ತಿಪಟೂರು

ಕನ್ನಡ ನಾಡು, ನುಡಿ, ಭಾಷೆಗೆ ದುಡಿದ ಮಹನೀರನ್ನು ಸ್ಮರಿಸುವ ಕೆಲಸವಾಗಬೇಕು : ಉಪವಿಭಾಗಾಧಿಕಾರಿ ಕಲ್ಪಾಶ್ರೀ

ತಿಪಟೂರು : ಹಂಚಿ ಹೋದ ರಾಜ್ಯದ ಭಾಗಗಳನ್ನು ಒಂದುಗೋಡಿಸಿದ ಕೆಲಸವನ್ನು ನೆನೆಯುತ್ತಾ ಅದಕ್ಕೆ ಶ್ರಮಿಸಿದ ಮಹಾನ್ ನಾಯಕರನ್ನು ಸ್ಮರಿಸುವ ಕೆಲಸವಾಗಬೇಕು ಎಂದು ತಾಲ್ಲೂಕು ಉಪವಿಭಾಗಾಧಿಕಾರಿ ಶ್ರೀಮತಿ ಕಲ್ಪಾಶ್ರೀಯವರು ತಿಳಿಸಿದರು.
ನಗರದ ಕಲ್ಪತರು ಕ್ರೀಡಾಂಗಣದಲ್ಲಿ 67 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ರಾಷ್ಟçಧ್ವಜರೋಹಣ ಮಾಡಿ ಮಾತನಾಡಿದ ಅವರು ಕನ್ನಡ ನಾಡಿಗೆ, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ, ನಮ್ಮವರು ಅಲ್ಲದೆ ಅನ್ಯ ಭಾಷಿಕರು ಈ ನಾಡಿಗಾಗಿ ಸಹ ದುಡಿದಿದ್ದಾರೆ, ಇತರೆ ಭಾಷೆಗಳಿಗಿಂತ ನಮ್ಮ ಭಾಷೆಗೆ ಸುಂದರವಾದ ಲಿಪಿಯಿದೆ ಎಂದು ಇತಿಹಾಸಗಾರರು ತಿಳಿಸಿದ್ದಾರೆ.
ಕನ್ನಡ ನಾಡಿನಲ್ಲಿ ಕದಂಬರು, ಗಂಗರು, ರಾಷ್ಟçಕೂಟರು, ಚಾಲುಕ್ಯರು, ಪಲ್ಲವರು, ವಿಜಯನಗರದ ಅರಸರು ಆಳ್ವಿಕೆ ನೆಡೆಸಿದ್ದು ಇವರ ಕಾಲದಲ್ಲಿ ಕನ್ನಡ ಭಾಷೆಯು ಅತ್ಯಂತ ಶ್ರೀಮಂತವಾಗಿದ್ದು, ಕರ್ನಾಟಕ ಕವಿಗಳ ಬೀಡು ರನ್ನ, ಪೂನ್ನ ಪಂಪ, ಕುಮಾರವ್ಯಾಸ ಮೊದಲಿಗರಾಗಿ, ಕುವೆಂಪು, ದ.ರಾ ಬೇಂದ್ರೆ, ಶಿವರಾಮಕಾರಂತ, ವಿ.ಕೃ.ಗೋಕಾಕ್, ರಾಜರತ್ನಂ ಅಂತಂಹ ಕವಿಗಳು, ಸಾಹಿತಿಗಳ ಬೀಡಾಗಿದೆ. ಕ್ರಿ ಶ 9ನೇ ಶತಮಾನದಲ್ಲಿ ಕವಿರಾಜಮಾರ್ಗದಲ್ಲಿ ಕಾವೇರಿಯಿಂದ ಗೋದಾವರಿಯವರೆಗೂ ವಿಸ್ತೀರ್ಣವನ್ನು ಹೊಂದಿದ ನಾಡು. ಕನ್ನಡದ ಏಕೀಕರಣಕ್ಕಾಗಿ ಹಲವಾರು ಮಹಾನೀಯರು ದುಡಿದಿದ್ದು ನೆಲ-ಜಲ-ಭಾಷೆಗಾಗಿ ಜನರು ಒಂದಾದರು. ಗೋವಾ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ, ಮದ್ರಾಸ್ ಕರ್ನಾಟಕ, ಎಂಬ ಬೇದ ತೊಲಗಿ ಕರ್ನಾಟಕ ಒಂದೇ ಎಂದು ನಾಮಕರಣವಾಯಿತು. ಕನ್ನಡ ನಾಡಿನ ಚಾರಿತ್ರö್ಯ, ಕಲೆ, ಸಾಹಿತ್ಯ, ಪರಂಪರೆ, ಶಿಲ್ಪಕಲೆ ವಿಶ್ವಮಟ್ಟದಲ್ಲಿ ಗುರುತಿಸಿದ್ದು ಇಂದು ವಿಜ್ಞಾನ-ತಂತ್ರಜ್ಞಾನದಲ್ಲಿಯೂ ಅಂತರರಾಷ್ಟಿçÃಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾದ್ಯವಾಗಿದೆ ಎಂದರು.
