ತುಮಕೂರು

ನನ್ನ ಬಂಧನವೂ ಇಲ್ಲ, ನನಗೆ ಎರಡನೇ ಹೆಂಡತಿಯೂ ಇಲ್ಲ, ಇದೆಲ್ಲ ರಾಜಕೀಯ ಪ್ರೇರಿತ ಸುಳ್ಳು ಅಪಪ್ರಚಾರ : ಆಟಿಕಾ ಬಾಬು

ತುಮಕೂರು : ಇತ್ತೀಚಗೆ ಕೆಲ ಮಾಧ್ಯಮಗಳಲ್ಲಿ ಕಳ್ಳತನದ ಮಾಲು ಖರೀದಿ ಮತ್ತು ಎರಡನೇ ಹೆಂಡತಿಯ ಮೇಲಿನ ಕೌಟುಂಬಿಕ ದೌರ್ಜನ್ಯ ಪ್ರಕರಣದ ಅಡಿಯಲ್ಲಿ ಆಂಧ್ರ ಪೊಲೀಸರು ಆಟಿಕಾ ಬಾಬು ಅವರನ್ನು ಬಂಧಿಸಿದ್ದಾರೆ ಎಂಬ ಸುದ್ದಿ ಬಿತ್ತರವಾಗಿದ್ದು, ಇದು ಸತ್ಯಕ್ಕೆ ದೂರವಾದ ವರದಿಯಾಗಿದೆ.ಯಾವ ರಾಜ್ಯದ ಪೊಲೀಸರು ನನ್ನನ್ನು ಬಂಧಿಸಿಲ್ಲ ಎಂದು ಅಟಿಕಾ ಗೋಲ್ಡ್ ಕಂಪನಿಯ ಷೇರುದಾರರಲ್ಲಿ ಒಬ್ಬರಾದ ಅಟಿಕಾ ಬಾಬು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ನನ್ನ ಸಾಕು ಮಗನ ಕುಟುಂಬದಲ್ಲಿ ನಡೆದ ಘಟನೆ ಕುರಿತಂತೆ ಆಂಧ್ರದ ಹೇಲೂರು ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದರಿ ಪ್ರಕರಣದಲ್ಲಿ ನನ್ನ ವಿನಾಕಾರಣ ನನ್ನ ಕುಟುಂಬದವರನ್ನು ಸೇರಿಸಿ ದೂರು ದಾಖಲಾಗಿತ್ತು.ಅದಕ್ಕಾಗಿ ಹೇಲೂರು ಪೊಲೀಸರು ನನಗೆ ಸಿಆರ್‌ಪಿಸಿ 41ರ ಅಡಿಯಲ್ಲಿ ನೊಟೀಷ್ ನೀಡಿದ್ದರು. ಸದರಿ ನೊಟೀಷ್‌ಗೆ ಉತ್ತರ ನೀಡಲು ಆಂಧ್ರ ಪ್ರದೇಶದ ಪೊಲೀಸರೊಂದಿಗೆ ತೆರಳಿದ್ದೆನು.ಇದನ್ನು ಬಿಟ್ಟರೆ ಕಳ್ಳ ಮಾಲು ಖರೀದಿ, ಎರಡನೇ ಹೆಂಡತಿ ಇವೆಲ್ಲವೂ ಕಪೋಲಕಲ್ಪಿತ ಸುದ್ದಿಗಳಾಗಿವೆ ಎಂದರು.
ನನ್ನ ಸಾಕು ಮಗನನ್ನು ಎಂ.ಬಿ.ಬಿ.ಎಸ್ ಓದಿಸಿ,ಆಂಧ್ರಪ್ರದೇಶದ ವಿಶಾಕಪಟ್ಟಣ ಸಮೀಪದ ಹೇಲೂರು ನಗರದ ಮೇಯರ್ ಅವರ ಮಗಳನ್ನು ತಂದು ಮದುವೆ ಮಾಡಲಾಗಿತ್ತು.ಮದುವೆ ನಂತರ ನನ್ನ ಮಗ ಪೇಜರ್ ಟೌನ್‌ನಲ್ಲಿರುವ ನನ್ನದೇ ಆಸ್ತಿಯಲ್ಲಿ ರುವ ಪ್ರತ್ಯೇಕ ಮನೆಯಲ್ಲಿ ಹೆಂಡತಿಯೊಂದಿಗೆ ವಾಸವಾಗಿದ್ದ,ಅಲ್ಲದೆ ತನ್ನ ಮಾವನ ಜೊತೆ ಸೇರಿ ಆಟಿಕಾ ಆರ್ಗ್ ಎಂಬ ಹೊಸ ಸಂಸ್ಥೆ ತೆರೆದು ವ್ಯವಹಾರ ನಡೆಸುತ್ತಿದ್ದು,ಇತ್ತೀಚಗೆ ಗಂಡ, ಹೆಂಡತಿ ನಡುವೆ ವೈಮನಸ್ಸು ಉಂಟಾದ ಪರಿಣಾಮ ಹೇಲೂರಿನಲ್ಲಿ ಕೌಟುಂಬಿಕ ದೌರ್ಜನ್ಯ ಕೇಸು ದಾಖಲಾಗಿತ್ತು.ಈ ಕೇಸಿಗೆ ಸಂಬಂಧಪಡದಿದ್ದರೂ ನನ್ನ ಕುಟುಂಬದವರ ವಿರುದ್ದ ದೂರು ದಾಖಲಾಗಿತ್ತು.ನೊಟೀಷ್ ಬಂದ ನಂತರ ಪೊಲೀಸರೊಂದಿಗೆ ವಿಚಾರಣೆಗೆ ಹಾಜರಾಗಿ,ಪ್ರಕರಣವನ್ನು ಇತ್ಯರ್ಥ ಗೊಳಿಸಿದ್ದೇವೆ ಎಂದು ಇಡೀ ಪ್ರಕರಣವನ್ನು ಮಾಧ್ಯಮದವರ ಮುಂದೆ ತೆರೆದಿಟ್ಟರು.
