1.5 ಕೆ.ಜಿ. ಮಗುವಿನ ಯಶಸ್ವಿ ತೆರೆದ ಹೃದಯ ಶಸ್ತ್ರಚಿಕಿತ್ಸೆ : ಶ್ರೀಸಿದ್ದಾರ್ಥ ಅಡ್ವಾನ್ಸ್ ಹಾರ್ಟ್ ಸೆಂಟರ್ ವೈದ್ಯರ ಸಾಧನೆ
ತುಮಕೂರು : ಜನ್ಮಜಾತ ಹೃದ್ರೋಗಕ್ಕೆ ತುತ್ತಾಗಿ, ಉಸಿರಾಟದ ತೊಂದರೆ ಅನುಭವಿಸುತಿದ್ದ ಸುಮಾರು 1.5 ಕೆ.ಜಿ.ತೂಗುವ ಹೆಣ್ಣು ಮಗುವೊಂದಕ್ಕೆ ತೆರೆದ ಹೃದಯದ ಶಸ್ತ್ರಚಿಕಿತ್ಸೆ, ಹೃದಯದ ತೊಂದರೆ ನಿವಾರಿಸಿರುವ ಘಟನೆ ತುಮಕೂರಿನ ಶ್ರೀಸಿದ್ದಾರ್ಥ ಅಡ್ವಾನ್ ಹಾರ್ಟ್ ಸೆಂಟರ್‌ನಲ್ಲಿ ನಡೆದಿದೆ.
ಇಡೀ ಭಾರತದಲ್ಲಿಯೇ ಇದೊಂದು ವಿಶೇಷ ಶಸ್ತ್ರಚಿಕಿತ್ಸೆಯಾಗಿದೆ.ಇದುವರೆಗು ದೇಶದ ಪ್ರತಿಷ್ಠಿತ ಹೃದ್ರೋಗ ಆಸ್ಪತ್ರೆಗಳು, 1.5ಕೆಜಿ ತೂಗುವ ಹಸುಳೆಯ ಹೃದಯದ ಶಸ್ತ್ರಚಿಕಿತ್ಸೆ ನಡೆಸಿ,ಯಶಸ್ವಿಯಾದ ಉದಾಹರಣೆಯಿಲ್ಲ. ಆದರೆ ತುಮಕೂರಿನ ಶ್ರೀಸಿದ್ದಾರ್ಥ ಅಡ್ವಾನ್ಸ್ ಹಾರ್ಟ್ ಸೆಂಟರ್ ಛಾಯಾ ಮಕ್ಕಳ ಹೃದ್ರೋಗ ಸೆಂಟರ್‌ನ ನುರಿತ ತಜ್ಞ ವೈದ್ಯರು, ಸಿಬ್ಬಂದಿಗಳು ಈ ಕೆಲಸವನ್ನು ಮಾಡಿ, ಮಗುವನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ತುಮಕೂರು ಜಿಲ್ಲೆ ಕೆ.ಬಿ.ಕ್ರಾಸ್‌ನ ಆಟೋ ಡ್ರೈವರ್ ಒಬ್ಬರ ಪತ್ನಿಗೆ ಸತತ ನಾಲ್ಕು ಗರ್ಭಪಾತದ ನಂತರ, ಐದನೆಯದಾಗಿ ಹೆಣ್ಣು ಮಗು, ಅವಧಿಗೆ ಮುನ್ನವೇ ಜನಿಸಿದ್ದು,ಜನಿಸಿದ ಎರಡು ಮೂರು ದಿನಗಳ ನಂತರ ಮಗುವಿಗೆ ಉಸಿರಾಟದ ತೊಂದರೆ ಇರುವುದು ಕಂಡ ಬಂದ ಹಿನ್ನೆಲೆಯಲ್ಲಿ ಪ್ರಯೋಗಾಲಯದ ಪರೀಕ್ಷೆಗೆ ಒಳಪಡಿಸಿದಾಗ ಮಗುವಿಗೆ ಹೃದಯದ ಕವಾಟುಗಳು ರಿವರ್ಸ ಆಗಿ ಕೆಲಸ ಮಾಡುತ್ತಿರುವುದು ಪತ್ತೆಯಾಗಿದ್ದು, ತಕ್ಷಣವೇ ಶಸ್ತ್ರಚಿಕಿತ್ಸೆ ನಡೆಸದಿದ್ದರೆ ಮಗುವಿನ ಪ್ರಾಣಕ್ಕೆ ಅಪಾಯ ಇರುವ ಹಿನ್ನೆಲೆಯಲ್ಲಿ ತಂದೆ, ತಾಯಿಗಳು ಶ್ರೀಸಿದ್ದಾರ್ಥ ಹಾರ್ಟ್ಸೆಂಟರ್‌ನ ಡಾ.ತಮೀಮ್ ಅಹಮದ್ ಅವರ ಬಳಿ ಬಂದು ಮಗುವನ್ನು ತೋರಿಸಿದ್ದು,ಮಗುವನ್ನು ಕೂಲಂಕಷವಾಗಿ ಪರಿಶೀಲಿಸಿದ ಶ್ರೀಸಿದ್ದಾರ್ಥ ಅಡ್ವಾನ್ಸ್ ಹಾರ್ಟ್ಸೆಂಟರ್‌ನ ತಮ್ಮೀಮ್ ಅಹಮದ್ ಮತ್ತು ತಂಡ ನೀಲಿಬಣ್ಣಕ್ಕೆ ತಿರುಗಿದ್ದ ಮಗುವನ್ನು 10 ದಿನಗಳ ಕಾಲ ನೀಗಾ ಘಟಕದಲ್ಲಿ ಇರಿಸಿ,ಹೃದ್ರೋಗ ವಿಭಾಗದ ಹಿರಿಯ ಶಸ್ತçಚಕಿತ್ಸಾ ತಜ್ಞರೆನ್ನೆಲ್ಲಾ ಸಂಪರ್ಕಿಸಿ, ಕೊನೆಗೆ ಏಪ್ರಿಲ್ 11 ರಂದು ಸುಮಾರು 5 ಗಂಟೆಗಳಿಗೂ ಹೆಚ್ಚು ಕಾಲ ಮಗುವಿನ ತೆರದ ಹೃದಯದ ಶಸ್ತ್ರಚಿಕಿತ್ಸೆ ನಡೆಸಿದ್ದು, ಪ್ರಸ್ತುತ ಮಗು ಐಸಿಯುನಲ್ಲಿದ್ದು ಚೇತರಿಸಿಕೊಳ್ಳುತ್ತಿದೆ.