ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳಿಂದ ಚುಂಚಾದ್ರಿ ರೈತ ಸಂತೆಗೆ ಇಂದು ಚಾಲನೆ

ತುರುವೇಕೆರೆ : ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ವ್ಮಠದ ಮಹತ್ವಾಕಾಂಕ್ಷೆಯ ಚುಂಚಾದ್ರಿ ರೈತ ಸಂತೆಗೆ ತಾಲೂಕಿನ ಮಾಯಸಂದ್ರ ಟಿ.ಬಿ. ಕ್ರಾಸ್‌ನಲ್ಲಿ ಆಗಸ್ಟ್ 25ರ ಗುರುವಾರದಂದು ರಂದು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ.ನಿರ್ಮಲಾನಂದನಾಥ ಸ್ವಾಮೀಜಿಯವರು ಚಾಲನೆ ನೀಡಲಿದ್ದಾರೆ.
ಚುಂಚಾದ್ರಿ ರೈತ ಸಂತೆಗೆ ಆಗಮಿಸಲಿರುವ ತಾಲೂಕಿನ ಗಡಿಭಾಗದ ಜೋಡಗಟ್ಟೆಯಲ್ಲಿ ಯುವ ರೈತರುಗಳು ಶ್ರೀಗಳವರನ್ನು ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ.ನಿರ್ಮಲಾನಂದನಾಥ ಸ್ವಾಮೀಜಿಯವರನ್ನು, ಶ್ರೀ ಮಠದ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥಸ್ವಾಮ್ಭಿಜಿಯವರನ್ನು ಮಂತ್ರಿ ಮಹೋದಯರನ್ನು, ಶಾಸಕ, ಗಂಯಮಾನ್ಯರನ್ನು , ಸ್ವಾಗತಿಸಿ ಬೃಹತ್ ಬೈಕ್ ರ‍್ಯಾಲಿಯ ಮೂಲಕ ಮಾಯಸಂದ್ರ ಟಿ.ಬಿ.ಕ್ರಾಸ್‌ಗೆ ಕರೆತರಲಿದ್ದಾರೆ.
ತಾಲೂಕಿನ ಟಿ.ಬಿ. ಕ್ರಾಸ್‌ನಲ್ಲಿ ಬಿ. ಬೈರಪ್ಪಾಜಿ ಪ್ರತಿಷ್ಟಾನದ ವತಿಯಿಂದ ಪುನರ್ ಪ್ರತಿಷ್ಟಾಪಿಸಲಾಗಿರುವ ರೈತ ಬಂಧು ಬಿ.ಬೈರಪ್ಪಾಜಿಯವರ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಲಿರುವ ಶ್ರೀ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥಸ್ವಾಮೀಜಿಯವರು , ಚುಂಚಾದ್ರಿ ರೈತ ಸಂತೆಗೆ ಚಾಲನೆ ದೊರಕಿಸಿ ನಂತರ ಶ್ರೀ ಆದಿಚುಂಚನಗಿರಿ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದೇ ವೇದಿಕೆಯಲ್ಲಿ ಪ್ರೋ.ಪುಟ್ಟರಂಗಪ್ಪ ವಿರಚಿತ ಬಡವರಬಂದು ಬಿ.ಭೈರಪ್ಪಾಜಿ ಕೃತಿ ಸಾರಸ್ವತ ಲೋಕಕ್ಕೆ ಸಮರ್ಪಣೆಯಾಗಲಿದೆ.
ಈ ಅವಿಸ್ಮರಣೀಯ ಕ್ಷಣವನ್ನು ಕೇಂದ್ರ ಸಚಿವೆ ಶೋಭಾಕರಂದ್ಲಾಜೆ , ರಾಜ್ಯ ಸಚಿವರುಗಳಾದ ಗೋಪಾಲಯ್ಯ, ಮುನಿರತ್ನ, ಎಸ್.ಟಿ.ಸೋಮಶೇಖರ್, ಶಾಸಕ ಮಸಾಲಜಯರಾಮ್ ಹಾಗೂ ಮಾಜಿ ಶಾಸಕರುಗಳು, ರೈತ ಸಂಘದ ವರಿಷ್ಟ ಕೆ.ಟಿ.ಗಂಗಾಧರ್ ಹಾಗೂ ಅನೇಕ ರೈತಾಪಿ ಬಂಧುಗಳು . ಶ್ರೀ ಮಠದ ಸದ್ಬಕ್ತರುಗಳು ಕಣ್ತುಂಬಿಕೊಳ್ಳುವ ಮೂಲಕ ಸಾಕ್ಷೀಕರಿಸಲಿದ್ದಾರೆ.