ಪಾವಗಡ
ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಕಾಮಗಾರಿ ಕಳಪೆ ಆರೋಪ ಸುಳ್ಳು : ಎಇಇ ಅನಿಲ್ ಕುಮಾರ್
ಪಾವಗಡ : ಪಟ್ಟಣದ ಕುರುಬರಹಳ್ಳಿ ಗೇಟ್ ಬಳಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಕಾಮಗಾರಿ ಬೆಂಗಳೂರು ಸಿದ್ಧಾರ್ಥ ಸಿವಿಲ್ ವರ್ಕ್ಸ್ ಪ್ರೈ. ಲಿ. ರೈಟ್ ಸಂಸ್ಥೆವತಿಯಿಂದ 1.90 ಕೋಟಿ ರೂ ಮಾಡಿರುವ ಕಾಮಗಾರಿ ಯಾವುದೇ ಸಮಸ್ಯೆ ಇಲ್ಲ ಎಂದು ಲೋಕೋಪಯೋಗಿ ಇಲಾಖೆ ಎ ಇ ಇ ಅನಿಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ಹಲವು ಪತ್ರಿಕೆಗಳಲ್ಲಿ ಸಿದ್ದಾರ್ಥ ಸಿವಿಲ್ ವರ್ಕ್ಸ್ ಪ್ರೈ. ಲಿ. ಅವರು ಮಾಡಿರುವ ಕಾಮಗಾರಿಯಲ್ಲಿ ಕಳಪೆ ಕಾಮಗಾರಿ ಮಾಡಲಾಗಿದೆ ಎಂದು ಬಿಂಬಿಸಲಾಗಿತ್ತು ಇದು ಸತ್ಯಕ್ಕೆ ದೂರವಾದ ಅಂಶವೆಂದು ತಿಳಿಯಪಡಿಸಿದರು.
ಪಾವಗಡ ತಾಲೂಕಿನ ಕುರುಬರಹಳ್ಳಿ ಗೇಟ್ ಬಳಿ ಸುಮಾರು 3.90 ಕೋಟಿ ರೂ. ವೆಚ್ಚದಲ್ಲಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ನಿರ್ಮಿಸಲಾಗಿದ್ದು ರೈಟ್ಸ್ ಸಂಸ್ಥೆ ವತಿಯಿಂದ 1.90 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿಯನ್ನು ಬೆಂಗಳೂರು ಸಿದ್ದಾರ್ಥ ಸಿವಿಲ್ ವರ್ಕ್ಸ್ ಪ್ರೈ.ಲಿ. ನೀಡಲಾಗಿದ್ದ ಇವರ ಕಾಮಗಾರಿಯು ಯಾವುದೇ ಲೋಪದೋಷವಿಲ್ಲ ಮತ್ತು ಕಳಪೆಯಾಗಲಿ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು .
ಕಳೆದ 2ವರ್ಷ ಗಳ ಹಿಂದೆ ಲೋಕೋಪಯೋಗಿ ಇಲಾಖೆ ವತಿಯಿಂದ ಇನ್ನುಳಿದ ಎರಡು ಕೋಟಿ ರೂ ವೆಚ್ಚದ ಕಟ್ಟಡ ಕಾಮಗಾರಿಯನ್ನು ಬೆಂಗಳೂರಿನ 1ನೇ ದರ್ಜೆ ಗುತ್ತಿಗೆದಾರರಾದ ಎಚ್ ಗೋವಿಂದೇಗೌಡ ಅವರಿಗೆ ಗುತ್ತಿಗೆ ನೀಡಲಾಗಿ ಈ ಕಾಮಗಾರಿಯು ಮಳೆ ಬಂದಾಗ ಕಟ್ಟಡದ ಚಾವಣಿಯು ಅಲ್ಪಮಟ್ಟಿಗೆ ಸೋರುತಿರುವುದು ನಮ್ಮ ಗಮನಕ್ಕೆ ಬಂದಿದೆ.
2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡ ಕಾಮಗಾರಿಯಮೇಲೆ ಸರ್ಕಾರದ ಹಂತದಲ್ಲಿ ಮೊದಲನೇ ಮಹಡಿ ಬೇಡಿಕೆ ಇದ್ದ ಕಾರಣ ಮೇಲ್ಗಡೆ ಇದ್ದಂತಹ ಮೇಲ್ಛಾವಣಿಯೂ ಅಲ್ಪಪ್ರಮಾಣದಲ್ಲಿ ಚುರುಕಿ ಸಾರಿಸಲಾಗಿತ್ತು ಕಳೆದ ವಾರದಿಂದ ಸುರಿಯುತಿರುವ ಮಳೆಯಿಂದಾಗಿ ಮೇಲ್ಚಾವಣಿ ಸೋರಿಕೆ ಆಗಲು ಆರಂಭಿಸಿತು ಇದನ್ನು ಸೂಕ್ತವಾಗಿ ಸರಿಪಡಿಸಬೇಕೆಂದು ಗುತ್ತಿಗೆದಾರರಿಗೆ ನೋಟಿಸ್ ಮುಖಾಂತರ ಜಾರಿ ಮಾಡಿದ ಹಿನ್ನೆಲೆಯಲ್ಲಿ ಅದನ್ನು ಸದರಿ ಸರಿಪಡಿಸುವ ಕೆಲಸ ಮಾಡಲಾಗಿದೆ ಎಂದು ಲೋಕೊಪಯೋಗಿ ಇಲಾಖೆ ಎ ಇ ಇ ಅನಿಲ್ ಕುಮಾರ ತಿಳಿಸಿದರು .
ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಾಣ ಮಾಡುವ ಕಾಮಗಾರಿಯನ್ನು ಸಂಪೂರ್ಣವಾಗಿ ಮೇಲ್ಬಾಗದ ಸಿಮೆಂಟ್ ಚುರುಕಿ ಯನ್ನು ತೆರುವು ಗೊಳಿಸಿ ನಂತರ ವಾಟರ್ ಪ್ರೂಫಿಂಗ್ ಮಾಡಿ ಉತ್ತಮ ಗುಣಮಟ್ಟ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಸುಮಾರು ಹದಿನೈದು ದಿವಸಗಳ ಕಾಲ ನೀರು ನಿಲ್ಲಲು ಗುತ್ತಿಗೆದಾರರಿಗೆ ತಿಳಿಸಲಾಗಿದೆ ಇದಾದ ಮೇಲೆ ಸುಣ್ಣ-ಬಣ್ಣ ಹೊಡೆಯುವ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಗುತ್ತಿಗೆದಾರರಿಗೆ ತಿಳಿಸಲಾಗಿದೆ ಎಂದು ತಿಳಿಯಪಡಿಸಿದರು.
ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮಾರಪ್ಪ ಮಾತನಾಡಿ ಈ ಹಿಂದೆ ಕೆಲಸ ನಿರ್ವಹಿಸಿದ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಸುಮಾರು 2 ಕೋಟಿ ರೂ.ವೆಚ್ಚದ ಕಟ್ಟಡ ಕಾಮಗಾರಿಯ ಮೇಲ್ಛಾವಣಿ ಕಾಮಗಾರಿ ನಡೆಯುವಂತಹ ವೇಳೆ ಹಿಂದೆ ಇದ್ದ ಲೋಕೋಪಯೋಗಿ ಇಲಾಖೆಯ ಎ ಇ ಇ ವಿಜಯ್ ಕುಮಾರ್ ರವರಿಗೆ ಸೋರಿಕೆ ವಿಚಾರವನ್ನು ಗಮನಕ್ಕೆ ತರಲಾಗಿತ್ತು, ಬಹುಮಹಡಿ ಕಟ್ಟಡ ಬೇಡಿಕೆ ಇದ್ದಂತ ವೇಳೆಯಲ್ಲಿ ಅಲ್ಪಮಟ್ಟದ ಕಾಮಗಾರಿಯು ಮಾಡಲಾಗಿದೆ ಎಂಬುದಾಗಿ ಅವರು ನಮ್ಮ ಗಮನಕ್ಕೆ ತಿಳಿಸಿದರು.