ನಾನು 2013ರ ನವೆಂಬರ್ 29 ರಂದು ಏಕೈಕ ಪಾಲುದಾರನಾಗಿ ಅಟಿಕಾ ಗೊಲ್ಡ್ ಕಂಪನಿ ಸ್ಥಾಪಿಸಿದ್ದು, ಕಂಪನಿ ಬೆಳೆದಂತೆ ಅದನ್ನು 2015ರಲ್ಲಿ ಆಟಿಕಾ ಗೋಲ್ಡ್ ಪ್ರವೈಟ್ ಲಿ ಕಂಪನಿಯಾಗಿಸಿ,ನನ್ನ ಮಗ,ನನ್ನ ಹೆಂಡತಿ ಹಾಗೂ ನಾನು ಮೂವರು ಪಾಲುದಾರರಾಗಿದ್ದೆವು.ಆದರೆ 2016ರಲ್ಲಿ ನಿರ್ದೇಶನ ಸ್ಥಾನದಿಂದ ಕೆಳಗೆ ಇಳಿದು,ನಿವೃತ್ತ ಅಧಿಕಾರಿಯಾದ ವೇದಪ್ರಕಾಶ್ ಎಂಬುವವರೆಗೂ ಸಂಪೂರ್ಣ ಜವಾಬ್ದಾರಿಯನ್ನು ನೀಡಲಾಗಿದೆ.2016ರ ನಂತರ ನಾನು ಅಟಿಕಾ ಗೋಲ್ಡ್ ಕಂಪನಿ ಮಾಲೀಕನಲ್ಲ.ಷೇರುದಾರ ಅಷ್ಟೇ.ಕಳ್ಳತನದ ಮಾಲುಗಳನ್ನು ಖರೀದಿಸದಂತೆ ತಡೆಯುವ ನಿಟ್ಟಿನಲ್ಲಿಯೆ ನಮ್ಮ ಕಂಪನಿ ಇರುವ ಐದು ರಾಜ್ಯಗಳಲ್ಲಿರುವ ಶಾಖೆಗಳಲ್ಲಿ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದೇವೆ.ಅವರ ಪರಿಶೀಲನೆಯ ನಂತರವು ಕೆಲವೊಮ್ಮೆ ಕಳ್ಳ ಮಾಲು ಖರೀದಿಯಾದರೆ ಅದನ್ನು ನ್ಯಾಯಾಲಯದ ಮೂಲಕ ಬಗೆಹರಿಸಿಕೊಳ್ಳುತ್ತೇವೆ. ವರ್ಷಕ್ಕೆ 1200-1500 ಕೋಟಿ ವ್ಯವಹಾರ ನಡೆಯುವಾಗ ಸಣ್ಣಪುಟ್ಟ ತಪ್ಪುಗಳಾಗುವುದು ಸಹಜ ಎಂದರು.
ಪಂಚರತ್ನ ಯಾತ್ರೆಗೆ ಖರ್ಚಿನ ಹಣ ನನ್ನದೇ : ಡಿಸೆಂಬರ್ 01ರಂದು ತುಮಕೂರು ನಗರದಲ್ಲಿ ನಡೆದ ಪಂಚರತ್ನ ಯಾತ್ರೆಯ ಸಂಪೂರ್ಣ ಖರ್ಚು ನನ್ನದೆ ಆಗಿದೆ. ಹೆಚ್.ಡಿ.ಕುಮಾರಸ್ವಾಮೀಯೇ ನಮ್ಮ ನಾಯಕರು 2023ರ ಚುನಾವಣೆಯಲ್ಲಿ ತುಮಕೂರು ನಗರದಿಂದ ನಾನು ಶಾಸಕನಾಗಿ ಆಯ್ಕೆಯಾಗುವುದು ಖಚಿತ. ಸ್ಪತಂತ್ರವಾಗಿ ಸ್ಪರ್ಧಿಸುವುದಿಲ್ಲ. ಪಕ್ಷದ ಅಭ್ಯರ್ಥಿಯಾಗಿಯೇ ಸ್ಪರ್ಧಿಸುತ್ತೇನೆ. ಪ್ರಸ್ತುತ ಜೆಡಿಎಸ್ ಪಕ್ಷದಲ್ಲಿಯೇ ಇದ್ದೇನೆ ಎಂದು ಆಟಿಕಾ ಬಾಬು ಹೇಳಿದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker