ಮಧುಗಿರಿ

ಗ್ರಾ.ಪಂ.ಸಭೆಯಲ್ಲಿ ಮಹಿಳಾ ಸದಸ್ಯರ ಪತಿಗಳು ಭಾಗವಹಿಸಿದರೆ ಕಠಿಣ ಕ್ರಮ : ಜಿ.ಪಂ. ಸಿಇಓ ಡಾ.ವಿದ್ಯಾಕುಮಾರಿ

ಮಧುಗಿರಿ : ಗ್ರಾಮಪಂಚಾಯಿತಿಯಲ್ಲಿ ಮಹಿಳೆಯರು ಸದಸ್ಯರಾಗಿದ್ದರೆ ಅವರ ಗಂಡಂದಿರು ಸಭೆಯಲ್ಲಿ ಭಾಗವಹಿಸುವುದಕ್ಕೆ ಅವಕಾಶವಿಲ್ಲ. ಹಾಗೇನಾದರೂ ದುಂಡಾವರ್ತನೆ ತೋರಿ ಭಾಗವಹಿಸಿದ್ದು ದಾಖಲೆ ಸಿಕ್ಕರೆ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯಲ್ಲ ಎಂದು ಜಿ.ಪಂ. ಸಿಇಓ ಡಾ.ವಿದ್ಯಾಕುಮಾರಿ ಎಚ್ಚರಿಸಿದರು.
ಪಟ್ಟಣದ ತಾ.ಪಂ,ನ ಸಾಮಥ್ರ‍್ಯಸೌಧದಲ್ಲಿ ನಡೆದ ಸಾರ್ವಜನಿಕರ ಕುಂದು ಕೊರತೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಈಗಾಗಲೇ ಕೊಡಗದಾಲ ಗ್ರಾ.ಪಂ.ನಲ್ಲಿ ಈ ರೀತಿಯ ಕೃತ್ಯ ನಡೆದಿದ್ದು ಕಂಡು ಬಂದಿದೆ ಮುಂದೆ ಇದು ಮುಂದುವರೆದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು. ಅಲ್ಲಿ ದಲಿತ ಸಮಾಜದ ಪಿಡಿಓಗಳು ಕರ್ತವ್ಯಕ್ಕೆ ಬಂದಾಗಲೆಲ್ಲ ಆಡಳಿತ ಸದಸ್ಯರು ಕಿರುಕುಳ ಕೊಡುತ್ತಿದ್ದಾರೆ. ಅದು ಈಗಲೂ ಮುಂದುವರೆದಿದ್ದು ಸರಿಪಡಿಸದಿದ್ದರೆ ಗ್ರಾ.ಪಂ. ಮುಂದೆ ಧರಣಿ ಕೂರುವುದಾಗಿ ದಲಿತ ಮುಖಂಡ ದೊಡ್ಡೇರಿ ಕಣಿಮಯ್ಯ ಹಾಗೂ ಕೊಡಗದಾಲ ಗ್ರಾಮದ ದಲಿತ ಮುಖಂಡರು ತಿಳಿಸಿದರು. ಈ ಬಗ್ಗೆ ಎರಡೂ ಕಡೆಯಿಂದ ಸಮಸ್ಯೆಯಿದ್ದು ಪರಿಶೀಲಿಸುತ್ತೇನೆ ಎಂದರು. ಐಡಿಹಳ್ಳಿಯ ಚೌಳಹಳ್ಳಿ ಕೆರೆಯಲ್ಲಿ ಮೀನುಗಾರಿಕೆ ಮಾಡಲು ಟೆಂಡರ್ ಕರೆದಿರುವ ಬಗ್ಗೆ ಬಂದ ದೂರಿಗೆ ಪ್ರತಿಕ್ರಿಯಿಸಿದ ಸಿಇಓ ಇಲಾಖೆ ಹಾಗೂ ಸ್ಥಳೀಯ ಗ್ರಾ.ಪಂ.