ತಿಪಟೂರು : ರೈತರ ಆರೋಗ್ಯ ಸಮೃದ್ಧಿಯಾಗಲಿ, ದೇಶ ಕಾಯುವ ಸೈನಿಕರಿಗೆ ಭಗವಂತನ ಕೃಪೆಯಿಂದ ಆಯುರಾರೋಗ್ಯ ವೃದ್ಧಿಸಲಿ ದೇಶಕ್ಕೆ ಅಷ್ಟದಿಕ್ಪಾಲಕರ ಕೃಪೆ ಇರಲಿ, ಅತಿವೃಷ್ಟಿ ಅನಾವೃಷ್ಟಿ ನಿಲ್ಲಲಿ, ರಾಜಕಾರಣಿಗಳಿಗೆ ರೈತರ, ಶ್ರಮಿಕ ವರ್ಗಗಳ ಮೇಲೆ ನಿಗಾ ಇರಲಿ ಎಂದು ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಜಿಯವರು ತಿಳಿಸಿದರು.
ಜಿಲ್ಲೆಯ ಧಾರ್ಮಿಕ ಕೇಂದ್ರಗಳಲ್ಲಿ ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದಲ್ಲಿ ನಡೆದ ಹಿರಿಯ ಶ್ರೀಗಳ 71ನೇ ಜನ್ಮ ವರ್ಧಂತಿಯ ಕಾರ್ಯಕ್ರಮದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು ದೇಶದಲ್ಲಿ ಅಲ್ಲದೆ ನಾನಾ ರಾಷ್ಟ್ರಗಳಿಂದ ಭಕ್ತರು ಕರೆ ಮಾಡಿ ನಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ ವಿಚಾರಿಸಿದಾಗ ಮತ್ತಷ್ಟು ಶಕ್ತಿ ವೃದ್ಧಿಯಾಗಲಿದೆ.
ಭಕ್ತರ ಸಮಸ್ಯೆಗೆ ಶ್ರೀಮಠವು ದೇವರಲ್ಲಿ ಸದಾ ಪಠಿಸುತ್ತದೆ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸದತ್ತ ಗಮನ ಹರಿಸಬೇಕು ರೈತರ ಆರೋಗ್ಯ ಸಮೃದ್ಧಿಯಾಗಲಿ, ದೇಶ ಕಾಯುವ ಸೈನಿಕರಿಗೆ ಭಗವಂತನ ಕೃಪೆಯಿಂದ ಆಯುರಾರೋಗ್ಯ ವೃದ್ಧಿಸಲಿ, ದೇಶಕ್ಕೆ ಅಷ್ಟದಿಕ್ಪಾಲಕರ ಕೃಪೆ ಇರಲಿ, ಅತಿವೃಷ್ಟಿ ಅನಾವೃಷ್ಟಿ ನಿಲ್ಲಲಿ, ರಾಜಕಾರಣಿಗಳಿಗೆ ರೈತರ, ಶ್ರಮಿಕ ವರ್ಗಗಳ ಮೇಲೆ ನಿಗಾ ಇರಲಿ, ಸದಾ ಕುಟುಂಬದ ಸದಸ್ಯರು ಮತ್ತು ಮಕ್ಕಳಿಗೆ ಹಗಲಿರುಳು ಶ್ರಮಿಸುವ ಗೃಹಿಣಿಯರಿಗೆ ಆರೋಗ್ಯ ಸಮೃದ್ಧಿಯಾಗಲಿ, ಶತಮಾನದ ಮಹಾಮಾರಿ ಕೊರೋನಾ ಪ್ರಪಂಚ ಬಿಟ್ಟು ತೊಲಗಲಿ, ಶ್ರೀ ಮಠಕ್ಕೆ ಎಲ್ಲಾ ಧರ್ಮದ ಭಕ್ತರು ವಿಶೇಷ ಅಕ್ಷತೆಯ ಆಶೀರ್ವಾದ ಪಡೆದಿದ್ದಾರೆ ಯಾವುದೇ ಪಕ್ಷ ಯಾವುದೇ ಧರ್ಮಕ್ಕೆ ಸೀಮಿತವಾದ ಮಠವಲ್ಲ “ಸರ್ವೇ ಜನ ಸುಖಿನೋ ಭವಂತು’ಎಂದು ಆಶಿಸಿದರು.
