ಕೊರಟಗೆರೆಜಿಲ್ಲೆತುಮಕೂರುರಾಜಕೀಯರಾಜ್ಯ

ದೇವೇಗೌಡರ ಸೋಲಿಗೆ ನಾನು ಕಾರಣನಲ್ಲ : ನನ್ನ ಕ್ಷೇತ್ರ ಮುನ್ನಡೆ ನೀಡಿದೆ : ಡಾ.ಜಿ.ಪರಮೇಶ್ವರ್

ಕೊರಟಗೆರೆ : ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ನನಗೆ ಅಪಾರ ಗೌರವವಿದೆ , ತುಮಕೂರಿನಲ್ಲಿ ಅವರ ಸೋಲಿಗೆ ನಾನು ಕಾರಣನಲ್ಲ ,ನನ್ನ ಕ್ಷೇತ್ರ ಅವರಿಗೆ ಮುನ್ನಡೆ ನೀಡಿದೆ, ಇಂತಹ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.
ಅವರು ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಹಲವಾರು ಗ್ರಾಮಗಳ ಮನೆ ಮನೆ ಮತಯಾಚನೆಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿ ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ತುಮಕೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಡಲು ದೆಹಲಿ ವರಿಷ್ಟರು ತೀರ್ಮಾನಿಸಿದರು, ಪಕ್ಷದ ಅಭ್ಯರ್ಥಿಯಾನ್ನಾಗಿ ದೇವೇಗೌಡರನ್ನು ಮಾಡಿದ್ದು ಜೆಡಿಎಸ್ ಪಕ್ಷದವರೇ ನಮ್ಮ ವರಿಷ್ಟರ ಆದೇಶದಂತೆ ನಾವು ಅಂದು ದೇವೇಗೌಡರಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ, ಅವರನ್ನು ಕಣ್ಣೀರು ಹಾಕಿಸಿದ್ದು ನಾನಲ್ಲ, ಯಾರು ಹಾಕಿಸಿದ್ದು ಅಂತ ದೇವೇಗೌಡರು ಸ್ವಷ್ಟವಾಗಿ ಹೇಳಬೇಕು, ಅಂದು ತುಮಕೂರಿನಲ್ಲಿ ಜೆಡಿಎಸ್ ಪಕ್ಷದ ಶಾಸಕರುಗಳಿದ್ದ ಕೆಲವು ಕ್ಷೇತ್ರಗಳಲ್ಲ್ಲಿ ದೇವೇಗೌಡರಿಗೆ ಮುನ್ನಡೆ ಬಂದಿರುವುದಿಲ್ಲ, ಈ ಬಗ್ಗೆ ಸಿ.ಎಂ.ಇಬ್ರಾಹಿಂ ರವರು ಮೊದಲು ಅಲೋಚನೆ ಮಾಡಿಕೊಳ್ಳಲಿ, ಕಾಂಗ್ರೆಸ್ ನವರ ಮೇಲೆ ಅರೋಪ ಮಾಡುವುದು ಸರಿಯಿಲ್ಲ , ನಾವುಗಳು ದೇವೇಗೌಡರನ್ನು ಗೌರವದಿಂದ ನಡೆಸಿಕೊಂಡಿದ್ದೇವೆ ಪ್ರಾಮಾಣಿಕ ಚುನಾವಣೆ ಮಾಡಿದ್ದೇವೆ ನನ್ನ ಕ್ಷೇತ್ರದಲ್ಲಿ ಲೀಡ್ ಕೊಟ್ಟಿದ್ದೇವೆ ಎಂದರು.
ಈಗಾಗಲೇ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದೆ , ಕೊರಟಗೆರೆ ಕ್ಷೇತ್ರದಲ್ಲಿ ಮತಯಾಚನೆಯಲ್ಲಿ ಜನರು ನನ್ನನ್ನು ಪ್ರೀತಿಯಿಂದ ವಿಶ್ವಾಸದಿಂದ ಮನೆಯ ಮಗನಾಗಿ ಆತ್ಮೀಯವಾಗಿ ಗೌರವಿಸಿ ಭರವಸೆ ನೀಡಿ ಆಶೀರ್ವಾದಿಸಿ ಶಕ್ತಿ ತುಂಬುತ್ತಿದ್ದಾರೆ, ಕ್ಷೇತ್ರದ ಎಲ್ಲಾ ವರ್ಗದ ಜನರು ನನ್ನ ಜೊತೆ ಇದ್ದಾರೆ, ಇದರೊಂದಿಗೆ ನಾನು ರಾಜ್ಯದಲ್ಲಿ ಪಕ್ಷದ ಕೆಲವು ಜವಾಬ್ದಾರಿಗಳಿವೆ, ಅದನ್ನು ಸ್ವಲ್ಪ ನಿಭಾಯಿಸುತ್ತೇನೆ, ನನ್ನ ಕಾರ್ಯಕರ್ತರು ಪ್ರತಿ ಮನೆಗೆ ಭೇಟಿ ನೀಡಿ ದುಡಿಯುತ್ತಿದ್ದಾರೆ , ಜನರ ಮನಗೆಲ್ಲುತ್ತಿದ್ದಾರೆ , ಆದರೆ ರಾಜ್ಯಕ್ಕಿಂತ ಹೆಚ್ಚು ಕಾಲ ಕ್ಷೇತ್ರದಲ್ಲಿ ಇರುತ್ತೇನೆ, ಈ ಬಾರಿಯೂ ಕೊರಟಗೆರೆ ಕ್ಷೇತ್ರ ಜನರು ನನ್ನ ಮತ್ತೆ ಗೆಲ್ಲಿಸುತ್ತಾರೆ ನಾನು ಐದು ವರ್ಷಗಳ ಕಾಲ ಅವರ ಜೊತೆಗಿದ್ದು ಸೇವೆ ಮಾಡಿ ಕೊರಟಗೆರೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತಾನೆ,

ನಾನು ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಇತರ ಅಭ್ಯರ್ಥಿಗಳಿಗಿಂತ ಹಳ್ಳಿಯಲ್ಲಿ ಮತ್ತು ಬಡತನದಲ್ಲಿ ಇರುವವರ ಜೊತೆ ಹೆಚ್ಚು ಜೀವನ ಕಳೆಯುತ್ತಿದ್ದೇನೆ .
ಗ್ರಾಮೀಣ ಪ್ರದೇಶದ ಬದುಕನ್ನು ಚೆನ್ನಾಗಿ ತಿಳಿದುಕೊಂಡಿದ್ದೇನೆ , ಕಳೆದ ೫ ವರ್ಷಗಳ ಕಾಲ ನಾನು ಕ್ಷೇತ್ರದಲ್ಲಿ ಪ್ರತಿ ಹಳ್ಳಿಗೆ ಭೇಟಿ ನೀಡಿ ಜನರ ಕಷ್ಟಗಳಿಗೆ ಸಾಧ್ಯವಾದಷ್ಟು ಸ್ಪಂದಿಸಿದ್ದೇನೆ ಎಂದು ಹೇಳಿದರು.

ಈ ಚುನಾವಣೆ ಸಮಯದಲ್ಲಿ ನಮ್ಮ ಪಕ್ಷದ ನಾಯಕರಾದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮ ಯ್ಯರವರು ಕೊರಟಗೆರೆ ಕ್ಷೇತ್ರಕ್ಕೆ ಆಗಮಿಸುತ್ತಾರೆ ನನ್ನ ಪರ ಪ್ರಚಾರ ಮಾಡುತ್ತಾರೆ ಎಂದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಮುಖಂಡರುಗಳಾದ ವಾಲೆ ಚಂದ್ರಯ್ಯ, ಟಿ.ಡಿ.ಪ್ರಸನ್ನಕುಮಾರ್, ಕೃಷ್ಞಪ್ಪ, ನವೀನ್, ಗೊಂದಿಹಳ್ಳಿರಂಗರಾಜು, ಜಟ್ಟಿಅಗ್ರಹಾರ ನಾಗರಾಜು, ಚಂದ್ರು , ಪುಟ್ಟಣ್ಣ, ಅಖಂಡಾರಾದ್ಯ, ವಿನಯ್‌ಕುಮಾರ್, ಮಂಜುನಾಥ್ ಸೇರಿದಂತೆ ಹಲವರು ಹಾಜರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker