
ಕುಣಿಗಲ್ : ಪಟ್ಟಣದ ಪುರಸಭೆ ಕಸ ತುಂಬುವ ಟ್ರ್ಯಾಕ್ಟರ್ ಹಾಗೂ ಆಟೋಗಳಿಗೆ ಯಾವುದೇ ದಾಖಲಾತಿಗಳು ಇಲ್ಲದ ಕಾರಣ ತುಮಕೂರು ಆರ್ ಟಿ ಓ ಅಧಿಕಾರಿಗಳು ಸೀಜ್ ಮಾಡಿ ತಮ್ಮ ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ.
ಆರ್‌ಟಿಓ ಇನ್ಸ್ ಪೆಕ್ಟರ್ ಮಧುಸೂದನ್ ಕುಣಿಗಲ್ ಪುರಸಭೆಯ ಕಸ ತುಂಬುವ ಟ್ರ್ಯಾಕ್ಟರ್ ಗೆ ಯಾವುದೇ ದಾಖಲೆಗಳು ಇಲ್ಲ ಈ ವಾಹನದಿಂದ ಯಾರಿಗಾದರೂ ಅನಾಹುತವಾದರೆ ಯಾರು ಜವಾಬ್ದಾರಿ ಎಂದು ಸಾರ್ವಜನಿಕರಿಂದ ದೂರುಗಳು ಬಂದಿದ್ದವು, ಮತ್ತು ತುಮಕೂರು ಲೋಕಾಯುಕ್ತರಿಂದ ಕೂಡ ದೂರು ಬಂದ ಹಿನ್ನೆಲೆಯಲ್ಲಿ ಶನಿವಾರ ಕುಣಿಗಲ್ ಗೆ ಭೇಟಿ ನೀಡಿ ಪುರಸಭೆಯ ಕಸ ತುಂಬವ ಟ್ರ್ಯಾಕ್ಟರ್ ನ ಪರಿಶೀಲನೆ ಮಾಡಿದಾಗ ಟ್ರಾಕ್ಟರ್ ಗೆ ಸಂಬಂಧಪಟ್ಟ ಯಾವುದೇ ದಾಖಲೆಗಳು ಇಲ್ಲ, ನಂಬರ್ ಪ್ಲೇಟ್ ಇರುವುದಿಲ್ಲ, ಟ್ರ್ಯಾಕ್ಟರ್ ಚಾರ್ಸಿ ನಂಬರ್ ಕಾಣುತ್ತಿಲ್ಲ, ಆದ್ದರಿಂದ ಕುಣಿಗಲ್ ಪುರಸಭೆಯ ಕಸ ತುಂಬುವ ಟ್ಯಾಕ್ಟರ್ ಜೊತೆಗೆ ಎರಡು ಆಟೋಗಳ ಕೆಲವು ದಾಖಲಾತಿಗಳು ಇಲ್ಲದ ಕಾರಣ ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಆರ್ ಟಿ ಐ ಸಾಮಾಜಿಕ ವೇದಿಕೆ ರಾಜ್ಯಾಧ್ಯಕ್ಷ ಹೆಚ್ ಜಿ ರಮೇಶ್ ಪತ್ರಿಕೆಯೊಂದಿಗೆ ಮಾತನಾಡಿ ಕುಣಿಗಲ್ ಪುರಸಭೆ ಕೆಲವು ವಾಹನಗಳಿಗೆ ದಾಖಲಾತಿಗಳು ಇಲ್ಲದಿರುವ ಬಗ್ಗೆ ತುಮಕೂರು ಲೋಕಾಯುಕ್ತರು ಹಾಗೂ ಆರ್ ಟಿ ಓ ಅಧಿಕಾರಿಗಳಿಗೆ ಕುಣಿಗಲ್ ಪುರಸಭೆಯ ಎಲ್ಲಾ ವಾಹನಗಳ ದಾಖಲಾತಿಗಳನ್ನು ಪರಿಶೀಲನೆ ಮಾಡಬೇಕೆಂದು ಮನವಿ ಮಾಡಿದ್ದ ಹಿನ್ನೆಲೆ ತುಮಕೂರು ಆರ್‌ಟಿಓ ಅಧಿಕಾರಿಗಳು ಶನಿವಾರ ದಿಢೀರ್ ಧಾಳಿ ಮಾಡಿ ಪುರಸಭೆಯ ಯಾವುದೇ ದಾಖಲಾತಿಗಳು ಇಲ್ಲದೆ ಕಸ ತುಂಬುವ ಟ್ಯಾಕ್ಟರ್ ಅನ್ನು ತಮ್ಮ ವಶಕ್ಕೆ ಪಡೆದಿರುವ ಆರ್.ಟಿ.ಓ ಅಧಿಕಾರಿಳಿಗೆ ಅಭಿನಂದನೆ ತಿಳಿಸಿರುವ ಅವರು ಪುರಸಭೆಯ ಇನ್ನೂ ಕೆಲವು ವಾಹನಗಳ ದಾಖಲಾತಿಗಳು ಇಲ್ಲದ ಕಾರಣ ಪುರಸಭೆಗೆ ಸಂಬಂಧಪಟ್ಟ ಎಲ್ಲಾ ವಾಹನಗಳ ದಾಖಲಾತಿಗಳನ್ನು ಪರಿಶೀಲನೆ ಮಾಡಬೇಕೆಂದು ಆರ್ ಟಿ ಓ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ವರದಿ : ರೇಣುಕಾಪ್ರಸಾದ್



