ತಿಪಟೂರು
ಶ್ರೀ ವಡ್ಡಗಲ್ಲು ರಂಗನಾಥಸ್ವಾಮಿ ಜಾತ್ರಾಮಹೋತ್ಸವ
ತಿಪಟೂರು : ತಾಲ್ಲೂಕಿನ ನೊಣವಿನಕೆರೆ ಹೋಬಳಿ ಗಂಗನಘಟ್ಟದ ಬಾರೇಮೆಲೆ ನೆಲೆಸಿರುವ ಪುರಾಣ ಪ್ರಸಿದ್ದ ಶ್ರೀ ವಡ್ಡಗಲ್ಲು ರಂಗನಾಥ ಸ್ವಾಮಿಯವರ ಬ್ರಹ್ಮ ರಥೋತ್ಸವ ಸೋಮವಾರ ಜರುಗಲಿದೆ.
ಶನಿವಾರ ಸಂಜೆಯಿಂದ ಜಾತ್ರೆಯು ಪ್ರಾರಂವಾಗಲಿದ್ದು ವಿಶ್ವಕ್ಸೇನಾರಾಧನೆ, ವಾಸುದೇವ ಪುಣ್ಯಾಯ ವಾಚನಮ ರಕ್ಷಬಂದನ, ಮೃತ್‌ಸಂಗ್ರಹಣ, ಅಂಕುರಾರ್ಪಣೆ, ಗರುಡಧ್ವಜ ಪ್ರತಿಷ್ಠೆನಡೆಯುತ್ತಿದೆ. ಭಾನುವಾರ ಏಕಾದಶಿಯಂದು ಬೆಳಗ್ಗೆ ಧ್ವಜಾರೋಹಣ, ಚತುಸ್ಥಾರ್ಚನೆ, ಅಭಿಷೇಕ, ನಂದಾದೀಪ ಸ್ಥಾಪನೆ, ಸಂಜೆ ರಥಕ್ಕೆ ಕಲಶ ಸ್ಥಾಪನೆ, ಗಜೇಂದ್ರಮೋಕ್ಷ, ಶ್ರೀ ಲಕ್ಷ್ಮಿರಂಗನಾಥ ಕಲ್ಯಾಣೋತ್ಸವ, ತೀರ್ಥಪ್ರಸಾದ ವಿನಿಯೋಗ. ಹಾಗೂ ದ್ವಾದಶಿ ಸೋಮವಾರ ಸಂಜೆ 5 ಗಂಟೆಗೆ ಬ್ರಹ್ಮರೋಥ್ಸವ ವಿರುತ್ತದೆ ನಂತರ ತೀರ್ಥಪ್ರಸಾದ ವಿನಿಯೋಗವಿರುತ್ತದೆ. ತೃಯೋದಶಿ ಮಂಗಳವಾರ ಧ್ವಜವರೋಹಣ, ಮಹಾಪೂರ್ಣಾಹುತಿ, ಅಶ್ವವಾಹನೋತ್ಸವದ ನಂತರ ಜಾತ್ರಾಮಹೋತ್ಸವ ಮುಕ್ತಾಯವಾಗುತ್ತದೆ.