ಕೊರಟಗೆರೆ : ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಏ.19 ರ ಬುಧವಾರ ರಂದು ನಾಮ ಪತ್ರ ಸಲ್ಲಿಸುವುದಾಗಿ ಶಾಸಕ ಮತ್ತು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ತಿಳಿಸಿದರು.
ಅವರು ಪಟ್ಟಣದ ರಾಜೀವ ಭವನದಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಮೇ. 10 ರಂದು ನಡೆಯುವ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಚುನಾವ ಣೆಗೆ ಏ.19 ರ ಬುದವಾರ ಬೆಳಿಗ್ಗೆ 10 ಗಂಟೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸುತ್ತಿದ್ದೇನೆ, ಈ ನಾಮ ಪತ್ರ ಸಲ್ಲಿಕೆಗೆ ಬೆಂಬಲವಾಗಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮಹಿಳಾ ಕಾರ್ಯಕರ್ತರು, ಯುವಕರು, ಮುಖಂಡರುಗಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ, ಇವರೊಂದಿಗೆ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಮತದಾರರು, ತಾಯಂದಿರು, ಸಾರ್ವಜನಿಕರು, ಯುವಕ ಸ್ನೇಹಿತರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಕ್ತಿ ತುಂಬುವಂತೆ ಮನವಿ ಮಾಡಿದರು, ನಾಮ ಪತ್ರ ಸಲ್ಲಿಕೆಯಲ್ಲಿ ಸಾವಿರಾರು ಬೆಂಬಲಿಗರೊಂದಿಗೆ ಪಟ್ಟಣದ ಕೆ.ಎಸ್.ಆರ್.ಟಿ,ಸಿ ಬಸ್ ನಿಲ್ದಾಣದಿಂದ ತಾಲೂಕು ಕಛೇರಿಯವರೆಗೆ ಬೃಹತ್ ಮೆರವಣಿಗೆಯನ್ನು ಮಾಡಲಾಗುವುದು ಈ ಕಾರ್ಯಕ್ರಮಕ್ಕೆ ಎಲ್ಲರೂ ಭಾಗವಹಿಸುವಂತೆ ಕೋರಿದರು.
ಕಾಂಗ್ರೆಸ್ ಪಕ್ಷದ ರಾಷ್ಟಿçÃಯ ಅಧ್ಯಕ್ಷ ಮಲ್ಲಕಾರ್ಜುನ ಖರ್ಗೆ, ಅಧಿನಾಯಕಿ ಸೊನಿಯಾಗಾಂಧಿ, ನಾಯಕರಾದ ರಾಹುಲ್‌ಗಾಂಧಿ ಹಾಗೂ ನಮ್ಮ ಚುನಾವಣಾ ಸಮಿತಿ ಸದಸ್ಯರುಗಳು ನನ್ನನ್ನು ಕೊರಟಗೆರೆ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಮಾಡಿದ್ದಕ್ಕಾಗಿ ಅವರಿಗೆ ಧನ್ಯವಾದಗಳನ್ನು ತಿಳಿಸಿದರು. ವಿಷೇಶವಾಗಿ ಈ ಚುನಾವಣೆಯಲ್ಲಿ ನಾನು ನಾಮಪತ್ರ ಸಲ್ಲಿಸಲು ನೀಡಬೇಕಾದ ಠೇವಣಿ ಮೊತ್ತಕ್ಕೆ ಮತ್ತು ಚುನಾವಣಾ ಖರ್ಚಿಗೆ ಕ್ಷೇತ್ರದ ರೈತರು, ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹಣ ನೀಡುವ ಮೂಲಕ ದೇಣಿಗೆ ನೀಡಿ ನನ್ನನ್ನು ಆಶೀರ್ವಾದಿಸಿದ್ದಾರೆ, ಅವರ ಈ ಔದಾರ್ಯಕ್ಕೆ ನಾನು ಹೃದಯ ತುಂಬಿ ವಂದನೆಗಳನ್ನು ಸಲ್ಲಿಸುತ್ತಿದ್ದೆನೆ, ಕೊರಟಗೆರೆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃಧ್ದಿ ಕೆಲಸಗಳನ್ನು ಮಾಡಿದ್ದೇನೆ, ಜನರಿಗೆ ಎಲ್ಲಾ ರಂಗದಲ್ಲೂ ಸೇವೆ ಸಲ್ಲಿಸಿದ್ದೇನೆ, ಕರೋನಾ ದಂತಹ ಬೀಕರ ಸಂದರ್ಭದಲ್ಲಿ ಜನರ ಜೊತೆಗಿದ್ದು ಜೀವನ ಹಂಚಿಕೊಂಡಿದ್ದೇನೆ, ವೈದ್ಯರನ್ನು ಕಳುಹಿಸಿ ಕಷ್ಠಕ್ಕೆ ನೆರವಾಗಿದ್ದೇನೆ, ಈ 5 ವರ್ಷಗಳಲ್ಲಿ ಕೊರಟಗೆರ ಜನತೆಯ ಮನಸ್ಸಿನಲ್ಲಿದ್ದು ಮನೆಯ ಮಗನಾಗಿ ದುಡ್ಡಿದಿದ್ದೇನೆ, ಈ ಎಲ್ಲಾ ಸೇವೆಗಳಿಂದ ಈ ಬಾರಿಯೂ ಚುನಾವಣೆಯಲ್ಲಿ ಗೆದ್ದೆ ಗೆಲ್ಲುವ ವಿಶ್ವಾಸದಿಂದ ಇದ್ದೇನೆ, ಆದ್ದರಿಂದ ಏ.19 ರ ಬುಧವಾರ ನನ್ನ ನಾಮ ಪತ್ರ ಸಲ್ಲಿಕೆಯಲ್ಲಿ ದಾಖಲೆಯ ಸಾವಿರಾರು ಬೆಂಬಲಿಗರು, ಸ್ನೇಹಿತರು, ಹಿತೈಷಿಗಳು ಮತ್ತು ಅಭಿಮಾನಿಗಳು ನನ್ನ ಮೇಲೆ ಪ್ರೀತಿ ವಿಶ್ವಾಸ ನಂಬಿಕೆ ಇಟ್ಟು ಆಗಮಿಸುವಂತೆ ಕೋರಿದರು.