ಈ ದೇಶದ ಅಖಂಡತೆ ಮತ್ತು ಸಾರ್ವಭೌಮತೆಯನ್ನು ಎತ್ತಿ ಹಿಡಿಯುವಲ್ಲಿ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ಮುಂಚೂಣಿ ಪಾತ್ರದಲ್ಲಿದ್ದ ಬ್ರಾಹ್ಮಣ ಸಮುದಾಯದವರು ಮುಖ್ಯಮಂತ್ರಿಗಳಾಗಬಾರದೆ ಎಂದು ಬಿಜೆಪಿ ಮುಖಂಡರು ಹಾಗೂ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಪ್ರಭಾಕರ ಮ್ಯಾಸನಾಯಕ ಪ್ರಶ್ನಿಸಿದ್ದಾರೆ.
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಕುದಾಪುರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ನಿಮಿತ್ತ ಚಳ್ಳಕೆರೆಗೆ ಆಗಮಿಸಿದ್ದ ಪ್ರಭಾಕರ ಅವರು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಈ ನಾಡಿನ ರಕ್ಷಣೆಗಾಗಿ ಹಾಗೂ ದೇಶದ ಸಮಗ್ರತೆಗಾಗಿ ಎಲ್ಲ ಸಮುದಾಯಗಳಿಗೆ ಅರಿವು ಮೂಡಿಸಿಕೊಂಡು ಜಾಗೃತೆಯನ್ನು ಮಾಡುವುದರ ಜೊತೆಗೆ ಸಮಾಜ ನಿರ್ಮಾಣದ ಕೆಲಸದಲ್ಲಿ ತೊಡಗಿಸಿ ಕೊಂಡಿರುವ ಸಮುದಾಯ ಬ್ರಾಹ್ಮಣ ಸಮುದಾಯ ಅನೇಕ ಸಾವಿರಾರು ವರ್ಷಗಳ ಕಾಲ ಇತಿಹಾಸ ಇರುವ ಬ್ರಾಹ್ಮಣ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕುಮಾರಸ್ವಾಮಿಯವರಿಗೆ ಮತಿಭ್ರಮಣೆಯಾಗಿದೆ.
ಬ್ರಾಹ್ಮಣರಿಗೆ ಪ್ರತ್ಯೇಕ ಪ್ರಜಾಪ್ರಭುತ್ವ ಇಲ್ಲ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಲ್ಲಿ ಎಲ್ಲ ಸಮುದಾಯ ಜಾತಿ ವರ್ಗಗಳಿಗೆ ಸಮಾನ ನಾಗರಿಕತೆಯ ಹಕ್ಕುಗಳನ್ನು ನೀಡಿದ್ದಾರೆ. ಹೀಗಿರುವಾಗ ಬ್ರಾಹ್ಮಣರು ಮುಖ್ಯಮಂತ್ರಿಯಾದರೆ ತಪ್ಪೇನು? ಮುಖ್ಯಮಂತ್ರಿ ಪ್ರಧಾನ ಮಂತ್ರಿಗಳ ಹುದ್ದೆಗಳು ದೇವೇಗೌಡರ ಕುಟುಂಬಕಷ್ಟೇ ಸೀಮಿತವಾಗಿ ಇರಬೇಕಾ ಎಂದು ಪ್ರಶ್ನಿಸಿದರು.
ಭಾರತೀಯ ಜನತಾ ಪಾರ್ಟಿಯ ಅಭಿವೃದ್ಧಿಯನ್ನು ಸಹಿಸದೆ ಈ ರೀತಿ ಕ್ಷುಲ್ಲಕ ಹೇಳಿಕೆಗಳನ್ನು ನೀಡುವ ಮುಖೇನ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮಾನಸಿಕ ಮಟ್ಟ ಮತ್ತಷ್ಟು ಕುಸಿದಿರುವುದು ಇದರಿಂದ ಕಾಣುತ್ತದೆ ಎಂದು ಪ್ರಭಾಕರ ತಿಳಿಸಿದರು.
ಈ ಬಾರಿ ಜಾತ್ಯತೀತ ಜನತಾದಳ ಜೊತೆಗೆ ಟಿಕೆಟ್ ಗಾಗಿ ಕುಟುಂಬದಲ್ಲಿನ ಕಲಹವನ್ನು ಮರೆಮಾಚಲು, ಜನರ ಗಮನ ಬೇರೆಡೆ ಸೆಳೆಯಲು ಈ ರೀತಿ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ.ಒಂದಂಕಿಯನ್ನು ಕೂಡ ದಾಟುವುದಿಲ್ಲ ಎಂದು
ಸಮೀಕ್ಷೆಯಲ್ಲಿ ತಿಳಿಸಲಾಗಿದೆ ಇದನ್ನು ಜೀರ್ಣಿಸಿಕೊಳ್ಳಲಾಗದ ಕುಮಾರಸ್ವಾಮಿ ಈ ರೀತಿ ಹೇಳಿಕೆಗಳಿಂದ ಸುದ್ದಿಯಲ್ಲಿರುತ್ತಾರೆ ಬಿಟ್ಟರೆ ಅವರ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಜಗಜ್ಜಾಹಿರಾಗಿದೆ ಎಂದು ಪ್ರಭಾಕರ ಮ್ಯಾಸನಾಯಕ ತಿಳಿಸಿದರು.