ಶಿರಾ : ಶಿರಾ ತಾಲ್ಲೂಕು ವಕೀಲರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎರಡನೇ ಭಾರಿಗೆ ಹೆಚ್.ಪಿ.ಧರಣೇಶ್ ಗೌಡ ಅವರು ಆಯ್ಕೆಯಾಗಿದ್ದಾರೆ.
ಶುಕ್ರವಾರ ವಕೀಲರ ಭವನದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಹೆಚ್.ಪಿ.ಧರಣೇಶ್ ಗೌಡ, ಉಪಾಧ್ಯಕ್ಷರಾಗಿ ಸಿ.ಸರಸ್ವತಿ, ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಗುರುಮೂರ್ತಿ ಗೌಡ ಆಯ್ಕೆಯಾದರು. ಜಂಟಿ ಕಾರ್ಯದರ್ಶಿಯಾಗಿ ಈರಣ್ಣ.ಡಿ ಹಾಗೂ ಖಜಾಂಚಿಯಾಗಿ ಬಿ.ಆರ್.ರಾಮಕೃಷ್ಣಪ್ಪ ಅವರು ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಜಿ.ಎಸ್.ರಂಗನಾಥ್, ಸಹಾಯಕ ಚುನಾವಣಾಧಿಕಾರಿಯಾಗಿ ಪರಮೇಶ್.ಎಂ. ಅವರು ಕಾರ್ಯ ನಿರ್ವಹಿಸಿದರು.