರಿ ನಡೆದ ಕಲ್ಲಿನಿಂದ ಹಲ್ಲೆ ಪ್ರಕರಣವನ್ನು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಖಂಡಿಸಿ ವಿವಿಧ ರೀತಿಯ ಅನುಮಾನ ವ್ಯಕ್ತ ಪಡಿಸಿ ಪೊಲೀಸರು ತಕ್ಷಣ ಆರೋಪಿಯನ್ನು ಬಂದಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾ ಟ ಮಾಡುವುದಾಗಿ ಎಚ್ಚರಿಸಿದ್ದಾರೆ.