ನಲ್ಲಿನ ಗೊಂದಲವೇ ಇದಕ್ಕೆ ಕಾರಣವಾಗಿದ್ದು ಸರಿಪಡಿಸಿಕೊಳ್ಳಿ ಎಂದರು. ನ್ಯಾಯಾಲಯದಲ್ಲಿರುವ ಪ್ರಕರಣಕ್ಕೆ ಸಂಬಂಸಿದ ಪ್ರಕರಣದಲ್ಲಿ ಏಕಪಕ್ಷೀಯವಾಗಿ ಆದೇಶ ಮಾಡದಂತೆ ಹೊಸಕೆರೆ ಪಿಡಿಓಗೆ ಸೂಚಿಸಿದರು. ಸ್ವಾಮಿ ವಿವೇಕಾನಂದ ಸ್ವಸಹಾಯ ಸಂಘದ ಬದಲಿಗೆ ಸ್ವಾಮಿ ವಿವೇಕಾನಂದ ಯುವಕರ ಸಂಘ ಎಂದು ಬದಲಾಯಿಸಿರುವ ಸರ್ಕಾರ ವಿವಿಧ ಚಟುವಟಿಕೆಗಳಿಗೆ 5 ಲಕ್ಷ ಸಾಲ ನೀಡಲಿದ್ದು 1 ಲಕ್ಷ ಸಬ್ಸಿಡಿ ಸಿಗಲಿದೆ. ಇಂಹ ಸಂಘಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಡಿಸೆಂಬರ್ ಒಳಗಾಗಿ ಯೋಜನಾ ವರದಿ ನೀಡಲು ಸೂಚಿಸಿದರು.
ನಿವೃತ್ತಿಯಾದರೂ ಸರ್ಕಾರಿ ಸಿಮ್ ಬಳಕೆ : ದೊಡ್ಡಯಲ್ಕೂರು ಗ್ರಾ.ಪಂ.ನ ಸರ್ಕಾರಿ ಸಿಮ್ ಕಾರ್ಡ್ ನಿವೃತ್ತಿಯಾದ ಪಿಡಿಓ ನಾಗರಾಜು ಎಂಬುವವರು ಬಳಸುತ್ತಿರುವ ಬಗ್ಗೆ ಸಭೆಯ ಗಮನಕ್ಕೆ ಬಂದಿದ್ದು ಪರಿಶೀಲಿಸಿದಾಗ ಸ್ಪಷ್ಟವಾಗಿತ್ತು. ಕರೆ ಮಾಡಿದಾಗ ನಿವೃತ್ತ ಅಧಿಕಾರಿಯೇ ಕರೆ ಸ್ವೀಕರಿಸಿದ್ದರು. ಆದರೆ ಮತ್ತೆ ಅದೇ ನಂರ‍್ಗೆ ಕರೆ ಮಾಡಿದಾಗ ಕಾರ್ಯದರ್ಶಿ ಬಳಿ ಇತ್ತು. ಒಂದೇ ಸಂಖ್ಯೆಯ ಸಿಮ್ ಕಾರ್ಡನ್ನು ಇಬ್ಬರು ಬಳಸುತ್ತಿದ್ದಾರೆ ಎಂಬ ಅಂಶ ಸಭೆಗೆ ತಿಳಿಯಿತು. ಆದರೆ ಒಂದೇ ಸಂಖ್ಯೆಯ 2 ಸಿಮ್ ಹೇಗೆ ಕೆಲಸ ಮಾಡುತ್ತದೆ ಎಂಬುದು ತಿಳಿಯದೆ ಅಧಿಕಾರಿಗಳು ಸುಮ್ಮನಾದರು.
ಶಾಲೆಯ ಅನುದಾನದ ಜಮೀನು ದಾಖಲಿಸಿ : ಸರ್ಕಾರಿ ಜಾಗದಲ್ಲಿರುವ ಶಾಲಾ ಜಮೀನುಗಳನ್ನು ಮೊದಲು ಸರ್ವೆ ಮಾಡಿಸಿ ಖಾತೆ ಸಿದ್ದ ಮಾಡಬೇಕು. ನಂತರ ಖಾಸಗಿಯಾಗಿ ಶಾಲೆಗೆ ಭೂ ದಾನ ಕೊಟ್ಟಿರುವ ದಾಖಲೆಗಳನ್ನು ಶೀಘ್ರವಾಗಿ ಸರಿಪಡಿಸಿ. ಈಗಾಗಲೇ ಇಂತಹ 106 ಪ್ರಕರಣದಲ್ಲಿ 58 ದಾಖಲಾತಿಗಳು ಲಭ್ಯವಿದೆ ಎಂದರು.
