ಕುಣಿಗಲ್ ನ ಕೊತ್ತಗೆರೆ ಬಳಿ ಲಾರಿ ಮತ್ತು ಕಾರಿನ ನಡುವೆ ಬೀಕರ ಅಪಘಾತ : ಸ್ಥಳದಲ್ಲೇ ನಾಲ್ಕು ಮಂದಿ ದುರ್ಮರಣ

ಕುಣಿಗಲ್ : ಲಾರಿ ಮತ್ತು ಕಾರಿನ ನಡುವೆ ಉಂಟಾದ ಭೀಕರ ಅಪಘಾತ ದಿಂದ ಕಾರಿನಲ್ಲಿದ್ದ ನಾಲ್ಕು ಮಂದಿ ಸಾವನ್ನಪ್ಪಿರುವ ಘಟನೆ ಹೊನೇನಹಳ್ಳಿ ಗ್ರಾಮದ ಬಳಿ ನಡೆದಿದೆ.
ಮಂಡ್ಯ ಪಟ್ಟಣದ ಕುಮಾರ ನರಸಿಂಹ ಸ್ವಾಮಿ(65) ಹೆಂಡತಿ ಗಾಯಿತ್ರಿ(62) ಕುಮಾರ ನರಸಿಂಹ ಸ್ವಾಮಿಯ ತಂಗಿಯಾದ ಗಾಯಿತ್ರಿ ( 63) ಚಾಲಕ ರಘು ಕುಮಾರ್ (56) ಅಪಘಾತಕ್ಕೀಡಾಗಿ ಮೃತಪಟ್ಟವ ರಾಗಿದ್ದಾರೆ.
ಕುಮಾರ ನರಸಿಂಹಸ್ವಾಮಿ ಮತ್ತು ಗಾಯತ್ರಿ ದಂಪತಿಗಳಾಗಿದ್ದು ಶನಿವಾರ ಇವರ ವಿವಾಹ ವಾರ್ಷಿಕೋತ್ಸವ ಇದ್ದುದರಿಂದ ಮಂಡ್ಯ ಪಟ್ಟಣದಿಂದ ತುಮಕೂರು ತಾಲ್ಲೂಕಿನ ದೇವರಾಯನ ದುರ್ಗದ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ವಾಪಸ್ ಮಂಡ್ಯಕ್ಕೆ ತೆರಳುತ್ತಿದ್ದಾಗ ಕುಣಿಗಲ್ ಮಾರ್ಗವಾಗಿ ತುಮಕೂರು ಕಡೆಗೆ ತೆರಳುತ್ತಿದ್ದ ಗೊಬ್ಬರದ ಲಾರಿಗೆ ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮ ಹಾಗೂ ಚಿಗನಿಪಾಳ್ಯ ಗ್ರಾಮದ ಇಳಿಜಾರಿನಲ್ಲಿ ಕಾರು ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಉಂಟಾಗಿ ನಾಲ್ಕು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಕಾರು ಸಂಪೂರ್ಣ ನುಜ್ಜು ನುಜ್ಜಾಗಿದ್ದ ರಿಂದ ಕಾರಿನ ಒಳಗಿದ್ದ ನಾಲ್ಕು ಶವಗಳನ್ನು ಸ್ಥಳೀಯರ ಸಹಕಾರ ದಿಂದ ಆಂಬುಲೆನ್ಸ್ ಮತ್ತು ಪೊಲೀಸ್ ಸಿಬ್ಬಂದಿಗಳು ಹರ ಸಾಹಸ ಪಟ್ಟು ಹೊರ ತೆಗೆದಿದ್ದಾರೆ.
ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಳೆದ ಮೂರು ದಿನಗಳಿಂದಲೂ ಒಂದಲ್ಲ ಒಂದು ರೀತಿಯ ಅಪಘಾತಗಳು ಉಂಟಾಗುತ್ತಿದ್ದು ಸಾರ್ವಜನಿಕರು ಜೀವ ಕಳೆದುಕೊಳ್ಳುತ್ತಿದ್ದಾರೆ.