ಸಂಸ್ಥೆಯ ಮಾಜಿ ಕಾರ್ಯದರ್ಶಿ ರಾಜಕುಮಾರ್ ಮಾತನಾಡಿ ದೇಶವಿದೇಶಗಳಲ್ಲಿ ನೊಣವಿನಕೆರೆ ಮತ್ತು ಶ್ರೀಮಠದ ಹೆಸರು ಪ್ರಸಿದ್ಧಿಯಾಗಿದ್ದು ಶ್ರೀಗಳ ಪವಾಡ ಮತ್ತು ಪರಿಶ್ರಮವೇ ಕಾರಣ ಎಂದರು
ಕಿರಿಯ ಶ್ರೀಗಳಾದ ಅಭಿನವ ಕಾಡ ಸಿದ್ದೇಶ್ವರ ಶ್ರೀಗಳು ಮಾತನಾಡಿ ದೇಶದಲ್ಲಿ ಋಷಿ ಸಂಸ್ಕೃತಿ ಮತ್ತು ಕೃಷಿ ಸಂಸ್ಕೃತಿಗೆ ವಿಶೇಷ ಸ್ಥಾನವಿದೆ ಅನ್ನದಾತ ತನ್ನ ಹಸಿವನ್ನು ಲೆಕ್ಕಿಸದೆ ದೇಶಕ್ಕೆ ಅನ್ನ ನೀಡಿದರೆ ಮಠಮಾನ್ಯಗಳು ತ್ರಿವಿಧ ದಾಸೋಹ ನೀಡಿ ಪ್ರಪಂಚಕ್ಕೆ ಮಾದರಿಯಾಗಿವೆ ನಮ್ಮ ಹಿರಿಯ ಶ್ರೀಗಳ ಆಶಯದಂತೆ ಪ್ರತಿ ದಿನ ಅನ್ನ, ಅಕ್ಷರ, ಆಶ್ರಯ, ಜೊತೆಗೆ ಶ್ರೀಮಠದಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಉದ್ಯೋಗ ಶಿಬಿರ ಕಾರ್ಯಕ್ರಮದಲ್ಲಿ ಉದ್ಯೋಗ ನೀಡುತ್ತಿದ್ದೇವೆ ಸಂತರಾದವರು ಮಕ್ಕಳೊಡನೆ ಮಕ್ಕಳಂತೆ ಹಿರಿಯರೊಡನೆ ಹಿರಿಯರಂತೆ ಜ್ಞಾನಿಗಳೊಡನೆ ಜ್ಞಾನಿಯಂತೆ ಜ್ಞಾನ ಜ್ಯೋತಿ ಕಡೆಗೆ ಕರೆದೊಯ್ಯಬೇಕು ಎಂದರು
ಇದೇ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಭಾರತಕ್ಕೆ 9 ಪದಕ ರಾಜ್ಯಕ್ಕೆ 21 ಪದಕ ತಂದುಕೊಟ್ಟ ಎರಡು ಕೈ ಇಲ್ಲದ ಅಂಗವಿಕಲ ಕೆ, ವಿಶ್ವಾಸ್ ಕಾರ್ಯಕ್ರಮದಲ್ಲಿ ನೃತ್ಯ ಮಾಡುವ ಮೂಲಕ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಶ್ರೀಮಠದ ವ್ಯವಸ್ಥಾಪಕ ಶಂಭು.ಜಿ ಮಠದ್, ಕಾರ್ಯದರ್ಶಿ ವಿಜಯಕುಮಾರ್, ಶ್ರೀಮಠದ ಆಡಳಿತ ವರ್ಗ ಎಸ್ ಕೆ ಇಂಗ್ಲಿಷ್ ಸ್ಕೂಲಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೂರಾರು ಭಕ್ತರು ಇದ್ದರು.