
ಪಾವಗಡ : ಈ ತಿಂಗಳ 16 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶುಕ್ರವಾರ ತಾಲೂಕು ಕಚೇರಿಯಲ್ಲಿ ತಾಲ್ಲೂಕು ಆಡಳಿತ ವರ್ಗದಿಂದ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು ಸಭೆ ಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ತಹಸೀಲ್ದಾರ್ ಡಿ. ಎನ್. ವರದರಾಜ ರವರು ಈ ತಿಂಗಳು 16 ರಂದು ಶನಿವಾರ ಶ್ರೀ ಕೃಷ್ಣಾಷ್ಟಮಿಯನ್ನು ಸರ್ಕಾರ ನಿಯಮದಂತೆ ತಾಲೂಕ್ ಕಚೇರಿಯಲ್ಲಿ ಆಚರಣೆ ಮಾಡುತ್ತಿದ್ದು ಪಾವಗಡ ತಾಲ್ಲೂಕಿನ ಎಲ್ಲ ಯಾದವ ಮುಖಂಡರು ಜನ್ಮಾಷ್ಟಮಿಯ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಬೇಕೆಂದು ತಿಳಿಸಿದರು.
ಪಾವಗಡ ತಾಲ್ಲೂಕಿನ ಯಾದವ ಸಂಘದ ಅಧ್ಯಕ್ಷರಾದ ನರಸಿಂಹಪ್ಪ ಮಾತನಾಡಿ 16 ಶನಿವಾರದಂದು ಸರ್ಕಾರದ ನಿಯಮದಂತೆ ತಹಸಿಲ್ದಾರ್ ಕಚೇರಿಯಲ್ಲಿ ಆಚರಣೆ ಮಾಡಿ ಮತ್ತೆ 18 ರಂದು ಸೋಮವಾರ ರೊಪ್ಪ ಮತ್ತು ಪಾವಗಡ ಟೌನ್ ಎಲ್ಲಾ ಯಾದವ ಸಾಮಾಜಿಕ ವರ್ಗದವರು ಸೇರಿ ಆರತಿಗಳೊಂದಿಗೆ ಗುರುಭವನದಿಂದ ವೇಣುಗೋಪಾಲ್ ಸ್ವಾಮಿ ದೇವಸ್ಥಾನದವರೆಗೆ ಅದ್ದೂರಿಯಾಗಿ ಮೆರವಣಿಗೆ ಮುಖಾಂತರ ತೆರಳಿ ವೇಣುಗೋಪಾಲ ಸ್ವಾಮಿಗೆ ಆರತಿಗಳನ್ನು ಬೆಳಗಿ ಪೂಜೆಯನ್ನು ಮುಗಿಸಿಕೊಂಡು ಪ್ರಸಾದವನ್ನು ಸೇವಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಯಾದವ ಮುಖಂಡರಾದ ಮೈಲಾರ ರೆಡ್ಡಿ. ಬಲರಾಮ್ ರೆಡ್ಡಿ, ಬಾಲಕೃಷ್ಣ ರೈತ ಸಂಘದ ಪೂಜಾರಪ್ಪ, ಹನುಮಂತರೆಡ್ಡಿ, ಶಿವಕುಮಾರ್, ಶ್ರೀಧರ್, ಅನಿಲ್ ಈರಣ್ಣ, ಡಾಬಾ ಹರೀಶ, ಪಾಂಡು, ಗೋಪಾಲ್ ಇನ್ನ ಮುಂತಾದ ಯಾದವ ಮುಖಂಡರು ಹಾಜರಿದ್ದರು