ಕುಣಿಗಲ್ : ಪಟ್ಟಣದ ಸಮಗ್ರ ಮಾಜಿ ಪುರಸಭಾ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳ ಕೊಡುಗೆ ಅಪಾರವಾಗಿದೆ ಎಂದು ಪುರಸಭಾ ಅಧ್ಯಕ್ಷ ರಂಗಸ್ವಾಮಿ ತಿಳಿಸಿದರು.
ಪುರಸಭಾ ಕಾರ್ಯಾಲಯದಲ್ಲಿ ಪುರಸಭೆಯ ಮಾಜಿ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು ಸದಸ್ಯರುಗಳಿಗೆ ಹಾಗೂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರುಗಳಿಗೆ ಪುರಸಭಾ ವತಿಯಿಂದ ಪೌರ ಸನ್ಮಾನ ಹಾಗೂ ದೇವಸ್ಥಾನದ ಪ್ರತಿಷ್ಠಾಪನೆ 2022 /23ರ ಪಕ್ಷಿ ನೋಟ ಪುಸ್ತಕ ಬಿಡುಗಡೆ ಮಾತನಾಡುತ್ತಾ ಪುರಸಭೆಯು ಅಸ್ತಿತ್ವಕ್ಕೆ ಬಂದು 70 ವರ್ಷಗಳು ಕಳೆದಿದ್ದು ಮಾಜಿ ಅಧ್ಯಕ್ಷರು ಸದಸ್ಯರು ಉಪಾಧ್ಯಕ್ಷರು ಪುರಸಭೆಯ ಏಳಿಗೆಗೆ ಅಭಿವೃದ್ಧಿಗೆ ಇವರುಗಳ ಕೊಡುಗೆ ಅಪಾರವಾಗಿದೆ1928 ರಲ್ಲಿ ಅಸ್ತಿತ್ವಕ್ಕೆ ಬಂದ ಪುರಸಭೆಯ ಆಳ್ವಿಕೆ ನಡೆಸಿದ ಅಧ್ಯಕ್ಷರು ಸರ್ಕಾರದ ಯಾವುದೇ ಅನುದಾನದ ಇಲ್ಲದೆ ಜನರ ತೆರಿಗೆ ಹಣದಲ್ಲಿ ಅಭಿವೃದ್ಧಿ ಹಾಗು ನೌಕರರಿಗೆ ಸಂಬಳ ಸೌಲಭ್ಯವುಗಳನ್ನ ಇತಿಹಾಸ ಇಂದು ಪಟ್ಟಣವು ಬೃಹಕಾರವಾಗಿ ಬೆಳೆದು ನಿಂತಿದೆ ಈಗಾಗಲೇ ವಿದ್ಯುಚ್ಛಿತಾಗಾರ, ಖಾಸಗಿ ಬಸ್ ನಿಲ್ದಾಣ ನಿರ್ಮಾಣ ಮಾಡಲು ಡಿಪಿಆರ್ ಅನುಮೋದನೆಗೆ ಕಳಿಸಿಕೊಡಲಾಗಿದೆ 19 ಎಕರೆ ನಿವೇಶನ ಹಂಚಲು ಸಿದ್ಧತೆ .ಬೀದಿ ವ್ಯಾಪಾರಿಗಳಿಗೆ ಹಾಗೂ ಕ್ರೀಡಾಂಗಣ ಅಭಿವೃದ್ದಿಗೆ ಒಂದು ಕೋಟಿ 38 ಲಕ್ಷ ವೆಚ್ಚ ಮಾಡುತ್ತಿದ್ದು ಮಾಜಿ ಪುರಸಭಾ ಅಧ್ಯಕ್ಷರು ಹಾಗೂ ಸದಸ್ಯರುಗಳು ಹಾಕಿಕೊಟ್ಟ ತತ್ವ ಸಿದ್ಧಾಂತದ ಅಡಿಯಲ್ಲಿ ನಾವು ಸಹ ಕೆಲಸ ಮಾಡುತ್ತಿದ್ದು ಪಟ್ಟಣದ ಅಭಿವೃದ್ಧಿಗೆ ಇವರ ಸಂಪೂರ್ಣ ಸಹಕಾರ ಅವಶ್ಯಕತೆ ಇದೆ ಎಂದು ತಿಳಿಸಿದರು.
ಮಾಜಿ ಪುರಸಭಾಧ್ಯಕ್ಷರಾದ ಕೆ ಎನ್ ರಾಜಣ್ಣ ನಂಜುಂಡಯ್ಯ, ರಹಮಾನ್ ಶರೀಫ್ ,ಕೆ ಎಲ್ ಹರೀಶ್, ನಳಿನ ಭೈರಪ್ಪ, ಲಕ್ಷ್ಮೀನಾರಾಯಣ, ಅಬ್ದುಲ್ ಅಮೀದ್,ಗಾಯಿತ್ರಿ ಬಲರಾಮ್ ರಾಜ್. ಎಸ್ ಟಿ ಡಿ ಶ್ರೀನಿವಾಸ್, ಶಂಕರ್ . ಸೇರಿದಂತೆ ಅನೇಕರು ಮಾತನಾಡಿ ಕಳೆದ 70 ವರ್ಷದಿಂದ ಗುರುತಿಸದೇ ಇದ್ದಂತಹ ಮಾಜಿ ಪುರಸಭಾ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರುಗಳನ್ನು ಅಧ್ಯಕ್ಷರಾದ ರಂಗಸ್ವಾಮಿ ಸುಮಾರು 100 ಮಂದಿಯನ್ನು ಗುರ್ತಿಸಿ ಗೌರವಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಮುಂದಿನ ದಿನಗಳಲ್ಲಿ ಪಟ್ಟಣದ ಅಭಿವೃದ್ಧಿಗೆ ನಮ್ಮಗಳ ಸಂಪೂರ್ಣ ಸಹಕಾರ ಇದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷರು, ಮುಖ್ಯ ಅಧಿಕಾರಿ ರಮೇಶ್. ಪರಿಸರ ಇಂಜಿನಿಯರ್ ಚಂದ್ರಶೇಖರ್, ಸೇರಿದಂತೆ ಅನೇಕ ಸದಸ್ಯರು ಪುರಸಭೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.