ಪಾವಗಡ : ಕ್ಷೇತ್ರದ ಅಭಿವೃದ್ದಿ ಕಾರ್ಯಗಳಿಗೆ ಜೆಡಿಎಸ್ ನಾಯಕರು ಅಡ್ಡಿ ಪಡಿಸುತ್ತಾ ಬಂದರೂ ತಾಲೂಕಿಗೆ ಶಾಶ್ವತ ಯೋಜನೆಗಳನ್ನು ತಂದು ಜನರಿಗೆ ಅನುಕೂಲ ಮಾಡಿರುವ ತೃಪ್ತಿ ನನಗಿದೆ ಎಂದು ಶಾಸಕ ವೆಂಕಟರಮಣಪ್ಪ ತಿಳಿಸಿದರು.
ಬುಧವಾರ ಪಟ್ಟಣದ ಖಾಸಗಿ ಸಭಾಂಗಣದಲ್ಲಿ ಹಿರಿಯ ವಕೀಲ ಭಗವಂತಪ್ಪ ನೇತೃತ್ವದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ನೂರಾರು ಮುಖಂಡರ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ತಾಲೂಕಿನ ನಾಗಲಮಡಿಕೆ ಡ್ಯಾಂ, ಕಣಿವೆ ನರಸಿಂಹ ಸ್ವಾಮಿ ದೇವಸ್ಥಾನದ ಬಳಿಯ ವಿದ್ಯಾರ್ಥಿ ನಿಲಯ ಸೇರಿದಂತೆ ಹಲವಾರು ರಸ್ತೆ, ಶಾಲಾ ಕಟ್ಟಡಗಳ ಕಾಮಗಾರಿ ವೇಳೆ ತಾಲೂಕಿನ ಜೆಡಿಎಸ್ ಮಾಜಿ ಶಾಸಕರು ಅಡ್ಡಿ ಪಡಿಸಿದ್ದರೂ ಸ್ಥಳಿಯ ಜನರ ಸಹಕಾರದೊಂದಿಗೆ ಕಾಮಗಾರಿಗಳನ್ನು ಮಾಡಲು ಅನುಕೂಲವಾಗಿತು ಎಂದರು.
ಕೇವಲ ಚುನಾವಣೆ ಸಂದರ್ಬದಲ್ಲಿ ಕ್ಷೇತ್ರದ ಜನರ ಬಗ್ಗೆ ಅನುಕಂಪದ ಮಾತನಾಡುವ ವ್ಯಕ್ತಿಗಳು ಕೋವಿಡ್ ಸಂಕಷ್ಟದಲ್ಲಿ ಯಾವ ಸೇವೆ ಮಾಡಿದ್ದಾರೆ ಎಂದರು. ಅಧಿಕಾರ ಇದ್ದಾಗಲೂ ಇಲ್ಲದಿರುವಾಗಲೂ ಕ್ಷೇತ್ರದ ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ, ಮುಂದೆಯೂ ಜನರ ಸೇವೆಗೆ ಸದಾ ಸಿದ್ದನಿದ್ದೇನೆ ಎಂದರು.
ಹಿರಿಯ ವಕೀಲ ಭಗವಂತಪ್ಪ ಮಾತನಾಡಿ ಕ್ಷೇತ್ರದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಜೆಡಿಎಸ್ ಪಕ್ಷಕ್ಕೆ ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಬೆಂಬಲ ನೀಡಿ ಸೇವೆ ಮಾಡಿದೆ,್ದ ಆದರೆ ಅಲ್ಲಿ ಜಾತಿ, ಬಹುಸಂಖ್ಯೆ ಜನರ ಗುಂಪುಗಾರಿಕೆಗೆ ಮಾನ್ಯತೆ ನೀಡುತ್ತಾ ಬಂದಿದ್ದು ನನ್ನ ಸಾವಿರಾರು ಕಕ್ಷಿದಾರರ ಸಲಹೆ ಮತ್ತು ಸೂಚನೆಯಂತೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇವೆ ಎಂದರು.
ಅಭ್ಯರ್ಥಿ ಹೆಚ್.ವಿ.ವೆಂಕಟೇಶ್ ಮತನಾಡಿ ಜನತೆ ಆಶೀರ್ವಾದ ಮಾಡಿ ಚುನಾವಣೆಯಲ್ಲಿ ಗೆಲ್ಲಿಸಿದರೆ ಕೈಗೊಳ್ಳಲಿರುವ ಅಭಿವೃದ್ದಿ ಕಾರ್ಯಗಳ ಕುರಿತು ತಿಳಿಸಿದರು.
ಇದೇ ವೇಳೆ ತಾಲೂಕಿನ ವಿವಿದ ಗ್ರಾಮಗಳಿಂದ ಆಗಮಿಸಿದ್ದ ಸುಮಾರು 300 ಜನರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಬದಲ್ಲಿ ಮುಖಂಡರಾದ ಶಂಕರರೆಡ್ಡಿ, ಚಿಂತಲರೆಡ್ಡಿ, ಶ್ರೀನಿವಾಸ್, ಪುರಸಭೆ ಸದಸ್ಯರು ಸೇರಿದಂತೆ ಇತರರು ಇದ್ದರು.