ಮಧುಗಿರಿ : ನಾನು ಕೆ.ಎನ್. ರಾಜಣ್ಣನವರನ್ನು ಸೋಲಿಸೋಕೆ ಕ್ಷೇತ್ರಕ್ಕೆ ಬಂದಿಲ್ಲ. ಕ್ಷೇತ್ರದಲ್ಲಿ ಸ್ಥಳೀಯ ಅಭ್ಯರ್ಥಿಯಾಗಿ ಗೆಲುವು ಸಾಧಿಸಲು ಬಂದಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ಎಲ್.ಸಿ. ನಾಗರಾಜು ತಿಳಿಸಿದರು.
ಪಟ್ಟಣದ ಕುಂಚಿಟಿಗ, ಒಕ್ಕಲಿಗರ ಸಮುದಾಯ ಭವನದಲ್ಲಿ ಗುರುವಾರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇಲ್ಲಿ ನಮಗೆ ಪ್ರಬಲ ಎದುರಾಳಿ ಎಂಬ ಪ್ರಶ್ನೆ ಬರಲ್ಲ. ರಾಜಣ್ಣ, ವೀರಭದ್ರಯ್ಯ ಇಬ್ಬರೂ ನಮಗೆ ಸಮಾನ ಸ್ನೇಹಿತರು ಇವರ ವಿರುದ್ದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ನಮ್ಮ ಬಿಜೆಪಿ ಪಕ್ಷ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದರು.
ಸಂಸದ ಜಿ. ಎಸ್ ಬಸವರಾಜ್ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್ ರಾಜಣ್ಣನವರಿಗೆ ಬೆಂಬಲ ಕೊಡಿ ಎಂಬ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಭಾರತೀಯ ಜನತಾ ಪಕ್ಷ ಶಿಸ್ತಿನ ಪಕ್ಷ. ಹಿಂದೆ ನಡೆದು ಹೋಗಿರುವ ಕಥೆಗಳು ನನಗೆ ಗೊತ್ತಿಲ್ಲ.
ಈ ಬಾರಿ ಬಿಜೆಪಿ ಪಕ್ಷವನ್ನು ಮಧುಗಿರಿ ಕ್ಷೇತ್ರದಲ್ಲಿ ಅಧಿಕಾರ ಹಿಡಿಯಲು ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಶ್ರಮಿಸುತ್ತಾರೆ
ಎಲ್ಲಾ ಪಕ್ಷದಲ್ಲಿ ಅಕಾಂಕ್ಷಿಗಳು ಇರೋದು ಸರ್ವೆ ಸಾಮಾನ್ಯ. ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಹನುಮಂತೇಗೌಡರಿಗೆ ಇನ್ನೂ ವಯಸ್ಸಿದ್ದು, ನಮ್ಮಲ್ಲಿ ಮುಂದೆ ಅವರಿಗೆ ಅವಕಾಶ ಇದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಮಧುಗಿರಿ ಜಿಲ್ಲಾ ಕೇಂದ್ರ ಆಗುತ್ತೆ. ಅದನ್ನ ತಪ್ಪಿಸೋಕೆ ಆಗಲ್ಲ ಎಂದ ಅವರು ಐಎಂಎ ಕೇಸ್ ವಿಚಾರದ ಬಗ್ಗೆ ಪ್ರಸ್ಥಾಪಿಸಿದಾಗ ಐಎಂಎ ಕೇಸ್ ನ್ಯಾಯಲಯದಲ್ಲಿದೆ, ನ್ಯಾಯಲಯದಲ್ಲಿ ಕೇಸ್ ಇದ್ರೆ ಅದನ್ನ ಮುಚ್ಚಿ ಹಾಕೋಕೆ ಆಗಲ್ಲ ಎಂದರು.
ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾದ ಬಿಕೆ ಮಂಜುನಾಥ್ ,ಉಪಾಧ್ಯಕ್ಷರಾದ ಬಿ ಎನ್ ಲಕ್ಷ್ಮಿಪತಿ ,ಮಂಡಲ ಅಧ್ಯಕ್ಷರಾದ ನರಸಿಂಹಮೂರ್ತಿ, ಕಾರ್ಯದರ್ಶಿ ನಾಗೇಂದ್ರ ಪ್ರಕಾಶ್, ಸುರೇಶ್, ಶಿವಕುಮಾರ್ ಉಪ್ಪಾರಹಳ್ಳಿ, ಟಿ ಗೋವಿಂದರಾಜು ಬಡವನಹಳ್ಳಿ ನಾಗರಾಜಪ್ಪ ಚಿಕ್ಕ ಓಬಳರೆಡ್ಡಿ ಹಾಗೂ ಬಿಜೆಪಿ ಪಕ್ಷದ ಮುಖಂಡರು ಹಾಜರಿದ್ದರು.