ತುಮಕೂರು : ಕಳೆದ 15 ದಿನಗಳಿಂದ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ ಇಂದು ಮುಕ್ತಾಯಗೊಂಡಿದ್ದು, ಕೇಷಿ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗು ರೇಷ್ಮೆ ಇಲಾಖೆ ಕ್ರಮವಾಗಿ ಮೊದಲ ಮೂರು ಪಾರಿತೋಷಕಗಳನ್ನು ಪಡೆದುಕೊಂಡಿವೆ.
ಸರಕಾರದ 19,ಖಾಸಗಿ 05 ಕಂಪನಿಗಳು ತಮ್ಮಮಳಿಗೆ ತರೆದು ವಸ್ತು ಪ್ರದರ್ಶನ ಕ್ಕೆ ಬಂದ ಗ್ರಾಹಕರಿಗೆ ಮಾಹಿತಿ ನೀಡಿದ್ದವು.ಇವುಗಳಲ್ಲಿ ಕೃಷಿ ಇಲಾಖೆ ಪ್ರಥಮ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದ್ವಿತೀಯ, ಹಾಗೂ ರೇಷ್ಮೆ ಇಲಾಖೆ ತೃತೀಯ ಪಾರಿತೋಷಕ ಪಡೆದುಕೊಂಡಿವೆ.ಉಳಿದಂತೆ ಪ್ರಥಮ ಸ್ಥಾನವನ್ನ 12, ದ್ವಿತೀಯ ಬಹುಮಾನವನ್ನು 08 ,ಹಾಗು ತೃತೀಯ ಬಹುಮಾನವನ್ನು 08 ಮಳಿಗೆಗಳು ಪಡೆದುಕೊಂಡಿವೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಸಿದ್ದಲಿಂಗಸ್ವಾಮಿಜೀ ಮಾತನಾಡಿ, 15 ದಿನಗಳ ಕಾಲದ ವಸ್ತು ಪ್ರದರ್ಶನ ಇಂದು ಮುಕ್ತಾಯಗೊಂಡಿದೆ.ನಮ್ಮ ಹಿರಿಯ ಶ್ರೀಗಳ ದೂರದೃಷ್ಟಿಯ ಫಲವಾಗಿ ಈ ವಸ್ತು ಪ್ರದರ್ಶನ ಆರಂಭಗೊಂಡು ಮುಂದುವರೆದುಕೊಂಡು ಬರುತ್ತಿದೆ.
ಕೃಷಿ ಮತ್ತು ಕೈಗಾರಿಕೆ ಎರಡು ದೇಶದ ಕಣ್ಣುಗಳಿದ್ದಂತೆ,ಕೃಷಿಯ ಬಗ್ಗೆಯ ಆಸಕ್ತಿ ಮತ್ತು ಕೃಷಿ ಭೂಮಿ ಎರಡು ಕಡಿಮೆಯಾಗಿರುವ ಕಾಲದಲ್ಲಿಯೂ, ಜನರಿಗೆ ಅಗತ್ಯವಿರುವ ಆಹಾರ ಒದಗಿಸುವ ಕಾರ್ಯ ಮಾಡಲಾಗುತ್ತಿದೆ.
ಮಹಾತ್ಮಗಾಂಧಿ,ವಿಶ್ವೇಶ್ವರಯ್ಯ ನಡುವೆ ದೊಡ್ಡ ಕೈಗಾರಿಕೆಗಳ ಕುರಿತು ತಿಕ್ಕಾಟ ಇತ್ತು.ದೊಡ್ಡ ಕೈಗಾರಿಕೆಗಳ ಮೂಲಕ ಉದ್ಯೋಗ ನೀಡುವ ಕಾರ್ಯ ನಡೆದಿದೆ.ಇದೇ ಮೊದಲ ಬಾರಿಗೆ ನ್ಯಾಯಾಂಗ ಇಲಾಖೆ ಮಳಿಗೆ ತೆರೆದು ಮಾಹಿತಿ ನೀಡಿದ್ದು ವಿಶೇಷ ಎಂದರು.
