ಗುಬ್ಬಿ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುಬ್ಬಿ ತಾಲ್ಲೂಕಿನ ಜನತೆಯ ಪರವಾಗಿ ವಿಶೇಷ ಆತಿಥ್ಯ ಸಿದ್ಧವಾಗಿದ್ದು ಕಲ್ಪತರು ನಾಡಿನ ಕೊಡುಗೆಯಾಗಿ ಅಡಕೆ ಪೇಟ ಮತ್ತು ಅಡಕೆ ಹಾರ ನೀಡಲು ಜಿಲ್ಲೆಯ ಅಭಿಮಾನಿಗಳು ಸಜ್ಜಾಗಿರುವುದು ಇಡೀ ಕಾರ್ಯಕ್ರಮಕ್ಕೆ ಮೆರುಗು ತಂದಿದೆ.
ವಿಶ್ವವೇ ಗುರುತಿಸುವ ಹೆಲಿಕ್ಯಾಪ್ಟರ್ ತಯಾರಿಕ ಘಟಕ ಫೆಬ್ರವರಿ 6 ರಂದು ಪ್ರಧಾನಿ ನರೇಂದ್ರ ಮೋದಿಯವರ ಅಮೃತ ಹಸ್ತದಿಂದ ಉದ್ಘಾಟನೆಗಾಗಿ ತಾಲೂಕಿನ ಬಿದರೆ ಹಳ್ಳ ಕಾವಲ್ ನಲ್ಲಿ ಸಕಲ ಸಜ್ಜುಗೊಂಡಿದ್ದು ಇದರ ಹಿನ್ನೆಲೆ ಮೋದಿ ಅಭಿಮಾನಿಗಳಿಂದ ಅಡಿಕೆಯನ್ನು ಅಂಟಿಸಿ ಪೇಟ ಸಿದ್ದ ಮಾಡಿದ್ದು ಹಾರ ತಯಾರಿಕೆಗೆ ಉಂಡೆ ಅಡಕೆ ಬಳಸಲಾಗಿ ಸುಂದರವಾಗಿ ಸಿದ್ಧಗೊಂಡು ಮೋದಿ ಬರುವಿಕೆಗೆ ಕಾದು ಕುಳಿತಿದೆ.
ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಕೇಂದ್ರ ರಕ್ಷಣಾ ಸಚಿವರು , ಸಹಾಯಕ ರಕ್ಷಣಾ ಸಚಿವರು , ರಾಜ್ಯ ರಕ್ಷಣಾ ಸಚಿವರು , ರಾಜ್ಯಪಾಲರು , ಮುಖ್ಯಮಂತ್ರಿಗಳು , ಸಚಿವರುಗಳು , ಶಾಸಕರು , ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಸರಿ ಸುಮಾರು 1500 ಕ್ಕೂ ಅಧಿಕ ಮಂದಿ ಗಣ್ಯರು ಆಗಮಿಸಲಿದ್ದು, 70 ಸಾವಿರದಿಂದ ಒಂದು ಲಕ್ಷ ಮಂದಿ ಸಾರ್ವಜನಿಕರು ಸೇರುವ ನಿರೀಕ್ಷೆ ಇದೆ . ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆ , ಬಸ್ ವ್ಯವಸ್ಥೆ , ಪಾರ್ಕಿಂಗ್ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ಯಾವುದೇ ರೀತಿಯ ಆಡಚಣೆಗಳು ಆಗದಂತೆ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಮುಂಜಾಗ್ರತ ಕ್ರಮ ಕೈಗೊಂಡಿದೆ.
ಫೆ.6ರ ಸೋಮವಾರ ಬೆಳಿಗ್ಗೆಯಿಂದ ಸಂಜೆವರೆಗೂ 206 ರಾಷ್ವ್ರೀಯ ಹೆದ್ದಾರಿಯ ವಾಹನಗಳ ಸಂಚಾರದ ಮಾರ್ಗ ಬದಲಾವಣೆ ಮಾಡಲಾಗಿದೆ. ವಾಹನ ಸವಾರರು ಅನ್ಯ ಮಾರ್ಗವನ್ನು ಸಹ ಸೂಚಿಸಲಾಗಿದೆ. ಜಿಲ್ಲೆಗೆ ಪ್ರಧಾನಿ ಅವರ ಭೇಟಿ ಹಿನ್ನಲೆಯಲ್ಲಿ ಈಗಾಗಲೇ ಹಲವು ಸಭೆಗಳನ್ನು ನಡೆಸಿ ಅಗತ್ಯ ಸೂಚನೆಗಳನ್ನು ಕೊಡಲಾಗಿದೆ. ಒಳಭಾಗದಲ್ಲಿ ಎಚ್ ಎಎಲ್ ಅಧಿಕಾರಿಗಳು ಸಹ ಎಲ್ಲಾ ಸಕಲ ಸಿದ್ದತೆಗಳನ್ನು ಕೈಗೊಂಡಿದ್ದಾರೆ.
ಮಧ್ಯಾಹ್ನ 1 ಗಂಟೆಯಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಸಾರ್ವಜನಿಕರನ್ನು ಬಿಡಲು ಪ್ರಾರಂಭಿಸಿ 2.30 ರ ಒಳಗಡೆ ಎಲ್ಲರೂ ಒಳಗಡೆ ಸೇರಬೇಕಿದೆ. ನೀರು , ಬ್ಯಾಗ್ ಪ್ಲಾಸ್ವಿಕ್ ಯಾವುದೇ ವಸ್ತುಗಳನ್ನು ತರುವಂತಿಲ್ಲ ಎಲ್ಲರಿಗೂ ಕೂಡ ನೀರು, ಊಟದ ವ್ಯವಸ್ಥೆ ಮಾಡಲಾಗಿದೆ.
ಹಾಗೆಯೇ ಊಟದ ವ್ಯವಸ್ಥೆ ಕೂಡಾ ನೂರಾರು ಬಾಣಸಿಗರ ತಂಡ ಸಿಹಿ ಖಾದ್ಯ ಅಡುಗೆ ತಯಾರಿ ನಡೆಸಿದ್ದಾರೆ.
ವರದಿ: ದೇವರಾಜು ಮಡೇನಹಳ್ಳಿ.