
ತುಮಕೂರು : ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ನಿಗದಿಪಡಿಸಿ ಆದೇಶ ಹೊರಡಿಸಿದ್ದು, ರಾಜಕೀಯ ಪಕ್ಷಗಳಲ್ಲಿ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಬಿರಿಸಿನ ಚಟುವಟಿಕೆಗಳು ಗರಿಗೆದರಿವೆ.
ಮೇಯರ್ ಸ್ಥಾನ ಪರಿಶಿಷ್ಟಜಾತಿ ಮಹಿಳೆಗೆ, ಉಪ ಮೇಯರ್ ಸ್ಥಾನ ಬಿಸಿಎಂ ಗೆ ನಿಗದಿ ಪಡಿಸಿ ಸರ್ಕಾರ ಆದೇಶ ಹೊರಡಿಸಿದ್ದು, ತುಮಕೂರು ಮಹಾನಗರ ಪಾಲಿಕೆಯ ಸದಸ್ಯರಾಗಿರುವ ಇಬ್ಬರು ಮಹಿಳೆಯರು ಕಾಂಗ್ರೆಸ್ ಪಕ್ಷದವರಾಗಿದ್ದು, ನಿರಾಯಾಸವಾಗಿ ಕಾಂಗ್ರೆಸ್ ಗೆ ಮೇಯರ್ ಸ್ಥಾನ ಒಲಿದು ಬರಲಿದೆ.
ಉಪ ಮೇಯರ್ ಸ್ಥಾನ ಬಿಸಿಎಂಗೆ ಮೀಸಲಾತಿ ನಿಗದಿಯಾಗಿದ್ದು, ಕಾಂಗ್ರೆಸ್ ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಉಭಯ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಲ್ಲಿ ಯಾರು ಆಯ್ಕೆಯಾಗುತ್ತಾರೆಂಬ ಲೆಕ್ಕಾಚಾರ ನಡೆಯುತ್ತಿದ್ದು, ಬಹುತೇಕ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಆಗಲಿದ್ದು, ಕಾಂಗ್ರೆಸ್ ಮೇಯರ್, ಜೆಡಿಎಸ್ ಉಪ ಮೇಯರ್ ಸ್ಥಾನವನ್ನು ಪಡೆದುಕೊಳ್ಳಲಿದೆ.
![]() ![]() ಪ್ರಭಾವತಿ ಸುಧೀಶ್ವರ್ ರೂಪಶ್ರೀ ಶೆಟ್ಟಾಳಯ್ಯ,
ಕಾಂಗ್ರೆಸ್ ನಲ್ಲಿ ಮೇಯರ್ ಸ್ಥಾನಕ್ಕೆ 9ನೇ ವಾರ್ಡನ ಪ್ರಭಾವತಿ ಸುಧೀಶ್ವರ್ ಹಾಗೂ 19ನೇ ವಾರ್ಡನ ರೂಪಶ್ರೀ ಶೆಟ್ಟಾಳಯ್ಯ, ಪೈಪೋಟಿ ನಡೆಸುತ್ತಿದ್ದಾರೆ .
ಪ್ರಸಕ್ತ ಅವದಿಯಲ್ಲಿ ರೂಪಶ್ರೀ ಉಪ ಮೇಯರ್ ಆಗಿ ಕಾರ್ಯನಿರ್ವಹಿಸಿರುವುದರಿಂದ ಪ್ರಭಾವತಿ ಸುಧೀಶ್ವರ್ ಅವಕಾಶಗಳು ಹೆಚ್ಚಾಗಿವೆ ಎಂದು ಹೇಳಲಾಗುತ್ತಿದೆ.
ಎಡಗೈ ಸಮುದಾಯದ ರೂಪಶ್ರೀ ಶೆಟ್ಟಾಳಯ್ಯ, ಪ್ರಭಾವತಿ ಸುಧೀಶ್ವರ್ ಇವರು ಬಲಗೈ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಹೈಕಾಮಾಂಡ್ ಹಾಗೂ ಮುಖಂಡರುಗಳು ಯಾರಿಗೆ ಮಣೆ ಹಾಕಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಇನ್ನು ಉಪಮೇಯರ್ ಸ್ಥಾನಕ್ಕೆ ಜೆಡಿಎಸ್ ಪಕ್ಷದ ಹೆಚ್.ಡಿ.ಕೆ.ಮಂಜುನಾಥ್, ಶ್ರೀನಿವಾಸ್, ನರಸಿಂಹಮೂರ್ತಿ ಇದ್ದು, ಬಹುತೇಕ ಮಂಜುನಾಥ್ ಅಥವಾ ಶ್ರೀನಿವಾಸ್ ಉಪಮೇಯರ್ ಆಗಲಿದ್ದಾರೆ ಎನ್ನಲಾಗುತ್ತಿದೆ.
|
|