ಪಾರಿತೋಷಕ ಮತ್ತು ಬಹುಮಾನ ಪಡೆದ ಸರಕಾರಿ ಮತ್ತು ಖಾಸಗಿ ಮಳಿಗೆಗಳ ಮುಖ್ಯಸ್ಥರಿಗೆ ಪಾರಿತೋಷಕ ಮತ್ತು ಬಹುಮಾನ ವಿತರಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ,ಎಲ್ಲಾ ಇಲಾಖೆಗಳ ಸಹಯೋಗದಲ್ಲಿ ಸರಕಾರದ ಯೋಜನೆಗಳ ಮಾಹಿತಿ ನೀಡಿ, ಜನರನ್ನು ಜಾಗೃತಿಗೊಳಿಸಿದ್ದಾರೆ.ಇದಕ್ಕಾಗಿ ಶ್ರೀ ಮಠದ ಆಡಳಿತ ಮಂಡಳಿಗೆ ಹೃಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು
ಪ್ರಾಸ್ತಾವಿಕ ವಾಗಿ ಮಾತನಾಡಿದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಸಮಿತಿಯ ಜಂಟಿ ಕಾರ್ಯದರ್ಶಿ ಕೆಂಬ ರೇಣುಕಯ್ಯ,ಜಿಲ್ಲೆಯ ಕೃಷಿಕರು ಮತ್ತು ಉದ್ದಿಮೆದಾರರಿಗೆ ಅನುಕೂಲವಾಗಲೆಂದು ತ್ರಿವಿಧ ದಾಸೋಹಿ ಡಾ.ಶ್ರೀಶಿವಕುಮಾರ್ ಸ್ವಾಮೀಜಿ ಅವರು ಆರಂಭಿಸಿದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸುತ್ತಾ ಬಂದಿದೆ.ಅಲ್ಲ ಬಹುದೊಡ್ಡ ಮಾಹಿತಿ ಕಣಜವಾಗಿ ಮಾರ್ಪಾಟಾಗಿದೆ.ಸರಕಾರದ ವಿವಿಧ ಇಲಾಖೆಗಳು ಹಾಗು ಖಾಸಗಿಯವರು ಹಾಗು ವಿವಿಧ ವಾಣಿಜ್ಯೋದ್ಯಮಿಗಳು ಮಳಿಗೆ ತೆರದು ಜನರಿಗೆ ಮಾಹಿತಿ ನೀಡುತ್ತಿದ್ಸಾರೆ.ಅಲ್ಲದೆ ನಾಟಕ,ಸುಗಮಸಂಗೀತ, ನೃತ್ಯಗಳ ಮೂಲಕ ಮನರಂಜನೆಯನ್ನು ವ್ಯವಸ್ಥೆ ಮಾಡಲಾಗಿದೆ.ಸರಕಾರದ ಅನುದಾನವಿಲ್ಲದೆ ನಡೆಯುತ್ತಿರುವ ಏಕೈಕ ವಸ್ತು ಪ್ರದರ್ಶನವಾಗಿದೆ ಎಂದರು.
ವೇದಿಕೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ,ತಹಶಿಲ್ದಾರ್ ಸಿದ್ದೇಶ್.ಎಂ, ತುಮಕೂರು ಉಪವಿಭಾಗಾಧಿಕಾರಿ ಹೆಚ್.ಶಿವಪ್ಪ,ಕಾರ್ಯಕ್ರಮದಲ್ಲಿ ಮೈದಾಳ ಗ್ರಾಮಪಂಚಾಯಿತಿ ಅಧ್ಯಕ್ಷೆ ಶ್ರೀ ಮತಿ ಮಾಲಾ ಮಂಜುನಾಥ್,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ನೂರುನ್ನಿಸಾ,ವಸ್ತು ಪ್ರದರ್ಶನ ಸಮಿತಿಯ ಕಾರ್ಯದರ್ಶಿ ಪ್ರೊ. ಗಂಗಾಧರಯ್ಯ,ಜAಟಿ ಕಾರ್ಯದರ್ಶಿ ಶಿವಕುಮಾರ್, ಸಾಂಸ್ಕöÈತಿಕ ಸಮಿತಿಯ ಸಹ ಸಂಚಾಲಕ ಎಂ.ನಂದೀಶ್,ಡಿಐಸಿಯ ಜಂಟಿ ನಿರ್ದೇಶಕ ಪಿ.ನಾಗೇಶ್ ಮತ್ತಿತರರು
ಉಪಸ್ಥಿತರಿದ್ದರು.