ಸಿಸಿಟಿವಿ-ಗುರುತಿನ ಚೀಟಿಯಿಲ್ಲ : ಗ್ರಾ.ಪಂ.ಗಳಲ್ಲಿರುವ ಸಿಸಿಟಿವಿ ಕಾರ್ಯ ನಿರ್ವಹಿಸುತ್ತಿಲ್ಲ. ಸರ್ಕಾರಿ ಮೊಬೈಲ್ಗೆ ಕರೆ ಮಾಡಿದರೆ ಹಲವಾರು ಪಿಡಿಓಗಳು ಕರೆ ಸ್ವೀಕರಿಸಲ್ಲ ಎಂಬ ಆರೋಪ ಕೇಳಿಬಂದಿತು. ಕಚೇರಿಯಲ್ಲಿ ಸಾರ್ವಜನಿಕರ ಸಂಪರ್ಕ ಅಽಕಾರಿಯ ಮೊಬೈಲ್ ಸಂಖ್ಯೆ ಹಾಗೂ ಸಕಾಲದ ನಾಮ-ಫಲಕವಿಲ್ಲ. ಹಾಗೂ ಸಿಂಗನಹಳ್ಳಿ ಗ್ರಾ.ಪಂ.ನಲ್ಲಿ ಸಂಜೆ 4.30 ಕ್ಕೆ ಬೀಗ ಹಾಕುವ ಬಗ್ಗೆ ಮಾಹಿತಿ ಪಡೆದ ಸಿಇಓ ಗರಂ ಆದರು. ಬೆಳಿಗ್ಗೆ 10 ರಿಂದ ಸಂಜೆ 5.30 ರವರೆಗೂ ಕಚೇರಿ ಮುಚ್ಚುವಂತಿಲ್ಲ. ಶೀಘ್ರ ಸಕಾಲ ಬೋರ್ಡ ಅಳವಡಿಸಿ ಈ ಬಗ್ಗೆ ಮತ್ತೇ ದೂರು ಬಂದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ತಾಲೂಕಿನಲ್ಲಿ ಪಿಡಿಓಗಳ ಸಂಖ್ಯೆ ಹೆಚ್ಚಿದ್ದು ಕೆಲಸ ಮಾಡುವವರಿಗೆ ಹೆಚ್ಚುವರಿ ಕೆಲಸ ನೀಡಿ ಆ ಪಟ್ಟಿಯನ್ನು ನೀಡಲು ಇಓರವರಿಗೆ ಸೂಚಿಸಿದರು.
40 ಅರ್ಜಿಗಳ ಪರಿಶೀಲನೆ ಬಳಿಕ ಶ್ರಾವಂಡನಹಳ್ಳಿ , ಚಿಕ್ಕಮಾಲೂರು ಗ್ರಾಮದಲ್ಲಿ ಕಸವಿಲೇವಾರಿ ಘಟಕ ಹಾಗೂ ಶಾಲಾ ಮೂಲಭೂತ ಸೌಕರ್ಯದ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಜಿ.ಪಂ. ಉಪಕಾರ್ಯದರ್ಶಿ (ಆಡಳಿತ) ಹಾಲಪ್ಪ ಪೂಜಾರ್, ಉಪಕಾರ್ಯದರ್ಶಿ (ಅಭಿವೃದ್ಧಿ) ಅತೀಕ್ ಪಾಷ, ಮುಖ್ಯ ಯೋಜನಾಧಿಕಾರಿ ಸಣ್ಣ ನರಸೀಯಪ್ಪ, ಇಓ ಲಕ್ಷ್ಮಣ್, ಎಡಿ ಗುರುಮೂರ್ತಿ, ಎಓ ಮಧುಸೂಧನ್, ತಾಲೂಕು ಅಧಿಕಾರಿಗಳು, ಎಲ್ಲ ಪಿಡಿಓಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker