ಕುಣಿಗಲ್ : ಇಲಾಖೆ ಅಧಿಕಾರಿಗಳ ಆದೇಶದ ಮೇರೆಗೆ ಭೂಮಿಯನ್ನು ಸರ್ವೆ ಮಾಡಲು ಹೋದಂತಹ ಸಂದರ್ಭದಲ್ಲಿ ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ ಕಚೇರಿಯ ಪರವಾನಗಿ ಖಾಸಗಿ ಸರ್ವೆಯರ್ ಗಿರೀಶ್ ಕೆ,ಜಿ, ಮೇಲೆ ಹಲ್ಲೇ ನೆಡೆದಿರುವ ಘಟನೆ ಗುರುವಾರ ಜರುಗಿದೆ.
ತಾಲೂಕಿನ ಕಸಬಾ ಹೋಬಳಿ ವಾರ್ಡ್ ನಂಬರ್ 1ರ ಬಿದನಗೆರೆ ಗ್ರಾಮದ ರತ್ನಮ್ಮನವರು ಸರ್ವೆ ನಂಬರ್ 74/1ರ ಜಮೀನನ್ನು ಅಳತೆ ಮಾಡಲು ಸರ್ವೆ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು, ಇಲಾಖೆಯ ಆದೇಶದ ಹಿನ್ನೆಲೆಯಲ್ಲಿ ಪರವಾಗಿ ಖಾಸಗಿ ಸರ್ವೆಯರ್ ಗಿರೀಶ್, ಕೆ,ಜಿ, ಜಮೀನು ಅಳತೆ ಮಾಡಲು ಗುರುವಾರ ಸ್ಥಳಕ್ಕೆ ತೆರಳಿದ ಸಂದರ್ಭದಲ್ಲಿ ಈ ಜಮೀನಿಗೆ ಸಂಬಂಧಪಟ್ಟ ಕೃಷ್ಣಪ್ಪ ಮತ್ತು ರತ್ನಮ್ಮಮಧ್ಯೆ ಜಗಳ ಪ್ರಾರಂಭವಾಗಿದ್ದು, ಈ ವೇಳೆ ಜಮೀನು ಅಳತೆ ಮಾಡಲು ಬಂದಿದ್ದ ಸರ್ವೆಯರ್ ಗಿರೀಶ್ ಅವರ ಬಳಿ ತೆರಳಿದ ಕೃಷ್ಣಪ್ಪ ಈ ಜಮೀನಿಗೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ದಾವೇ ಇದೆ ಇದನ್ನು ನೋಡಿ ಎಂದು ಸರ್ವೆಯರ್ ಗೆ ನೀಡಿದ ವೇಳೆ ಸರ್ವೇಯರ್ ಆ ಪತ್ರವನ್ನು ವೀಕ್ಷಣೆ ಮಾಡುವ ಸಂದರ್ಭದಲ್ಲಿ ಏಕಾಏಕಿ ಸರ್ವೇಯರ್ ಗಿರೀಶ್ ಮೇಲೆ ಕೃಷ್ಣಪ್ಪನ ಮಗಆನಂದ್, ಗಿರೀಶ್ ಮೇಲೆ ದೊಣ್ಣೆ ಮತ್ತು ಇಟ್ಟಿಗೆಯಿಂದ ಹಲ್ಲೆ ನಡೆಸಿ ಪಕ್ಕದಲ್ಲಿದ್ದ ಮನೆಗೊಡೆಗೆ ಗುದ್ಧಿಸಿದ್ದು ಅಲ್ಲದೆ ಅವಾಚ್ಯ ಶಬ್ದಗಳಿಂದ ಬೈದು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.
ಇದಲ್ಲದೆ ಅರ್ಜಿದಾರಳಾದ ರತ್ನಮ್ಮನ ಮೇಲೆ ಗಂಗಣ್ಣ, ಸುಶೀಲಮ್ಮ ಪೂರ್ಣಿಮಾ ಹಲ್ಲೆ ನಡೆಸಿದ್ದಾರೆ ಎಂದು ಗಲಾಟೆಯಲ್ಲಿ ಪೆಟ್ಟು ತಿಂದ ಸರ್ವೆಯರ್ ಗಿರೀಶ್ ಕೆ ಜಿ ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಬಿದನಗೆರೆ ಗ್ರಾಮದ ಆನಂದ್, ಕೃಷ್ಣಪ್ಪ, ಗಂಗಣ್ಣ, ಸುಶೀಲಮ್ಮ, ಪೂರ್ಣಿಮ, ಎಂಬುವರ ಮೇಲೆ ಪ್ರಕರಣ ದಾಖಲಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.ಈ ಸಂಬಂಧ ಬೆಂಗಳೂರು ವಿಭಾಗದ ಸರ್ವೆ ಇಲಾಖೆ ಜಂಟಿ ನಿರ್ದೇಶಕ ಪ್ರಕಾಶ್ ಮತ್ತು ತಹಸಿಲ್ದಾರ್ ಮಹಾಬಲೇಶ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಪೋಲಿಸ್ ಅಧಿಕಾರಿಗಳೊಂದಿಗೆ ಕುಲಂಕುಶವಾಗಿ ಚರ್ಚಿಸಿ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.
ವರದಿ: ರೇಣುಕ ಪ್ರಸಾದ್