ಜ.2ಕ್ಕೆ ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಆದಿಜಾಂಬವ ಸಮ್ಮೆಳನ : ವಿ.ಟಿ.ವೆಂಕಟರಾಮಯ್ಯ
ತುರುವೇಕೆರೆ : ತಾಲೂಕು ಆದಿಜಾಂಬವ ಸಮಾಜದ ವತಿಯಿಂದ ಪಟ್ಟಣದ ಗುರುಭವನದ ಆವರಣದಲ್ಲಿ ಆದಿಜಾಂಬವ ಸಮ್ಮೆಳನ ಹಾಗೂ ಸದಾಶಿವ ಆಯೋಗದ ವರದಿ ಜಾರಿಗಾಗಿ ಒತ್ತಾಯಿಸಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ವಿ.ಟಿ.ವೆಂಕಟರಾಮಯ್ಯ ತಿಳಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸ್ವಾತಂತ್ರ್ಯ ಲಭಿಸಿ 75 ವರ್ಷಗಳು ಕಳೆದರೂ ಅಶೃಸ್ಯ ಜನಾಂಗವೆಂಬ ಕಳಂಕ ಹೊತ್ತ ಮಾದಿಗ ಸಮುದಾಯವು ಆರ್ಥಿಕ,ಶೈಕ್ಷಣಿಕ, ಸಮಾಜಿಕವಾಗಿ ಪ್ರಗತಿಸಾದಿಸಲು ಸಾಧ್ಯವಾಗದಾಗಿದೆ. ಜನಸಂಖ್ಯಾವಾರು ಸದಾಶಿವ ಆಯೋಗ ಜಾರಿಯಾದರೇ ಮಾತ್ರ ಮಾದಿಗ ಸಮುದಾಯ ಏಳಿಗೆ ಸಾಧ್ಯವಾಗುತ್ತದೆ. ಈ ಹಿನ್ನಲೆಯಲ್ಲಿ ಆದಿಜಾಂಬವ ಸಮ್ಮೆಳನ ನಡೆಸುವ ಮೂಲಕ ಸದಾಶಿವ ಆಯೋಗದ ವರದಿ ಜಾರಿಗಳಿಸುವಂತೆ ಸರಕಾರದ ಗಮನ ಸಳೆಯುವುದು ಪ್ರಮುಖ ಉದ್ದೇಶವಾಗಿದೆ. ವರದಿ ಜಾರಿಗೆ ಒತ್ತಾಯಿಸುವ ಕ್ಷಣವನ್ನು ಸಮುದಾಯ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಾಕ್ಷೀಕರಿಸಬೇಕೆಂದು ಮನವಿ ಮಾಡಿದರು.
ಪಟ್ಟಣದಲ್ಲಿ ನಡೆಯಲಿರುವ ಆದಿಜಾಂಬವ ಸಮ್ಮೆಳನದ ಅಧ್ಯಕ್ಷತೆಯನ್ನು ಶಾಸಕ ಮಸಾಲಜಯರಾಮ್ ವಹಿಸಲಿದ್ದಾರೆ. ಉದ್ಘಾಟನೆಯನ್ನು ಕೆಂದ್ರ ಮಂತ್ರಿಗಲಾದ ವೈ.ಎ.ನಾರಾಯಣಸ್ವಾಮಿಯವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವರದ ಗೋವಿಂದಕಾರಜೋಳ,ಜೆ.,ಸಿ.ಮಾದುಸ್ವಾಮಿ,ಕೋಟಾ ಶ್ರೀನಿವಾಸಪ್ರಸಾದ್, ಮಾಜಿ ಶಾಸಕರಾದ ಎಂ.ಟಿ.ಕೃಷ್ಣಪ್ಪ, ಮಾಜಿ ಎಂ.ಎಲ್.ಸಿ. ಬೆಮೆಲ್ ಕಾಂತರಾಜ್, ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥಸ್ವಾಮೀಜಿ, ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ, ಷಡಕ್ಷರಿಸ್ವಾಮಿಜಿ, ಕರಿವೃಷಭದೇಶಿಕೇಂದ್ರಸ್ವಾಮೀಜಿಯವರುಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ . ಸಮಾವೇಶಕ್ಕೆ ಸುಮಾರು 10 ಸಾವಿರ ಸಮಾಜ ಬಂಧುಗಳ ಹಾಗೂ ಹಿತೈಷಿಗಳು ಆಗಮಿಸಲಿದ್ದು ಪೂರಕ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಆದಿಜಾಂಬವ ಸಮಾಜದ ಪದಾದಿಕಾರಿಗಳಾದ ನಿವೃತ್ತ ಪಿ.ಎಸ್.ಐ. ನಾಗರಾಜು, ಕುಮಾರ್, ಡಾ.ಚಂದ್ರಪ್ಪ, ಕೊಂಡಜ್ಜಿಪುಟ್ಟರಾಜು,ಬೋರಪ್ಪ, ತಿಮ್ಮೆಶ್,ಚನ್ನಬಸವಯ್ಯ, ಗಂಗಾಧರಸ್ವಾಮಿ, ಮುನಿಯೂರುರಂಗಸ್ವಾಮಿ, ಸುಬ್ರಹ್ಮಣ್ಯ, ಶಿವನಂಜಪ್ಪ, ಮತ್ತಿತರಿದ್ದರು.