ರೈತರ ಉಳಿವಿಗಾಗಿ ಜೆ.ಡಿ.ಎಸ್.ಗೆ ಅಧಿಕಾರ ನೀಡಿ : ಹೆಚ್.ಡಿ.ರೇವಣ್ಣ
ಶೆಟ್ಟಿಗೊಂಡನಹಳ್ಳಿಯಲ್ಲಿ ಶ್ರೀ ಹಳ್ಳಿಕಾರ ಮಠ ಲೋಕಾರ್ಪಣೆ : ಮಠದ ಸರ್ವಾಂಗೀಣ ಅಭಿವೃದ್ದಿಗೆ ನೆರವು
ತುರುವೇಕೆರೆ : ಶ್ರೀ ಹಳ್ಳಿಕಾರ ಮಠದ ಅಭಿವೃದ್ದಿಗಾಗಿ 2023 ರ ಮೇ ನಂತರ 5 ಕೋಟಿ ಅನುದಾನ ಹಾಗೂ ಎಂಜಿನಿಯರಿಂಗ್ ಕಾಲೇಜು ಮಂಜೂರು ಮಾಡಿಕೊಡಲಾಗುವುದು ಎಂದು ಲೋಕೋಪಯೋಗಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆಶ್ವಾಸನೆ ನೀಡಿದರು.
ತಾಲೂಕಿನ ಶೆಟ್ಟಿಗೊಂಡನಹಳ್ಳಿಯಲ್ಲಿ ನಡೆಯುತ್ತಿರುವ ಶ್ರೀ ಹಳ್ಳಿಕಾರ ಮಠ ಲೋಕಾರ್ಪಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ಮೊದಲ ಹಂತದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ರಾಜ್ಯಸಭಾ ಸದಸ್ಯರ ವಿಶೇಷಾನುದಾನದಡಿ ಮೊದಲ ಹಂತದಲ್ಲಿ 10 ಲಕ್ಷ ರೂ ಹಾಗೂ ನೀಡಲಿದ್ದಾರೆ, ಎರಡನೇ ಹಂತದಲ್ಲಿ 10 ಲಕ್ಷ ರೂ ಅನುದಾನವನ್ನು ಶ್ರೀ ಮಠಕ್ಕೆ ನೀಡಲಿದ್ದಾರೆ. ಶ್ರೀ ಮಠದ ಸರ್ವಾಂಗೀಣ ಅಭಿವೃದ್ದಿಗೆ ಪೂರಕ ನೆರವು ನೀಡುವುದಾಗಿ ತಿಳಿಸಿದರು.
ಹೆಚ್.ಡಿ.ಕುಮಾರಸ್ವಾಮಿಯವರಿಗೆ ಎರಡು ಬಾರಿ ಹೃದಯ ಶಸ್ತçಚಿಕಿತ್ಸೆಯಾದರೂ ನಾಡಿನ ಜನರ ಆಶೀರ್ವಾದದಿಂದ ಬದುಕುಳಿದಿದ್ದಾರೆ. ದೇವೇಗೌಡರ ಕಣ್ಣ ಮುಂದೆ ರಾಜ್ಯದಲ್ಲಿ ಮತ್ತೆ ಜೆ.ಡಿ.ಎಸ್.ನ್ನು ಅಧಿಕಾರಕ್ಕೆ ತರಲು ಹೋರಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಜನತೆಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂಬುದನ್ನು ರೈತರ ಸಾಲ ಮನ್ನಾ ಮಾಡುವ ಮೂಲಕ ಸಾಬೀತು ಮಾಡಿದ್ದಾರೆ. ರೈತರ ಉಳಿವಿಗಾಗಿ ಜೆ.ಡಿ.ಎಸ್.ನ್ನು ರಾಜ್ಯದ ಮತದಾರರು ಆಶೀರ್ವದಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ಮಾತನಾಡಿ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಶ್ರೀ ಹಳ್ಳಿಕಾರ್ ಮಠ ಸ್ಥಾಪನೆಯಾಗುತ್ತಿರುವುದು ಅತ್ಯಂತ ಸಂತಸ ತಂದಿದೆ. ಹೆಚ್.ಡಿ.ರೇವಣ್ಣನವರು ಸಚಿವರಾಗಿದ್ದ ಸುಮಾರು 8 ಪ್ರೌಢಶಾಲೆಗಳು, ಕಾಲೇಜು, ಕೆ.ಶಿಪ್ ರಸ್ತೆ, ಬಸ್ ಸ್ಟಾಂಡ್ ಮತ್ತಿತರ ಶಾಶ್ವತ ಕಾಮಗಾರಿಗಳು ಸಾಕಾರಗೊಂಡವು. ಎಂದು ಹರ್ಷ ವ್ಯಕ್ತಪಡಿಸಿದ ಅವರು ರಾಜ್ಯದ ಜನತೆಯ ಆಶೀರ್ವಾದದಿಂದ 2023 ರಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರು ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗುವುದನ್ನು ಯಾರಿಂದಲೂ ತಡೆಯಲಾಗುದು ಎಂದರು.
ಕಾರ್ಯಕ್ರಮದ ದಿವ್ಯಸಾಧ್ಯವನ್ನು ಶ್ರೀ ಕುಮಾರಚಂದ್ರಶೇಖರನಾತ ಸ್ವಾಮೀಜಿ, ಮಧುಸೂಧನಾನಂದ ಸ್ವಾಮೀಜಿ, ರಮಾನಚಿದ ಸ್ವಾಮೀಜಿ, ಶ್ರೀಹಳ್ಳಿಕಾರ ಮಠದ ಶ್ರೀ ಬಾಲಕೃಷ್ಣಾನಂದ ಸ್ವಾಮೀಜೀ, ವಹಿಸಿದ್ದರು. ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ನಾಗಯ್ಯ ವಹಿಸಿದ್ದರು. ವೇದಿಕೆಯಲ್ಲಿ ನಿವೃತ್ತ ನ್ಯಾಯಾಧೀಶರಾದ ನಾರಾಯಣಪ್ಪ,ಶ್ರೀಮತಿ ಲಕ್ಷ್ಮೀ ವಜ್ರಮುನಿ, ಜಿ.ಟಿ.ತಿಮ್ಮರಾಜ್, ಪಟೇಲ್ ಪಾಂಡು, ಪುಟ್ಟೇಗೌಡ, ಬಸವರಾಜು, ದೊಡ್ಡೇಗೌಡ, ಪಟೇಲ್ ದೇವರಾಜ್ ಮತ್ತಿತರಿದ್ದರು.