ತಿಪಟೂರು : ಅನಾದಿ ಕಾಲದಿಂದಲೂ ವ್ಯಾಪಾರ ವ್ಯವಹಾರಗಳನ್ನು ಉಳಿದ ವರ್ಗಗಳಿಗೆ ಬಿಟ್ಟು ಪುರೋಹಿತ ವರ್ಗಕ್ಕೆ ಮಿಸಲಾಗಿ ಜನನ ಮರಣಗಳಿಗೆ ಶಾಸ್ತ್ರೋಕ್ತ ಕಾರ್ಯಾಗಳನ್ನು ಮಾಡಿ ಹೋಮ ಹವನಗಳ ಮುಖೇನ ದೇಶದ ಜನರಿಗೆ ಒಳಿತು ಬಯಸುವ ನಮ್ಮ ಜನಾಂಗದ ಮೇಲೆ ನಿಮಗೇಕೆ ಕೋಪ ಬ್ರಾಹ್ಮಣರ ಶಾಪ ಒಳ್ಳೆಯದಲ್ಲ ಕೂಡಲೇ ಕ್ಷಮೆಯಾಚಿಸಿ ಎಂದು ತಿಪಟೂರು ತಾಲ್ಲೂಕು, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ರವಿಶಾಸ್ತ್ರಿ ಆಗ್ರಹ ಪಡಿಸಿದರು
ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರೇ ನಿಮ್ಮ ಕುಟುಂಬದ ಒಳಿತಿಗಾಗಿ ದೇವಸ್ಥಾನಗಳಲ್ಲಿ ಮತ್ತು ನಿಮ್ಮ ಮನೆಯಲ್ಲಿ ಮಾಡಿಸುವ ಹೋಮ ಹವನ ನಿಮ್ಮ ಜನಾಂಗದವರೇ ಮಾಡುತ್ತಾರ ನಿಮ್ಮ ಕುಟುಂಬದಲ್ಲಿ ಉನ್ನತ ರಾಜಕೀಯ ಹುದ್ದೆ ಅಲಂಕರಿಸಿದ್ದರೆ ವೈದಿಕ ಸಮಾಜದ ಪುರೋಹಿತ ವರ್ಗದವರು ಸಲ್ಲಿಸಿದ ಪೂಜೆಯೇ ಕಾರಣವಾಗಿದೆ ನಿಮ್ಮ ತಂದೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ನಮ್ಮ ಸಮಾಜದ ಮೇಲೆ ಅಪಾರ ಪ್ರೀತಿ ಮತ್ತು ಗೌರವದಿಂದ ಸಂಬೋಧಿಸುತ್ತಿದ್ದರು ನಿಮಗ್ಯಾಕೆ ಇಂತಹ ಬುದ್ಧಿ ಮುಂದೆ ದಿನಗಳಲ್ಲಿ ತಕ್ಕ ಶಾಸ್ತ್ರಿ ಆಗಲಿದೆ ಕೂಡಲೇ ಬಹಿರಂಗವಾಗಿ ಕ್ಷಮೆಯಾಚಿಸಿ ನಮ್ಮ ಸಮಾಜದವರು ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ್ದಾರೆ ಪ್ರಾಣ ತೆತ್ತಿದ್ದಾರೆ ದೇಶದ ಮೂಲ ನಿವಾಸಿಗಳು ಸಹ ಆಗಿದ್ದಾರೆ ಅಂತಹದ್ದರಲ್ಲಿ ಯಾಕೆ ಮುಖ್ಯಮಂತ್ರಿ ಆಗಬಾರದು ನಮ್ಮ ತಾಳ್ಮೆ ಪರೀಕ್ಷಿಸಬೇಡಿ ಮುಂದಿನ ದಿನಗಳಲ್ಲಿ ಹೋರಾಟದ ಮೂಲಕ ಎಚ್ಚರಿಕೆ ತೋರಿಸುತ್ತೇವೆ ಎಂದು ತಿಳಿಸಿದ್ದಾರೆ.