ಕೊರಟಗೆರೆ : ಡಬಲ್ ಇಂಜಿನ್ ಸರ್ಕಾರದಲ್ಲಿ ನಡೆದಾಡುವ ದೇವರು ಸಿದ್ದಗಂಗಾ ಶ್ರೀ ಶಿವಕುಮಾರಸ್ವಾಮೀಜಿರವರಿಗೆ ಭಾರತ ರತ್ನ ನೀಡಲು ಸಾಧ್ಯವಾಗಲ್ಲಿಲ್ಲ ಕೇವಲ ಮಠಕ್ಕೆ ಭೇಟಿ ನೀಡಿ ಆಶಾಡ ಭೂತಿ ಪ್ರದಶಿಸುವ ಬಿಜೆಪಿ ಪಕ್ಷ ರಾಜ್ಯದ ವೀರಶೈವರು ಬಿಜೆಪಿ ಪಕ್ಷದ ಪರ ಎಂದು ಹೇಳಿಕೊಳ್ಳುವುದು ಸರಿಯೆ ಎಂದು ಮಾಜಿ ಉಪ ಮುಖ್ಯ ಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಅವರು ಕೊರಟಗೆರೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಡಾ.ಜಿ.ಪರಮೇಶ್ವರ್ ಬೆಂಬಲಿಗರ ವೀರಶೈವ ಲಿಂಗಾಯಿತ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿ ವೀರಶೈವರು ಯಾರ ಪರ ಎಂಬುದು ಈ ಸಮಾವೇಶ ನೋಡಿದವರಿಗೆ ತಿಳಿಯುತ್ತದೆ ನಮ್ಮ ಕುಟುಂಬ ನಮ್ಮ ತಂದೆಯವರ ಕಾಲದಿಂದಲೂ ಸಿದ್ದಗಂಗಾ ಶ್ರೀಗಳ ಭಕ್ತರಾಗಿದ್ದು ಶ್ರೀಗಳು ನನ್ನ ತಲೆಮೇಲೆ ಕೈ ಇಟ್ಟು ಒಳ್ಳೇಯದಾಗಲಿ ಎಂದು ಆಶ್ರೀರ್ವದಿಸಿದ್ದಾರೆ ಎಂದು ತಿಳಿಸಿದ ಡಾ.ಜಿ.ಪರಮೇಶ್ವರ್ ಮೇ.10 ರಂದು ನಡೆಯುವ ಚುನಾವಣೆ ದೇಶದ ಭವಿಷ್ಯ ನಿರ್ದರಿಸುವ ಮಹತ್ವದ ಚುನಾವಣೆಯಾಗಿದ್ದು, ಕಳೆದ 4 ವರ್ಷಗಳ ಹಿಂದೆ ಪ್ರಜಾಪ್ರಭುತ್ವದಲ್ಲಿ ಕಾನೂನು ಬಾಹೀರವಾಗಿ 17 ಮಂದಿ ಶಾಸಕರನ್ನು ಅಪಹರಿಸಿ ಸರ್ಕಾರ ಮಾಡಿದ ಅನೈತಿಕ ಸರ್ಕಾರ ರಾಜ್ಯ ಅಭಿವೃದ್ದಿಗೆ ಯಾವಯೋಜನೆಗೂ ಹಣ ಬಿಡುಗಡೆ ಮಾಡಲಿಲ್ಲ ಕೇವಲ ಜನಸಮಾನ್ಯರ ವಸ್ತಗಳ ಬೆಲೆ ಏರಿಕೆ ಮಾಡಿ ಬಡಜನತೆಯನ್ನು ಕಷ್ಟಕ್ಕೆ ನೂಕಿದ ಸರ್ಕಾರ ಎಂದು ಕಿಡಿಕಾರಿದ ಅವರು ಕಾಂಗ್ರೆಸ್ ಸಮಿಶ್ರ ಸರ್ಕಾರದಲ್ಲಿ ರೈತರ ಹಿತಕ್ಕಾಗಿ ಮುಂಜೂರುಮಾಡಿದ್ದ ಎತ್ತಿನಹೊಳ್ಳೆ ನೀರಾವರಿ ಯೋಜನೆಗೆ, ಮಹಾದಾಯಿ ಯೋಜನೆ ಹಾಗೂ ಮೇಕೆದಾಟು ಯೋಜನೆಗೆ ಹಣ ಬಿಡುಗಡೆ ಮಾಡದೆ ಯೋಜನೆಗಳು ನೆನೆಗುದಿಗೆ ಬೀಳುವಂತೆ ಮಾಡಿದ ಸರ್ಕಾರ ಎಂದರು.
ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯಿತ ಮುಖಂಡರುಗಳಾದ ಆರ್.ಎಸ್.ರಾಜಣ್ಣ, ರುದ್ರಪ್ರಸಾದ್, ಎಲ್.ರಾಜಣ್ಣ, ತೀತಾ ಮಂಜುನಾಥ್, ಕೋಳಾಲ ಗಿರೀಶ್, ಕೆ.ಬಿ.ಲೋಕೇಶ್, ಉಮೇಶ್, ಪ್ರತಾಪ್‌ರುದ್ರ, ಉಮಾಮಹೇಶ್, ಪರ್ವತಯ್ಯ, ಸೋಮಣ್ಣ, ಕುಮಾರಸ್ವಾಮಿ, ಈಶಪ್ರಸಾದ್, ವೆಂಕಟೇಶಮೂರ್ತಿ, ಚಂದ್ರಣ್ಣ, ಮಂಜುಳಾ ಆರಾದ್ಯ, ಜಿ.ಪಂ.ಮಾಜಿ ಸದಸ್ಯ ದ್ರಾಕ್ಷಾಯಿಣಿರಾಜಣ್ಣ, ಚಂದ್ರಕಳಾಲೋಕೇಶ್, ರೇಖಾಶಂಕರ್, ನಿಖಲ್‌ಮೌರ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್‌ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಅಶ್ವತ್ಥನಾರಾಯಣ್, ಜಿ.ಪಂ.ಮಾಜಿ ಸದಸ್ಯ ಪ್ರಸನ್ನಕುಮಾರ್, ಪ.ಪಂ.ಸದಸ್ಯ ಎ.ಡಿ.ಬಲರಾಮಯ್ಯ, ನಗರಸಭಾ ಮಾಜಿ ಉಪಾದ್ಯಕ್ಷ ವಾಲೇಚಂದ್ರಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.