ತಿಪಟೂರು : ಭಾರತದ ದೇಶದ ರಕ್ಷಣೆ ಹಾಗೂ ರಾಜ್ಯದ ಸರ್ವತೋಮುಖ ಅಭಿವೃದ್ದಿಗಾಗಿ ಭಾಜಪಗೆ ಮತದಾರರು ಮತ ನೀಡುವ ಮೂಲಕ ಮತ್ತುಷ್ಟು ಶಕ್ತಿಯನ್ನು ನೀಡಬೇಕೆಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದರು.
ತಿಪಟೂರು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಸಲುವಾಗಿ ನಗರದ ಕೆಂಪಮ್ಮ ದೇವಿ ದೇವಾಸ್ಥಾನದಿಂದ ತಾಲ್ಲೂಕು ಆಡಳಿತ ಸೌಧದವರೆಗೆ ಸಹಸ್ರಾರು ಕಾರ್ಯಕರ್ತರೊಂದಿಗೆ ರೋಡ್ ಶೋ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಸವರಾಜು ಬೋಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಯಾವುದೇ ಜಾತಿ ಧರ್ಮ ಬೇಧವಿಲ್ಲದೆ ಸರ್ವರಿಗೂ ಸಾಮಾಜಿಕ ನ್ಯಾಯದಡಿಯಲ್ಲಿ ಎಲ್ಲರಿಗೂ ಸಹ ಅನುಕೂಲವನ್ನು ಮಾಡಿದ್ದು, ನಮ್ಮ ತಾಲ್ಲೂಕಿನಲ್ಲಿಯೂ ಹಲವಾರು ನೀರಾವರಿ ಯೋಜನೆಗಳು, ರಸ್ತೆಗಳು ನೂತನ ಕಾಮಗಾರಿಗಳನ್ನು ಮಾಡಲು ಅವಕಾಶವನ್ನು ಕಲ್ಪಿಸಿ ನನಗೆ ಸಚಿವರಾಗಿ ಕೆಲಸ ಮಾಡಲು ಸಹ ಅವಕಾಶ ನೀಡಿತ್ತಿದ್ದು ಮತ್ತೊಮ್ಮೆ ತಾಲ್ಲೂಕಿನ ಸೇವೆ ಮಾಡಲು ತಾವುಗಳು ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿ ಕೇಂದ್ರ ಆರೋಗ್ಯ ಸಚಿವ ಮನ್ಸಕ್ ಮಾಂಡವಿಯಾ ಹಾಗೂ ಕಾನೂನು ಸಚಿವ ಜೆಸಿ ಮಾಧುಸ್ವಾಮಿ, ಲೋಕಸಭಾ ಸದಸ್ಯ ಬಸವರಾಜು ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿ ಹಾಗೂ ಸಹಸ್ರಾರು ಕಾರ್ಯಕರ್ತರೋಂದಿಗೆ ನಾಮಪತ್ರವನ್ನು ಸಲ್ಲಿಸಿದರು.
ರೋಡ್ ಶೋ ವೇಳೆ ಬಿಜೆಪಿಯ ಬಾವುಟಕ್ಕಿಂತ ಕೇಸರಿ ಶಾಲುಗಳ ಆರ್ಭಟ ಹೆಚ್ಚಾಗಿತ್ತು .