ತಿಪಟೂರು : ಕಲ್ಪತರು ನಾಡು ತಿಪಟೂರಿನಲ್ಲಿ ವಿಧಾನಸಭಾ ಚುನಾವಣಾ ಕಾವು ದಿನೇ ದಿನೇ ನಿಧಾನವಾಗಿ ಏರುತ್ತಿದ್ದು ತಾಲ್ಲೂಕಿನ ಅಭಿವೃದ್ದಿಗಾಗಿ ಚುನಾವಣಾ ರಣರಂಗದಲ್ಲಿ 26 ನಾಮಪತ್ರಗಳು ಸಲ್ಲಿಸಿದ್ದು ಅಂತಿಮವಾಗಿ 12ಜನ ಅಭ್ಯರ್ಥಿಗಳು ಸೇವೆ ಮಾಡಲು ಉತ್ಸಾಹಕರಾಗಿದ್ದಾರೆ.
ಭಾರತೀಯ ಜನತಾ ಪಕ್ಷದಿಂದ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಕಾಂಗ್ರೇಸ್ ಪಕ್ಷದಿಂದ ಮಾಜಿ ಶಾಸಕ ಕೆ ಷಡಕ್ಷರಿ, ಜ್ಯಾತ್ಯಾತೀತ ಜನತಾದಳದಿಂದ ಕೆ.ಟಿ ಶಾಂತಕುಮಾರ್, ಆಮ್ ಆದ್ಮಿ ಪಾರ್ಟಿ ಪಕ್ಷದಿಂದ ಟಿ,ಎಸ್. ಚಂದ್ರಶೇಖರ್ ತಿಮ್ಮಾಲಾಪುರ, ಕನ್ನಡ ದೇಶದ ಪಕ್ಷದಿಂದ ಕೋಲಾರ ಜಿಲ್ಲೆಯ ಅರುಣ್ ಲಿಂಗ, ಉತ್ತಮ ಪ್ರಜಾಕೀಯ ಪಕ್ಷದಿಂದ ಎಸ್.ಬಿ ಗಿರೀಶ್ ಮತ್ತಿಹಳ್ಳಿ, ಕರ್ನಾಟಕ ರಾಷ್ಟç ಸಮಿತಿ ಪಕ್ಷದಿಂದ ಕೆ.ಎಸ್ ಗಂಗಾಧರಯ್ಯ ಕರೀಕೆರೆ, ಭಾರತೀಯ ಬಹುಜನ ಕ್ರಾಂತಿ ದಳ ಪಕ್ಷದಿಂದ ಆರ್,ಎಮ್ ಮಲ್ಲಿಕಾರ್ಜುನಸ್ವಾಮಿ ಕರಡಿ ಗ್ರಾಮ, ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಶಾಸಕ ಬಿ ನಂಜಾಮರಿ ಪುತ್ರ ವಿಜಯಕುಮಾರ್, ಕಳೆದ ಬಾರಿಯ ಮಾಜಿ ಅಬ್ಯರ್ಥಿ ಟಿ.ಎನ್ ಕುಮಾರಸ್ವಾಮಿ, ಅನಂತಶಯನ ಎ.ಟಿ, ಬೆಂಗಳೂರು ಮೂಲದ ಬಂಡೆರವಿ ನಾಮದ ರವಿ ಎಮ್, ಇವರಗಳ ನಾಮಪತ್ರವು ಅಂತಿಮಗೊಳಿಸಿ ಚುನಾವಣಾ ಚದುರಂಗದಲ್ಲಿ ಉಳಿದಿದ್ದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಭರತ್ ಬಿ.ಎಸ್ ಹಾಗೂ ಹರೀಶ್ ಟಿ.ಎನ್ ನಾಮಪತ್ರವನ್ನು ವಾಪಸ್ಸು ಪಡೆದಿರುತ್ತಾರೆ.
ಒಟ್ಟಾರೆ 26 ನಾಮಪತ್ರಗಳನ್ನು ಸಲ್ಲಿಸಿದ್ದು ಒಂದು ನಾಮಪತ್ರ ತಿರಸ್ಕೃತಗೊಂಡಿದ್ದು 25 ನಾಮಪತ್ರಗಳು ಅಂತಿಮವಾಗಿ ಉಳಿದಿದ್ದು ಅದರಲ್ಲಿ ಮಾಜಿ ಶಾಸಕ ಕೆ ಷಡಕ್ಷರಿ 4 ಬಾರಿ, ಶಿಕ್ಷಣ ಸಚಿವ ಬಿ.ಸಿ ನಾಗೇಶ್ 3 ಬಾರಿ, ಶಾಂತಕುಮಾರ್, ಭರತ್, ವಿಜಯಕುಮಾರ್, ರವಿ, ಗಂಗಾಧರ್,ಚಂದ್ರಶೇಖರ್, ಅರುಣ್‌ಲಿಂಗ 2 ಬಾರಿ ನಾಮಪತ್ರಗಳನ್ನು ಸಲ್ಲಿಸಿರುವುದು ವಿಶೇಷ.
ವರದಿ : ಪ್ರಶಾಂತ್ ಕರೀಕೆರೆ