ಖಾಸಗಿ ಬಸ್ ಡಿವೈಡರ್‌ಗೆ ಡಿಕ್ಕಿಯಾಗಿ ಇನೋವ ಕಾರಿಗೆ ಗುದ್ದಿದ ಪರಿಣಾಮ ಸ್ಥಳದಲ್ಲಿಯೇ ಮಗು ಸೇರಿ ಐವರ ದುರ್ಮರಣ
ತುಮಕೂರು : ಖಾಸಗಿ ಬಸ್ಸೊಂದು ಡಿವೈಡರ್‌ಗೆ ಡಿಕ್ಕಿಯಾಗಿ ಇನೋವ ಕಾರಿಗೆ ಗುದ್ದಿದ ಪರಿಣಾಮ ಮಗು ಸೇರಿದಂತೆ ಐವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಇಂದು ಮಧ್ಯಾಹ್ನ ಬೆಂಗಳೂರು ತುಮಕೂರು ರಾಷ್ಟಿçÃಯ ಹೆದ್ದಾರಿ ಹಿರೇಹಳ್ಳಿ ಬಳಿ ನಡೆದಿದೆ.
ತುಮಕೂರು ಕಡೆಯಿಂದ ಬೆಂಗಳೂರಿಗೆ ತೆರಳುತಿದ್ದ ಇನೋವಾ ಕಾರಿಗೆ ಬೆಂಗಳೂರು ಕಡೆಯಿಂದ ತುಮಕೂರಿಗೆ ಬರುತ್ತಿದ್ದ ಖಾಸಗಿ ಬಸ್ ಡಿಕ್ಕಿಯಾದ ಪರಿಣಾಮ ಈ ಘಟನೆ ನಡೆದಿದೆ.ಮೃತರನ್ನು ಚಳ್ಳಕೆರೆ ಮೂಲದ ಬೆಂಗಳೂರಿನಲ್ಲಿ ನೆಲೆಸಿರುವ ಗೋವಿಂದನಾಯ್ಕ್,(58) ಅವರ ಪತ್ನಿ ತಿಪ್ಪಮ್ಮ(52) ಹಾಗೂ ಒಂದು ಮಗು ಸೇರಿದಂತೆ ಐವರು ಮೃತಪಟ್ಟಿದ್ದು, ಉಳಿದವರ ಹೆಸರು ಪತ್ತೆಯಾಗಿಲ್ಲ.
ಕಾರ್ಯನಿಮಿತ್ತ ಚಳ್ಳಕೆರೆಗೆ ಬಂದಿದ್ದ ಗೋವಿಂದನಾಯ್ಕ ದಂಪತಿಗಳು ಬೆಂಗಳೂರಿಗೆ ಮರಳುವಾಗ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಾಪೂರವಾಡ್, ಎಎಸ್‌ಪಿ ಮರಿಯಪ್ಪ, ನಗರ ಡಿವೈಎಸ್‌ಪಿ ಶ್ರೀನಿವಾಸ್ ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.