“ಛಲವಾದಿ” ಎಂದು ನಮೂದಿಸಲು ತುಮಕೂರು ಗ್ರಾಮಾಂತರ ಛಲವಾದಿ ಗ್ರಾಮೀಣಾಭಿವೃದ್ಧಿ ಸಂಘದ ಮುಖಂಡರುಗಳ ಮನವಿ

ತುಮಕೂರು : ಪರಿಶಿಷ್ಟ ಜಾತಿಗಳ ಮೀಸಲಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವ ಉದ್ದೇಶಕ್ಕಾಗಿ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಆಯೋಗವು ಮೇ 5 ರಿಂದ ನಡೆಸಲಿರುವ ಸಮೀಕ್ಷೆಯಲ್ಲಿ ಹೊಲಯ ಬಲಗೈ ಸಮುದಾಯದ ಬಂಧುಗಳು “ಛಲವಾದಿ” ಎಂದು ನಮೂದಿಸಲು ತುಮಕೂರು ಗ್ರಾಮಾಂತರ ಛಲವಾದಿ ಗ್ರಾಮೀಣಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಕುಮಾರ್ ಮನವಿ ಮಾಡಿದ್ದಾರೆ.
ಅವರು ತುಮಕೂರು ಗ್ರಾಮಾಂತರ ಕ್ಷೇತ್ರದ ಹೆಗ್ಗರೆಯ ಭೈರವೇಶ್ವರ ಕಾಲೇಜ್ ಆವರಣದಲ್ಲಿ ಸಮುದಾಯದ ಮುಖಂಡರುಗಳ ಸಭೆ ನಡೆಸಿ ಮಾತನಾಡಿ ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳಿದ್ದು,ಪರಿಶಿಷ್ಟ ಜಾತಿ ಆದಿದ್ರಾವಿಡ ಎಂದು ನಮೂಸುತ್ತಿದ್ದ ನಾವುಗಳು ಸರ್ಕಾರಕ್ಕೆ ಯಾವ ಜಾತಿ ಎಂಬ ಸರಿಯಾದ ದತ್ತಾಂಶ ಸಿಗದ ಹಿನ್ನೆಲೆಯಲ್ಲಿ ಒಳ ಮೀಸಲಾತಿ ವರ್ಗೀಕರಣರದ ಸಮೀಕ್ಷೆಗೆ ಬರುವ ಅಧಿಕಾರಿಗಳ ಬಳಿ ಹೊಲಯ ಸಮುದಾಯದ ಬಂಧುಗಳು ಜಾತಿ ಕಾಲಂ ನಲ್ಲಿ ಛಲವಾದಿ ಅಥವಾ ಹೊಲಯ ಎಂದು ನಮೂದಿಸುವಂತೆ ಮನವಿಮಾಡಿದ್ದಾರೆ.
ಛಲವಾದಿ ಮಖಂಡರಾದ ಬುಗಡನಹಳ್ಳಿ ಮಂಜುನಾಥ್ ಮಾತನಾಡಿ ಸಮೀಕ್ಷೆಗೆ ಬರುತ್ತಿರು ಅಧಿಕಾರಿಗಳಿಗೆ ಆಯಾ ಗ್ರಾಮಗಳ ಛಲವಾದಿ ಸಮುದಾಯದ ಹಿರಿಯರು, ವಿದ್ಯಾವಂತ ಯುವಕರು, ವಿದ್ಯಾರ್ಥಿಗಳು ಪ್ರತಿ ಮನೆಗಳಿಗೆ ಬೇಟಿ ನೀಡಿ ಯಾವುದೇ ಕುಟುಂಬ ಯಾವ ಒಬ್ಬ ಸದಸ್ಯರು ಸಹ ಸಮೀಕ್ಷೆಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಬೇಕು ಎಂದು ಮಾಡಿದರು.
ಈ ಸಂದರ್ಭದಲ್ಲಿ ಹಿರಿಯರಾದ ಹೆಬ್ಬೂರು ಕುಮಾರಣ್ಣ,ತಿಮ್ಮಯ್ಯ,ಬೈಚಾಪುರ ಸಿದ್ದಯ್ಯ, ಭೀಮಸಂದ್ರ ನರಸಿಂಹಮೂರ್ತಿ, ನರಸಿಂಹರಾಜು,ಹೆಗ್ಗೆರೆ ಲಕ್ಷ್ಮಯ್ಯ,ಶಶಿಕುಮಾರ್, ಗ್ರಾ.ಪಂ.ಸದಸ್ಯೆ ಮಮತ, ವಕ್ಕೂಡಿ ಗಿರೀಶ್, ಅದಲಾಪುರ ಗೋವಿಂದರಾಜು, ಪೆರಮನಹಳ್ಳಿ ಸುರೇಶ್, ಹೊನ್ನೂಡಿಕೆ ಸುದರ್ಶನ, ಬೆಳ್ಳಾವಿ ಮಂಜುನಾಥ್ ಇತರರಿದ್ದರು.