ನ.6ರ ಖರ್ಗೆಯವರ ಅಭಿನಂದನಾ ಸಮಾವೇಶಕ್ಕೆ ಮೂರು ತಾಲೂಕುಗಳಿಂದ ಸುಮಾರು ಆರು ಸಾವಿರ ಕಾರ್ಯಕರ್ತರು ಭಾಗಿ : ಮಯೂರ ಜಯಕುಮಾರ್
ಮಧುಗಿರಿ : ಸರ್ವೊದಯ ಸಮಾವೇಶಕ್ಕೆ ಮೂರು ತಾಲೂಕುಗಳಿಂದ ಸುಮಾರು ಆರು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಆಗಮಿಸಲಿದ್ದಾರೆಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಯೂರ ಜಯಕುಮಾರ್ ತಿಳಿಸಿದರು.
ಪಟ್ಟಣದ ಎಂ.ಎನ್.ಕೆ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯವರ ಅಭಿನಂದನಾ ಸಮಾರಂಭದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. 52 ವರ್ಷಗಳ ಹಿಂದೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಖರ್ಗೆ ಯವರು ಇಂದು ಎಐಸಿಸಿ ಅಧ್ಯಕ್ಷರಾಗಿರುವುದು ಕಾಂಗ್ರೆಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಿಗೂ ಅಧಿಕಾರ ಸಿಗುತ್ತದೆ ಎಂಬುದನ್ನು ಪಕ್ಷ ತೋರಿಸಿಕೊಟ್ಟಿದೆ. ಇತ್ತೀಚೆಗೆ ನಡೆದ ಭಾರತ್ ಜೋಡೋ ಯಾತ್ರೆಗೆ ತುಮಕೂರು ಜಿಲ್ಲೆಯಿಂದ ಸುಮಾರು 1 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿ ಜಿಲ್ಲೆಯಲ್ಲಿನ ಕಾಂಗ್ರೆಸ್ ಪಕ್ಷಕ್ಕೆ ಜೀವ ತುಂಬಿದ್ದಾರೆ. ಆದೆ ರೀತಿ ಇತ್ತೀಚೆಗೆ ನಡೆದ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಶೇ.83ರಷ್ಟು ಮತದಾನ ರಾಜ್ಯದಿಂದ ಆಗಿದೆ. ತಾಲೂಕುಗಳ ಪ್ರತಿ ಗ್ರಾ.ಪಂಗಳಿಂದ ಕಾರ್ಯಕರ್ತರು ಸಮಾವೇಶಕ್ಕೆ ಆಗಮಿಸಬೇಕು ಹಾಗೂ ಕೋಮವಾದಿ ಬಿಜೆಪಿ ಸರಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಸರಕಾರವನ್ನು ಮತ್ತೆ ಅಧಿಕಾರಕ್ಕೆ ತರುವ ಮೂಲಕ ಖರ್ಗೆಯವರಿಗೆ ಗೌರವ ತರುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕೆಂದರು.
ಕೆಪಿಸಿಸಿ ಉಪಾಧ್ಯಕ್ಷ ಕೆ.ಎನ್ ರಾಜಣ್ಣ ಮಾತನಾಡಿ ನ.6ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಖರ್ಗೆಯವರ ಅಭಿನಂದನಾ ಸಮಾವೇಶಕ್ಕೆ ಮೂರು ತಾಲೂಕುಗಳ ಮುಖಂಡರುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಕರೆ ತರಲು ಪ್ರತಿ ಪಂಚಾಯತಿ ಯಿಂದ ವಾಹನ ವ್ಯವಸ್ಥೆ ಮಾಡಿಕೊಳ್ಳಬೇಕು. ಈ ಹಿಂದಿನ ಸಮಾರಂಭಗಳನ್ನು ಯಶಸ್ವಿಗೊಳಿಸಿದ ಮಾದರಿಯಲ್ಲಿಯೇ ಸರ್ವೋದಯ ಸಮಾವೇಶವು ಕಾಂಗ್ರೆಸ್ ಪಕ್ಷದ ಗತವೈಭವವನ್ನು ಮತ್ತೆ ಮರುಕಳಿಸುವಂತೆ ಮಾಡಬೇಕೆಂದರು.
ವಿಧಾನ ಪರಿಷತ್ ಸದಸ್ಯ ರಾಜೇಂದ್ರರಾಜಣ್ಣ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ವೀರಭದ್ರಪ್ಪ , ಬಾಲಕೃಷ್ಣ , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ , ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾರಾಜಣ್ಣ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಎಂ.ಎಸ್.ಮಲ್ಲಿಕಾರ್ಜುನಯ್ಯ , ಹೆಚ್.ವಿ.ವೆಂಕಟೇಶ್ , ಅರಕೆರೆ ಶಂಕರ್ , ಆಶ್ವಥನಾರಾಯಣ , ಮುಖಂಡರುಗಳಾದ ಸುದೇಶ್ ಬಾಬು , ಎನ್.ಗಂಗಣ್ಣ , ಎಂಕೆ. ನಂಜುಂಡಯ್ಯ , ಇಂದಿರಾ ದೇನಾನಾಯ್ಕ , ಬಿ.ನಾಗೇಶ್ ಬಾಬು , ಲಕ್ಷ್ಮೀನಾರಾಯಣ್ , ಎಮ.ಎಸ್.ಚಂದ್ರಶೇಖರ್ , ಟಿ.ಡಿ.ಪ್ರಸನ್ನ ಕುಮಾರ್ , ಜಯಮ್ಮ ಹಾಗೂ ಮತ್ತಿತರರು ಇದ್ದರು.