ಮಣೆಚಂಡೂರು ಗ್ರಾ.ಪಂ.ನೂತನ ಉಪಾಧ್ಯಕ್ಷರಾಗಿ ಪಾರ್ವತಿ ಹರೀಶ್ ಆಯ್ಕೆ
ತುರುವೇಕೆರೆ : ತಾಲೂಕಿನ ಮಣೆಚಂಡೂರು ಗ್ರಾಮಪಂಚಾಯಿತಿ ನೂತನ ಉಪಾದ್ಯಕ್ಷರಾಗಿ ಪಾರ್ವತಿಹರೀಶ್ ಅವಿರೋಧವಾಗಿ ಆಯ್ಕೆಗೊಂಡರು.
ಈ ಹಿಂದೆ ಮಣೆಚಂಡೂರು ಗ್ರಾ.ಪಂ. ಉಪಾದ್ಯಕ್ಷರಾಗಿದ್ದ ಹನುಮಂತಯ್ಯ ಅವರ ರಾಜೀನಾಮೆಯಿಚಿದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು. 14 ಸದಸ್ಯ ಬಲವುಳ್ಳ ಪಂಚಾಯಿತಿಯಲ್ಲಿ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಮಲ್ಲೂರು ಕ್ಷೇತ್ರದ ಪಾರ್ವತಿಹರೀಶ್ ಹೊರೆತುಪಡಿಸಿ ಬೇರಾವ ಸದಸ್ಯರುಗಳು ನಾಮಪತ್ರ ಸಲ್ಲಿಸಲಿಲ್ಲ, ಅಚಿತಿಮವಾಗಿ ಕಣದಲ್ಲಿ ಉಳಿದ ಪಾರ್ವತಿಹರೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ತಹಶೀಲ್ದಾರ್ ಹಾಗೂ ಚುನಾವಣಾಧಿಕಾರಿಗಳಾದ ವೈ.ಎಂ. ರೇಣುಕುಮಾರ್ ಘೋಷಣೆ ಮಾಡಿದರು.
ನೂತನ ಉಪಾದ್ಯಕ್ಷೆ ಪಾರ್ವತಿಹರೀಶ್ ಮಾತನಾಡಿ ನಮ್ಮ ಮಾವನವರಾದ ಮುನಿಯಪ್ಪನವರ ಕೃಪಾರ್ಶೀವಾದ ಹಾಗೂ ಸಹ ಸದಸ್ಯರ ಸಹಕಾರದಿಂದ ಅವಿರೋಧವಾಗಿ ಉಪಾದ್ಯಕ್ಷಳಾಗಿ ಆಯ್ಕೆಯಾಗಿದ್ದೇನೆ. ಮುಂಬರುವ ದಿನಗಳಲ್ಲಿ ಗ್ರಾ.ಪಂ. ವ್ಯಾಪ್ತಿ ಗ್ರಾಮಗಳಿಗೆ ಅಗತ್ಯ ಸೌಕರ್ಯ ಒದಗಿಸಲು ಒತ್ತು ನೀಡುತ್ತೇನೆ ಎಂದರು.
ನೂತನ ಉಪಾದ್ಯಕ್ಷರನ್ನು ಗ್ರಾ.ಪಂ. ಅಧ್ಯಕ್ಷೆ ಶ್ಯಾಮಲಾ, ಬಿ.ಆರ್. ಸದಸ್ಯರಾದ ಯಶೋಧರ, ಮುಕುಂದ ,ಯೂನುಸ್,ಅನಿತಾ, ಮುಖಂಡರುಗಳಾದ ಬಸವರಾಜು, ಸಣ್ಣಯ್ಯ, ತಿಮ್ಮೇಶ್, ಸೇರಿದಂತೆ ಅನೇಕರು ಅಭಿನಂದಿಸಿದರು.