ಹಳದಿಯಾಗಿದ್ದ ಮಗುವಿನ ಬಣ್ಣ ಪಿಂಕ್‌ನತ್ತ ತಿರುಗುತ್ತಿದ್ದು, ನನ್ನ ವೃತ್ತಿ ಜೀವನದಲ್ಲಿಯೇ ಇದುವರೆಗಿನ ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಎಂದು ಡಾ.ತಮೀಮ್ ಅಹಮದ್ ನುಡಿದರು.
ಸಿದ್ಧಾರ್ಥ ಅಡ್ವಾನ್ಸ್÷್ಡ ಹಾರ್ಟ್ಸೆಂಟರ್’ನ ಮೇಲ್ವಿಚಾರಕರಾದ ಹಾಗೂ “ಕಾರ್ಡಿಯಾಕ್ ಫ್ರಾಂಟಿಡಾ” ಸಂಸ್ಥೆಯ ನಿರ್ದೇಶಕ ಡಾ.ತಮೀಮ್‌ಅಹಮ್ಮದ್ ನೇತೃತ್ವದಲ್ಲಿ ಡಾ.ಅಮೀತ್ ಲಾಲ್,ಡಾ.ತಹೂರ್, ಡಾ.ಸುರೇಶ್, ಡಾ.ಶ್ರೀನಿವಾಸ್, ಡಾ.ಮಸ್ತಾನ್, ವಿವೇಕ್,ಕ್ರಿಸ್ಟೀನಾ ಹಾಗೂ ತಾಂತ್ರಿಕ ಸಿಬ್ಬಂದಿಗಳನ್ನು ಒಳಗೊಂಡ ತಂಡ ಸರ್ವಸನ್ನದ್ಧವಾಗಿ ಕೆಲಸ ಮಾಡುತ್ತಿದೆ ಎಂದು ಹಾರ್ಟ್ ಸೆಂಟರ್‌ನ ಸಿಇಓ ಹಾಗೂ ಪ್ರಾಂಶುಪಾಲರಾದ ಡಾ.ಪ್ರಭಾಕರ್ ವಿವರಿಸಿದರು.
ಭಾರತದಿಂದ ವಿದೇಶಕ್ಕೆ ಹೋಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಬದಲಾಗಿ ತುಮಕೂರಿನಂತ ಪ್ರದೇಶದಲ್ಲಿಯೇ ಅಂತಾರಾಷ್ಟ್ರೀಯ ಮಟ್ಟದ ವೈದ್ಯಕೀಯ ಸೌಲಭ್ಯ, ಆಧುನಿಕ ಉಪಕರಣಗಳ ಅಳವಡಿಕೆ,ನುರಿತ ತಜ್ಞ ವೈದ್ಯರತಂಡ ತುಮಕೂರಿನಂತಹ ಪ್ರದೇಶದಲ್ಲಿ ಇದ್ದು ಅತೀ ಸೂಕ್ಷ್ಮ ರೀತಿಯ ಹೃದಯ ಶಸ್ತ್ರಚಿಕಿತ್ಸೆಗಳನ್ನು ಇಲ್ಲಿ ಯಶಸ್ವಿಯಾಗಿ ಮಾಡಲಾಗುತ್ತಿದೆ ಎಂಬುವುದನ್ನು ‘ಕಾರ್ಡಿಯಾಕ್ ಫ್ರಾಂಟಿಡಾ ಹಾಗೂ ಸಿದ್ಧಾರ್ಥ ಹಾರ್ಟ್ ಸೆಂಟರ್’ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರತಂಡ ಸಾಬೀತು ಪಡಿಸಿದೆ ಎಂದು ಡಾ. ಪ್ರಭಾಕರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಾಹೇ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ.ಕೆ.ಬಿ.ಲಿಂಗೇಗೌಡ,ರಿಜಿಸ್ಟಾçರ್ ಡಾ.ಎಂ.ಝೆಡ್ ಕುರಿಯನ್, ಡಾ.ಅಶೋಕ,ಹೆಣ್ಣು ಶಿಶುವಿನ ಪೋಷಕರಾದ ಮಲ್ಲಿಕಾರ್ಜುನ ಸ್ವಾಮಿ ಭಾಗಿಯಾಗಿದ್ದರು.