ಶಿರಾ : ರೈತರ ಬದುಕನ್ನು ಹಸನಾಗಿಸಲು ನರೇಗಾದಲ್ಲಿ ಸಾಕಷ್ಟು ಸೌಲಭ್ಯಗಳಿವೆ. ಕೆರೆ, ಕುಂಟೆಗಳ ಅಭಿವೃದ್ಧಿ ಮೂಲಕ ಜಲಸಂರಕ್ಷಣೆ ಕೈಗೊಳ್ಳುವುದರ ಜತೆಗೆ ನೀರಿನ ಮಹತ್ವ ಅರಿಯಬೇಕಿದೆ ಎಂದು ತಾಲೂಕಿನ ಸಹಾಯಕ ನಿರ್ದೇಶಕರಾದ ವೆಂಕಟೇಶ್.ಡಿ.ವಿ ತಿಳಿಸಿದರು.
ಅವರು ತಾಲೂಕಿನ ನೇರಳಗುಡ್ಡ ಗ್ರಾಮ ಪಂಚಾಯಿತಿ ಅಜ್ಜೇನಳ್ಳಿ ಅಮೃತ್ಸರೋವರ ಕಾಮಗಾರಿ ಸ್ಥಳದಲ್ಲಿ ‘ಜಲಸಂಜೀವಿನಿ’ ಯೋಜನೆಯಡಿ ನಮ್ಮನಡಿಗೆ ರೈತರ ಕಡೆಗೆ ಸಂವಾದ ಕಾರ್ಯಕ್ರಮ ರಾಷ್ಟಿçÃಯ ರೈತರ ದಿನಾಚರಣೆ ನಿಮಿತ್ತ ಜಲಸಂಜೀವಿನಿ-ರೈತರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕನಿಷ್ಟ ಶೇ 65 ರಷ್ಟು ವೆಚ್ಚವನ್ನು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಆಧಾರಿತ ಕಾಮಗಾರಿಗಳ ಅನುಷ್ಟಾನಕ್ಕೆ, ಭರಿಸಬೇಕೆಂಬ ನಿಯಮವಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಕೆರೆಗಳ ಸಮಗ್ರ ಅಭಿವೃದ್ದಿ, ಕಾಲುವೆಗಳ ಪುನಶ್ಚೇತನದಿಂದ ನೀರಿನ ಅಂತರ್ಜಲದ ಮಟ್ಟ ಹೆಚ್ಚಾಗುತ್ತದೆ ಎಂದು ಹೇಳಿದರು.
ಎಫ್‌ಈಎಸ್ ಸಂಸ್ಥೆ ಜಿಲ್ಲಾ ಸಂಯೋಜಕರಾದ ಸೋಮಕುಮಾರ್ ಅವರು ಮಾತನಾಡಿ ಗ್ರಾಮೀಣ ವಲಯದಲ್ಲಿನ ಜೀವನೋಪಾದಿಗಳನ್ನು ಸುಸ್ಥಿರಗೊಳಿಸಲು ನೈಸರ್ಗಿಕ ಸಂಪನ್ಮೂಲ ಅಭಿವೃದ್ಧಿ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಗುರುತಿಸಿ, ರೈತರಿಗೆ ಗೋಕಟ್ಟೆ ನಿರ್ಮಾಣ, ಕಲ್ಯಾಣಿಗಳ ಪುನಶ್ಚೇತನ, ಚೆಕ್ ಡ್ಯಾಂಗಳ ನಿರ್ಮಾಣ, ಕೊಳವೆಬಾವಿ ಮರುಪೂರಣ ಘಟಕ, ಕಂದಕಬದು, ರಸ್ತೆಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಡುವುದು ಮುಂತಾದ ಮಣ್ಣು ಮತ್ತು ನೀರಿನ ಸಂರಕ್ಷಣೆ ಆಧಾರಿತ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಅನುಷ್ಟಾನಗೊಳಿಸುವ ಸಲುವಾಗಿ ಕ್ರಿಯಾಯೋಜನೆ ತಯಾರಿಕೆಯಲ್ಲಿ ಎಲ್ಲರ ಭಾಗವಹಿಸುವಿಕೆ ಅಗತ್ಯ ಎಂದು ಹೇಳಿದರು.
ತಾಲೂಕು ಐಈಸಿ ಸಂಯೋಜಕರಾದ ಶಿವಕುಮಾರ್ ಮಾತನಾಡಿ ಮಹಾತ್ಮಗಾಂಧಿ üನರೇಗಾ ಯೋಜನೆಯಡಿ ಜಿಯೋ-ಸ್ಪೇಷಿಯಲ್ ತಂತ್ರಜ್ಞಾನಗಳನ್ನು ಬಳಸಿಕೊಂಡು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳ ಅನುಷ್ಠಾನಿಸುವ ಕಾರ್ಯಕ್ರಮವೇ ಜಲಸಂಜೀವಿನಿ. ಈ ಯೋಜನೆಯಡಿ ದೂರಸಂವೇದಿ ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆಯ ತಾಂತ್ರಿಕತೆಯನ್ನು ಆಧರಿಸಿ ವೈಜ್ಞಾನಿಕವಾಗಿ ಕ್ರಿಯಾಯೋಜನೆ ರೂಪಿಸಲಾಗುತ್ತದೆ. ಆದ್ದರಿಂದ ಈ ಭಾಗದ ರೈತರು ಎಲ್ಲೆಲ್ಲಿ ನೀರಿನಸಂರಕ್ಷಣೆ ಆಗಬೇಕಿದೆ. ಎಷ್ಟೆಷ್ಟು ನೀರಿನ ಬೇಡಿಕೆ ಇದೆ ಎಂಬುದನ್ನು ಸರ್ವೇ ಸಂದರ್ಭದಲ್ಲಿ ಅಗತ್ಯ ಮಾಹಿತಿ ನೀಡಬೇಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನೇರಳಗುಡ್ಡ ಗ್ರಾಮ ಪಂಚಾಯಿತಿ ಸಿಬ್ಬಂದಿ, ಅಜ್ಜೇನಹಳ್ಳಿ ಗ್ರಾಮದ ರೈತರು ಸಂವಾದ ಕಾರ್ಯಕ್ರಮದಲ್ಲಿ ಹಾಜರಿದ್ದರು.