ತುಮಕೂರು ಗ್ರಾಮಾಂತರ
ಹೆಬ್ಬೂರಿನಲ್ಲಿ ಹಿಂದೂ ಘನಪುರಿ ಗಣೇಶೋತ್ಸವಕ್ಕೆ ಮಾಜಿ ಶಾಸಕ ಬಿ ಸುರೇಶಗೌಡ ಚಾಲನೆ
ತುಮಕೂರು : ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೆಬ್ಬೂರು ಗ್ರಾಮದಲ್ಲಿ ಹಿಂದೂ ಘನಪುರಿ ಗಣೇಶೋತ್ಸವಕ್ಕೆ ಮಾಜಿ ಶಾಸಕ ಬಿ ಸುರೇಶಗೌಡ ಚಾಲನೆ ನೀಡಿ ವಿಘ್ನ ನಿವಾರಕ ವಿನಾಯಕ ಸ್ವಾತಂತ್ರ್ಯೋತ್ಸವದಲ್ಲಿ ಅತ್ಯಂತ ಸಂಘಟನಾತ್ಮಕವಾಗಿ ಎಲ್ಲ ಸಮುದಾಯ ವರ್ಗ ಜಾತಿ ಪಂಥ ಎಲ್ಲರನ್ನೂ ಒಂದೆಡೆಗೆ ತಂದಂತಹ ಮಹಿಮಾನ್ವಿತ ವಿನಾಯಕ ಎಂದು ಸುರೇಶಗೌಡ ತಿಳಿಸಿದರು.
108 ದೇವಸ್ಥಾನ 108 ಕಲ್ಯಾಣಿಗಳು ಇರುವಂತಹ ಇತಿಹಾಸ ಹೊಂದಿರುವ ಪ್ರಾಚೀನ ನಗರಿ ಹೆಬ್ಬೂರು. ಈ ನಗರದಲ್ಲಿರುವಂತಹ ದೇವಾಲಯಗಳು ಕಲ್ಯಾಣಿಗಳು ದೇಶದಲ್ಲಿ ಎಲ್ಲೂ ಸಿಗುವುದಿಲ್ಲ ಅಂತಹ ವೈವಿಧ್ಯಮಯ ಹಿನ್ನೆಲೆಯುಳ್ಳ ಹೆಬ್ಬೂರು ಗ್ರಾಮದಲ್ಲಿ ಹಿಂದೂ ಘನಪುರಿ ಗಣೇಶೋತ್ಸವ ಕಾರ್ಯಕ್ರಮ ನಡೆಸುತ್ತಿರುವುದು ಕೂಡ ಇತಿಹಾಸವಾಗಬೇಕು ಎಂದರು.
ಗ್ರಾಮೀಣ ಸೊಬಗನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ ಹಾಗೂ ಮರೆತಿರುವಂತಹ ಗ್ರಾಮೀಣ ಸೊಗಡಿನ ಕ್ರೀಡೆಗಳನ್ನು ನೆನಪಿಸುವಂತ ಕೆಲಸ ಹಿಂದೂ ಘನಪುರಿ ಗಣೇಶೋತ್ಸವ ಸಮಿತಿ ಮಾಡುತ್ತಿದೆ ಎಂದು ತಿಳಿಸಿದರು.
ಚಿನ್ನಿದಾಂಡು.ಕುಂಟೆಬಿಲ್ಲೆ ರಂಗೋಲಿ ಸ್ಪರ್ಧೆ,ಓಟದ ಸ್ಪರ್ಧೆ, ಮಡಿಕೆ ಒಡೆಯುವುದು, ವೇಷಭೂಷಣ ಸ್ಪರ್ಧೆ ಮ್ಯೂಜಿಕಲ್ ಚೇರ್ ಹಾಗೂ ರಾಗಿ ಮುದ್ದೆ ಬಸ್ಸಾರು ತಿನ್ನುವ ಸ್ಪರ್ಧೆ ಹಿರಿಯರಿಗಾಗಿ ನಡಿಗೆ ಸ್ಪರ್ಧೆ, ಮಡಿಕೆ ಒಡೆಯುವ ಸ್ಪರ್ಧೆ ಹೀಗೆ ಹತ್ತು ಹಲವು ವೈವಿಧ್ಯಮಯ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಈ ಸ್ಪರ್ಧೆಗಳಲ್ಲಿ ಭಾಗವಹಿಸುವ ಸ್ಪರ್ಧಾಳುಗಳಿಗೆ ಪ್ರಥಮ ದ್ವಿತೀಯ ತೃತೀಯ ಹಾಗೂ ಭಾಗವಹಿಸಿದ ಎಲ್ಲರಿಗೂ ಕೂಡ ಸಮಾಧಾನಕರ ಬಹುಮಾನ ನೀಡಲಾಗುತ್ತದೆ.
ಯುವಕ-ಯುವತಿಯರು ಹಿರಿಯರು ಭಾಗವಹಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚು ಮಾಡಬೇಕೆಂದು ಸುರೇಶಗೌಡ ತಿಳಿಸಿದರು.
ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷ ಉಮೇಶ್ ಗೌಡ, ಮಾಜಿ ಅಧ್ಯಕ್ಷೆ ತಾರಾದೇವಿ,ಬಿಜೆಪಿ ಮುಖಂಡರಾದ ವೈಟಿ ನಾಗರಾಜು, ಶಿವಕುಮಾರ್ , ಮಾಸ್ತಿ ಗೌಡ, ಸಿದ್ದೇಗೌಡ, ಎಚ್ಎನ್ ಬಾಬು, ಚಿಕ್ಕ ಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಧು, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಸಿದ್ಧಗಂಗಪ್ಪ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಮಧು, ಗ್ರಾ.ಪಂ. ಸದಸ್ಯ ಹರೀಶ್, ಯುವ ಮುಖಂಡರಾದ ಪ್ರದೀಪ್, ಪ್ರಕಾಶ್, ಶಿವರಾಂ, ಮಂಜುನಾಥ್, ಸಿದ್ದೇಶ್, ಕಣಕುಪ್ಪೆ ಕುಮಾರ್ ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯ ಪ್ರಭಾಕರ್ ಮತ್ತಿತರ ಮುಖಂಡರು ಹಿರಿಯರು ಉಪಸ್ಥಿತರಿದ್ದರು.