ತುಮಕೂರು : ಗೃಹಸಚಿವರು ಮತ್ತು ಜಿಲ್ಲೆಯ ಉಸ್ತುವಾರಿ ಸಚಿವರೂ ಆದ ಡಾ. ಜಿ.ಪರಮೇಶ್ವರ್ ಅವರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆ ಮಾಡುವ ಭರವಸೆಯ ಹಿನ್ನೆಲೆಯಲ್ಲಿ ಸೋಮವಾರದ ಮುಖ್ಯಮಂತ್ರಿಗಳ ಕಾರ್ಯ ಕ್ರಮಕ್ಕೆ ಹಾಕಿದ್ದ ಬಹಿಷ್ಕಾರ ವಾಪಸು ತೆಗೆದುಕೊಳ್ಳಲಾಗಿದೆ ಎಂದು ಬಿಜೆಪಿ ಶಾಸಕ ಬಿ. ಸುರೇಶ ಗೌಡರು ತಿಳಿಸಿದ್ದಾರೆ.
ಡಾ. ಪರಮೇಶ್ವರ್ ಅವರಿಗೆ ನಮ್ಮ ಹೋರಾಟದ ಉದ್ದೇಶ ಮನವರಿಕೆಯಾಗಿದೆ. ಅನುದಾನದ ಹಂಚಿಕೆಯಲ್ಲಿ ಆಗಿರುವ ತಾರತಮ್ಯ ನಿವಾರಿಸುವುದಾಗಿ ಮತ್ತು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಆಗಬೇಕು ಎನ್ನುವ ನಮ್ಮ ನಿಲುವಿಗೆ ತಮ್ಮ ಸಮ್ಮತಿ ಇರುವುದಾಗಿ ಅವರು ತಿಳಿಸಿದ್ದಾರೆ.
ಅವರ ಭರವಸೆಗೆ ಮನ್ನಣೆ ಕೊಟ್ಟು ಮತ್ತು ಮುಖ್ಯಮಂತ್ರಿಗಳ ಭೇಟಿ ಸಮಯದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ಬರಬಾರದು ಎಂದು ನಾವೆಲ್ಲರೂ ಕೂಡಿಕೊಂಡು ಕಪ್ಪು ಬಾವುಟ ಪ್ರದರ್ಶನ ಕೈ ಬಿಡುವ ನಿರ್ಣಯ ತೆಗೆದುಕೊಂಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.