ಜಿಲ್ಲೆತಿಪಟೂರುತುಮಕೂರು

ಜೀವನದಲ್ಲಿ ಆಚಾರ ವಿಚಾರಗಳನ್ನು ರೂಢಿಸಿಕೊಂಡಾಗ ಮಾತ್ರ ನೆಮ್ಮದಿ ಸಾಧ್ಯ : ಚಂದ್ರಶೇಖರನಾಥ ಸ್ವಾಮೀಜಿ

ವಿಜೃಂಭಣೆಯಿಂದ ನೆರವೇರಿದ ಚೌಡೇಶ್ವರಿ ದೇವಿ ಜಾತ್ರಾಮಹೋತ್ಸವ

ತಿಪಟೂರು : ಪೂರ್ವಜರು ಜಾತ್ರೆ, ಉತ್ಸವ, ಹಬ್ಬ ಮೊದಲಾದ ಆಚರಣೆಗಳ ಮೂಲಕ ಸಂಘ ಜೀವನದ ಸಾಮರಸ್ಯಗಳನ್ನು, ಬಂಧು ಬಾಂದವರ ಬಾಂಧವ್ಯದ ಜೊತೆಗೆ ನೆಮ್ಮದಿಯನ್ನು ಕಾಣುತ್ತಿದ್ದರು ಎಂದು ಆದಿಚುಂಚನಗಿರಿ ಶಾಖಾ ಮಠ ದಸರೀಘಟ್ಟದ ಚೌಡೇಶ್ವರಿ ದೇವಿ ದೇವಾಲಯದ ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಆದಿಚುಂಚನಗಿರಿ ಶಾಖಾ ಮಠ ದಸರೀಘಟ್ಟದ ಚೌಡೇಶ್ವರಿ ದೇವಿ ದೇವಾಲಯ ಆವರಣದಲ್ಲಿ ಬುಧವಾರ ಚೌಡೇಶ್ವರಿ ದೇವಿಯ ಜಾತ್ರಾಮಹೋತ್ಸವದ ಅಂಗವಾಗಿ ಶ್ರೀಮಠ ಮತ್ತು ದಸರೀಘಟ್ಟ ಗ್ರಾಮಸ್ಥರು ಸಹಯೋಗದಲ್ಲಿ ನಡೆದ ರಥೋತ್ಸವಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಸಂಸಾರದ ಸಾಗರದಲ್ಲಿ ಕಷ್ಟಗಳು ನಿವಾರಣೆಯಾಗಲು ದೈವೀಭಕ್ತಿ ಅಗತ್ಯ. ಸುಖ ಹಾಗೂ ದುಃಖಗಳು ಬಂದಾಗ ದೇವರ ಸ್ಮರಣೆ ಮಾಡಬೇಕು. ಜಗತ್ತಿನ ಸೃಷ್ಠಿಕರ್ತ ಪರಮಾತ್ಮನಾದ್ದರಿಂದ ಮನುಷ್ಯನಾದವನು ಧರ್ಮದಾನಗಳಿಂದ ಬದುಕಬೇಕು. ಮನುಷ್ಯನಲ್ಲಿ ಕಷ್ಟಕಾರ್ಪಣ್ಯಗಳು ದೂರವಾಗಲು ಭಗವಂತನ ನಾಮಸ್ಮರಣೆ ಅತಿಮುಖ್ಯವಾಗಿದೆ. ಹಿರಿಯರಲ್ಲಿ ಗೌರವ, ಗುರುಗಳಲ್ಲಿ ಭಕ್ತಿ ಭಾವಗಳನ್ನು ಬೆಳೆಸಿಕೊಂಡು ಇಳಿವಯಸ್ಸಿನ ತಂದೆ-ತಾಯಿಗಳಿಗೆ ಆಸರೆಯಾಗಿರುತ್ತಿದ್ದರು. ನಾಗರೀಕತೆ ಬೆಳೆದಂತೆ ಜನಶೈಲಿಗಳು ಬದಲಾಗಿ ಕುಟುಂಬಗಳು ಒಡೆದು ನೆಮ್ಮದಿಯನ್ನು ಕಳೆದುಕೊಂಡು ನರಳಾಡುತ್ತಿದ್ದಾರೆ. ಮಾನವೀಯತೆ ಮತ್ತು ಜೀವನ ಮೌಲ್ಯಗಳು ಮಾಯವಾಗುತ್ತಿವೆ. ಆದುದರಿಂದ ನಾವೆಲ್ಲರೂ ದೇವರು, ಧರ್ಮ, ಆಚಾರ, ನೈತಿಕತೆಗಳಲ್ಲಿ ನಂಬಿಕೆಯಿರಿಸಿ, ಪೂಜೆ, ಪ್ರಾರ್ಥನೆಗಳಂತಹ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಚ್ಛಾರಿತ್ರö್ಯವುಳ್ಳವರಾಗಬೇಕು ಎಂದರು.
ರಥೋತ್ಸವಕ್ಕೂ ಮುಮಚಿತವಾಗಿ ಚೌಡೇಶ್ವರಿ ದೇವಿಯವರನ್ನು ಹೂವಿನ ಮಂಟಪದಲ್ಲಿ ಗ್ರಾಮದ ರಾಜಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಮಾಡಿದರು.
ಈ ಸಂದರ್ಭದಲ್ಲಿ ಹಾಸನ ಶಾಖಾಮಠದ ಶಂಭುನಾಥ ಸ್ವಾಮೀಜಿ, ಶೃಂಗೇರಿ ಶಾಖಾಮಠದ ಗುಣನಾಥ ಸ್ವಾಮೀಜಿ, ಚಿಕ್ಕಬಳ್ಳಾಪುರ ಶಾಖಾಮಠದ ಮಂಗಳನಾಥ ಸ್ವಾಮೀಜಿ, ಕಬ್ಬಳ್ಳಿ ಶಾಖಾಮಠದ ಶಿವಪುತ್ರನಾಥ ಸ್ವಾಮೀಜಿ, ಬೆಂಗಳೂರಿನ ಅರುಣ್ ಗುರೂಜಿ ಸೇರಿದಂತೆ ದಸರಿಘಟ್ಟ ಗ್ರಾಮಸ್ಥರು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker