ಮಲ್ಲೇಕಾವು ಮತ್ತು ತೋವಿನಕೆರೆ ಗ್ರಾಮಗಳಲ್ಲಿ ಶಾಸಕ ಡಾ.ಜಿ.ಪರಮೇಶ್ವರ್ ರಿಂದ ನೂತನ ಪಶು ಆಸ್ಪತ್ರೆಗಳ ಉದ್ಘಾಟನೆ
ಕೊರಟಗೆರೆ : ದೇಶಕ್ಕೆ ಅನ್ನ ನೀಡುವ ರೈತರ ಜೀವನ ಮಟ್ಟವನ್ನು ಸುಧಾರಿಸಲು ಕೃಷಿಯೊಂದಿಗೆ ಹೈನುಗಾರಿಕೆ ಉತ್ತೇಜನಕ್ಕೆ ರಾಸುಗಳ ಮತ್ತು ವಾಣಿಜ್ಯ ಸಾಕು ಪ್ರಾಣಿಗಳ ಆರೋಗ್ಯಕ್ಕಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪಶು ಆಸ್ಪತ್ರೆಗಳ ಹೆಚ್ಚು ನಿರ್ಮಾಣ ಮಾಡಬೇಕು ಎಂದು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.
ಅವರು ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಮಲ್ಲೇಕಾವು ಮತ್ತು ತೋವಿನಕೆರೆ ಗ್ರಾಮಗಳಲ್ಲಿ ೭೬ ಕೋಟಿ ರೂಗಳ ನೂತನ ಪಶು ಆಸ್ಪತ್ರೆಗಳನ್ನು ಉದ್ಘಾಟನೆ ಮಾಡಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ರೈತರು ಕೃಷಿಯೊಂದಿಗೆ ಹೈನುಗಾರಿಕೆ ಹಾಗೂ ಮೇಕೆ ಕುರಿ ಕೋಳಿ ಸಾಕಾಣಿಕೆ ಮಾಡುತ್ತಿದ್ದು ಆದಾಯ ಗಳಿಸುತ್ತಿದ್ದಾರೆ, ಆದರೆ ಜನರಂತೆ ಅವುಗಳ ಆರೋಗ್ಯವು ಅವಶ್ಯಕತೆ ಇದ್ದು ಚಿಕಿತ್ಸೆಗೆ ಹತ್ತಿರದಲ್ಲಿ ಪಶು ಆಸ್ಪತ್ರೆಗಳ ಅವಶ್ಯಕತೆ ಇದೆ, ಒಮ್ಮೆ ಈ ಸಾಕು ಪ್ರಾಣಿಗಳು ಅಕಾಲಿವಾಗಿ ಸತ್ತರೆ ರೈತರ ಬದುಕಿನ ಮೇಲೆ ಬಹಳಷ್ಟು ಪರಿಣಾಮ ಬೀರುತದೆ ಅದಕ್ಕಾಗಿ ಪಶು ಆಸ್ಪತ್ರೆಗಳ ನಿರ್ಮಾಣಕ್ಕೆ ಉನ್ನತ್ತೀಕರಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಪಶುಗಳ ಶೀಘ್ರ ಚಿಕಿತ್ಸೆಗೆ ಆಂಬುಲೈನ್ಸ್ ಗಳನ್ನು ಒದಗಿಸಲು ಯೋಜನೆ ರೂಪಗೊಂಡಿದೆ ಎಂದರು.
ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದಿ ಕೆಲಸಗಳನ್ನು ಮಾಡಲಾಗುತ್ತಿದೆ ಮಳೆನೀರು ಸಂಗ್ರಹಣೆ ಮಾಡಲು ಸಾಕಷ್ಟು ಚಕ್ ಡ್ಯಾಂ ನಾಲಾಡ್ಯಾಂಗಳನ್ನು ನಿರ್ಮಿಸಲಾಗಿದ್ದು ಇದರಿಂದ ಅಂತರ್ಜಲ ಹೆಚ್ಚಿದೆ, ಈಗ ಭಾಗದ ರಸ್ತೆ ಅಭಿವೃದಿಗೆ ತುಂಬಾಡಿ-ಜೋನಿಗರಹಳ್ಳಿ ಮುಂದುವರೆದ ರಸ್ತೆಗೆ ೧೮ ಕೋಟಿ, ಈ ಮುಖ್ಯರಸ್ತೆಗೆ ಬರುವ ಲಿಂಕ್ ರಸ್ತೆಗಳನ್ನು ಆಭಿವೃದಿಗೋಳಿಸಲಾಗಿದೆೆ ಎಂದ ಅವರು ಮುಖ್ಯಮಂತ್ರಿಗಳ ೩೦ ಕೋಟಿಗಳ ವಿಶೇಷ ಅನುದಾನವನ್ನು ಕ್ಷೇತ್ರದ ೩೬ ಪಂಚಾಯಿತಿಗಳಿಗೆ ಸದಸ್ಯರನ್ನು ಒಳಗೂಡಿ ಯೋಜನೆ ರೂಪಿಸಿ ಗ್ರಾಮೀಣ ಪ್ರದೇಶದ ಅಭಿವೃದಿಗೆ ನೀಡಲಾಗಿದೆ, ಪ್ರತಿ ಗ್ರಾಮ ಪಂಚಾಯಿತಿಗೆ ಸರ್ಕಾರದ ನೀಡಿರುವುದನ್ನು ಹೊರತು ಪಡಿಸಿ ವಿಶೇಷ ೧೦೦ ಮನೆಗಳಂತೆ ೩೬೦೦ ಆಶ್ರಯ ಯೋಜನೆ ಮನೆಗಳನ್ನು ತರಲಾಗಿದ್ದು ಅಭಿವೃದಿಯಲ್ಲಿ ಸಾಕಷ್ಟು ಕೆಲಸ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಇ.ಓ. ದೊಡ್ಡಸಿದ್ದಯ್ಯ,ಗ್ರಾಮ ಪಂಚಾಯತಿ ಅದ್ಯಕ್ಷರುಗಳಾದ ವಿನೂದಮ್ಮ, ಲಕ್ಷ್ಮಮ್ಮ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಅರಕೆರೆ ಶಂಕರ್, ತಾಲೂಕು ಪಶುವೈದ್ಯಾಧಿಕಾರಿ ಡಾ.ಸಿದ್ದನಗೌಡ ಕೃಷಿ ಆಧಿಕಾರಿ ನಾಗರಾಜು, ಅರಣ್ಯಧಿಕಾರಿ ಸುರೇಶ್, ಹಿಂದುಳಿದ ವರ್ಗದ ಅಧಿಕಾರಿ ಅನಂತರಾಜು, ತಾಲೂಕು ಪಶುವೈದ್ಯರುಗಳಾದ ಡಾ.ನಾಗಭೂಷಣ್, ಡಾ.ಗಿರೀಶ್‌ಬಾಬುರೆಡ್ಡಿ, ಡಾ.ಮೋಹನ್, ಡಾ.ಮಂಜುನಾಥ್ ಸೇರಿದಂತೆ ಇತರರು ಹಾಜರಿದ್ದರು.