ಕರ‍್ಯಕ್ರಮದಲ್ಲಿ ತಾಲೂಕು ದಂಡಾಧಿಕಾರಿಗಳಾದ ಚಂದ್ರಶೇಖರ್ ನಾಡ ಧ್ವಜರೋಹಣ ನೇರವೇರಿಸಿದರು, ವಿವೇಕನಂದ ವಿಧ್ಯಾಸಂಸ್ಥೆ, ಠಗೋರ್ ವಿದ್ಯಾಸಂಸ್ಥೆ ಸೇರಿದಂತೆ ನಾಡಿಗೆ ಸಂಬಂಧಿಸಿದ ಸ್ತಬ್ದಚಿತ್ರಗಳು ಕ್ರೀಡಾಂಗಣದಲ್ಲಿ ರಾರಾಜಿಸಿದವು, ಕರ‍್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಾದ ರೈತರಾದ ಸುನೀಲ್‌ರಜತಾದ್ರಿಪುರ, ಶ್ರೀಮತಿ ಲತಾಮ್ಮ ಮತ್ತಿಘಟ್ಟ, ಕೆಂಪನರಸಯ್ಯ ಹಟ್ಟ, ಪತ್ರಕರ್ತರಾದ ಉಜ್ಜಜ್ಜಿ ರಾಜಣ್ಣ, ಮಂಜುನಾಥ್ ಹಾಲ್ಕುರಿಕೆ, ಸುಪ್ರೀತ್ ಹಳೇಮನೆ, ಕಲೆ, ಚಿತ್ರಕಲೆಗಾಗಿ ಶ್ರೀನಿವಾಸ್, ನಾಟಕ ಶ್ರೀಮತಿ ಪಿ ಆರ್.ರಾಜೇಶ್ವರಿ, ಸಮಾಜ ಸೇವೆ, ಟಿಎನ್, ಶಿವಪ್ರಸಾದ್, ಜನಪದ ನೃತ್ಯ ಶ್ರೀಮತಿ ನಳಿನಾಕುಮಾರಿ, ಬಡಮಕ್ಕಳಿಗೆ ಕಡಿಮೆ ಧರದಲ್ಲಿ ಆಹಾರ ವಿತರಣೆಗೆ ಕಾರ್ತಿಕ್ ಟಿಫನ್ ಸೆಂಟರ್‌ನ ವೆಂಕಟೇಶ್, ಪೌರ ಕಾರ್ಮಿಕರಾದ ಶಿವಕುಮಾರ್, ಜಗದೀಶ್, ಪ್ರಕಾಶ್, ಮತ್ತಿಹಳ್ಳಿ ನೀರುವಿತರಕ ಉಮೇಶ್ ಇವರಿಗೆ ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು,
ಸಮಾರಂಭದಲ್ಲಿ ನಗರಸಬೆ ಅದ್ಯಕ್ಷ ರಾಮ್‌ಮೋಹನ್, ಇಒ ಸುದರ್ಶನ್, ಪೌರಯುಕ್ತರಾದ ಉಮಾಕಾಂತ್, ಎಪಿಎಮ್‌ಸಿ ಕಾರ್ಯದರ್ಶಿ ನ್ಯಾಮೆಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭುಸ್ವಾಮಿ, ನಗರಸಭೆಯ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು, ಮತ್ತಿತ್ತರು ಹಾಜರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker