ಬಿ.ಜೆ.ಪಿ.ತೊರೆದು ಜೆ.ಡಿ.ಎಸ್. ಗೆ ಜೈ ಎಂದ ಬಿ.ಜೆ.ಪಿ. ಘಟಕದ ಮಾಜಿ ಅಧ್ಯಕ್ಷ ಹಡಗೀಹಳ್ಳಿ ವಿಶ್ವನಾಥ್
ತುರುವೇಕೆರೆ : ತಾಲೂಕು ಬಿ.ಜೆ,ಪಿ. ಘಟಕದ ಮಾಜಿ ಅಧ್ಯಕ್ಷ ಹೆಡಗೀಹಳ್ಳಿವಿಶ್ವನಾಥ್, ಎಸ್.ಸಿ, ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಮುನಿಯೂರು ರಂಗಸ್ವಾಮಿ ಹಾಗೂ ರೈತ ಮೋರ್ಚಾ ತಾಲೂಕು ಅಧ್ಯಕ್ಷ ಆಬಲಕಟ್ಟೆ ರಾಮಣ್ಣ ಕಮಲ ಪಕ್ಷವನ್ನು ತೊರೆದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಸಮ್ಮುಖದಲ್ಲಿ ಜೆ.ಡಿ.ಎಸ್. ಪಾಳೆಯಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
ವಿಧಾನ ಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಈ ದಿನಗಳಲ್ಲಿ ಬಿ.ಜೆ.ಪಿ. ಪಕ್ಷದಲ್ಲಿ ಪದಾದಿಕಾರ ಹೊಂದಿದ್ದವರು ಜೆ.ಡಿ.ಎಸ್. ಸೇರ್ಪಡೆಗೊಂಡು ತಾಲೂಕಿನ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ. ಕೇವಲ 2 ದಿನಗಳ ಹಿಂದೆಯಷ್ಟೆ ಹೆಡಗೀಹಳ್ಳಿ ವಿಶ್ವನಾಥ್ ಹಾಗೂ ಶಾಸಕ ಮಸಾಲಜಯರಾಮ್ ನಡುವೆ ಸಮನ್ವಯ ಮೂಡಿದೆ. ಎಂಬ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ಆದರೇ ಶುಕ್ರವಾರ ಹೆಡಗೀಹಳ್ಳಿ ವಿಶ್ವನಾಥ್ ಅಧಿಕೃತವಾಗಿ ಜೆ.ಡಿ.ಎಸ್. ಸೇರ್ಪಡೆಗೊಂಡು ಎಂ.ಟಿ.ಕೆ. ಗೆಲ್ಲಿಸುವ ಹೇಳಿಕೆ ನೀಡುವ ಮೂಲಕ ಬಿ.ಜೆ.ಪಿ. ಪಕ್ಷಕ್ಕೆ ಶಾಕ್ ನೀಡಿದ್ದಾರೆ.
ತಾಲೂಕು ಘಟಕದ ಮಾಜಿ ಅಧ್ಯಕ್ಷ ಹೆಡಗೀಹಳ್ಳಿ ವಿಶ್ವನಾಥ್ ಮಾತನಾಡಿ ನಾನು ಬಿ.ಜೆ.ಪಿ. ಪಕ್ಷದ ವಿರೋಧಿಯಲ್ಲ, ಶಾಸಕ ಮಸಾಲಜಯರಾಮ್ ಅವರ ಸರ್ವಾಧಿಕಾರಿ ಧೋರಣೆಯ ವಿರೋಧಿ, ಅಂತಿಮವಾಗಿ ಶಾಸಕ ಮಸಾಲಜಯರಾಮ್ ಅವರನ್ನು ಸೋಲಿಸುವುದೇ ನನ್ನ ಗುರಿ ಎಂದರು.
ಎಂ.ಟಿ.ಕೃಷ್ಣಪ್ಪ ಗೆಲ್ತಾರೆ :-
ನಾನು ಮತ್ತು ಕೆಲವರು ಸಾಂಕೇತಿಕವಾಗಿ ಮಾತ್ರ ಜೆ.ಡಿ.ಎಸ್. ಸೇರ್ಪಡೆಗೊಂಡಿದ್ದೇವೆ. ಮುಂದೆ ಸಾವಿರಾರು ವೀರಶೈವರನ್ನು ಜೆ.ಡಿ.ಎಸ್. ಪಕ್ಷಕ್ಕೆ ಸೇರ್ಪಡೆಗೊಳಿಸುತ್ತೇವೆ. ಇದು ಕೇವಲ ಟ್ರೆಲರ್ ಪಿಚ್ಚರ್ ಅಭಿ ಬಾಕಿ ಹೈ ಎಂಬ ಸಂದೇಶ ರವಾನಿಸಿದ ಅವರು ಎಂ.ಟಿ.ಕೆ. ಗೆಲುವು ಸೂರ್ಯ ಚಂದ್ರರಷ್ಟೆ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಆನೇಕೆರೆ ಗ್ರಾ.ಪಂ. ಮಾಜಿ ಆದ್ಯಕ್ಷ ರಾಮಕೃಷ್ಣ. ಕಾಂಗ್ರೇಸ್ ಪಕ್ಷದ ಪದಾದಿಕಾರಿಗಳಾದ ಮಹೇಶ್, ಗಿರೀಶ್, ನಿವೃತ್ತ ಶಿಕ್ಷಕ ಶಿವರಾಮಯ್ಯ ಮತ್ತಿತರರು ಜೆ.ಡಿ.ಎಸ್. ಸೇರ್ಪಡೆಗೊಂಡರು
ಜೆ.ಡಿ.ಎಸ್. ಯುವ ಘಟಕದ ಅಧ್ಯಕ್ಷ ಬಾಣಸಂದ್ರರಮೇಶ್, ವಕ್ತಾರ ಯೋಗೀಶ್, ರಾಜೀವ್ ಕೃಷ್ಣಪ್ಪ, ಡಿ.ಸಿ.ಸಿ. ಬ್ಯಾಂಕ್ ಮಾಜಿ ನಿರ್ದೇಶಕ ಬಿ.ಎಸ್. ದೇವರಾಜ್, ಕಣತ್ತೂರುಪ್ರಸನ್ನ,ಮಾದಿಹಳ್ಳಿಕಾಂತ, ವೀರಶೈವ ಮುಖಂಡ ಸೋಮಶೇಖರ್, ರೇಣುಕಯ್ಯ, ಕಳ್ಳನಕೆರೆಮಂಜುನಾಥ್, ಮತ್ತಿತರಿದ್ದರು.