ಮಧುಗಿರಿ
ಕೆ.ಎನ್.ರಾಜಣ್ಣಗೆ ರಾಜಕೀಯ ಪುನರ್ ಜನ್ಮನೀಡಿದ ದೇವೇಗೌಡರು : ಮಧುಗಿರಿಯಲ್ಲಿ ಕೆ.ಎನ್.ರಾಜಣ್ಣ ವಿರುದ್ದ ಬೃಹತ್ ಪ್ರತಿಭಟನೆ
ಮಧುಗಿರಿ : ಪಕ್ಷದ ವರಿಷ್ಟರು ರಾಷ್ಟ್ರ ನಾಯಕರಾದ ಎಚ್.ಡಿ.ದೇವೇಗೌಡರ ಬಗ್ಗೆ ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವಹೇಳಕಾರಿ ಮಾತುಗಳನ್ನಾಡಿದ್ದು ಇದು ಅವರಿಗೆ ಶೋಭೆ ತರುವುದಿಲ್ಲ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ಪಟ್ಟಣದಲ್ಲಿ ತಾಲೂಕು ಜೆ.ಡಿ.ಎಸ್. ವತಿಯಿಂದ ಮಾಜಿ ಶಾಸಕ ಕೆ.ಎನ್.ರಾಜಣ್ಣ ನವರ ವಿರುದ್ದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಎಚ್.ಡಿ.ದೇವೇಗೌಡರು ರಾಜ್ಯಕ್ಕೆ ರಾಷ್ಟ್ರಕ್ಕೆ ಅಪಾರ ಕೊಡುಗೆ ನೀಡಿದ್ದು ನೀರಾವರಿ, ಕೈಗಾರಿಕೆಗಳ ಅಭಿವೃದ್ದಿಗೆ ಶ್ರಮ ವಹಿಸಿದ್ದಾರೆ. ವಾಲ್ಮೀಕಿ ಸಮುದಾಯಕ್ಕೆ ರಾಜಕೀಯ ಮೀಸಲು ಸೌಲಭ್ಯ ಕಲ್ಪಿಸಿದರು. 2004 ರಲ್ಲಿ ಬೆಳ್ಳಾವಿ ವಿಧಾನಸಭ ಕ್ಷೇತ್ರದಿಂದ ಕೆ.ಎನ್.ರಾಜಣ್ಣ ನವರಿಗೆ ಸ್ಪರ್ಧಿಸಲು ಎಚ್.ಡಿ.ದೇವೇಗೌಡರು ಅವಕಾಶ ನೀಡಿ ಅವರ ರಾಜಕೀಯ ಪುನರ್ ಜನ್ಮಕ್ಕೆ ಕಾರಣರಾಗಿದ್ದರು.
2019 ರಲ್ಲಿ ನಡೆದ ಲೋಕ ಸಭಾ ಚುನಾವಣೆಗೆ ಸ್ಪರ್ಧಿಸಿದ್ದ ದೇವೇಗೌಡರ ಋಣ ತಿರಿಸುವುದನ್ನು ಬಿಟ್ಟು ಅವರ ಸಾವಿನ ಬಗ್ಗೆ ಮಾತನಾಡಿರುವುದು ಸರಿಯಿಲ್ಲ.
2023 ರ ವಿಧಾನಸಭಾ ಚುನಾವಣೆಯಲ್ಲಿ ಮಧುಗಿರಿ ಕ್ಷೇತ್ರದ ಜನತೆ ಕೆ.ಎನ್.ಆರ್ ರವರಿಗೆ ತಕ್ಕ ಪಾಠ ಕಲಿಸಿ ಅವರ ಕೊನೆ ಚುನಾವಣೆಯಲ್ಲಿ ಮತ್ತೆ ಮಾಜಿ ಶಾಸಕರನ್ನಾಗಿ ಮಾಡಲಿದ್ದಾರೆ ಎಂದರು.
ಜಿಲ್ಲಾಧ್ಯಕ್ಷ ಆರ್.ಸಿ.ಅಂಜನಪ್ಪ ಮಾತನಾಡಿ ಪ್ರತಿಯೊಬ್ಬ ಮನುಷ್ಯ ಹುಟ್ಟಿದ ಮೇಲೆ ಸಾಯೋದು ಸರ್ವೇ ಸಾಮಾನ್ಯ. ಇನ್ನೊಬ್ಬರ ಸಾವನ್ನ ನಾವು ನಿರ್ಧಾರ ಮಾಡಬಾರದು. ಈ ದೇಶದ ಪಕ್ಷಾತೀತ, ಜಾತ್ಯಾತೀತ ನಾಯಕ ದೇವೇಗೌಡರಿಗೆ ಪ್ರದಾನಿ ಮೋದಿ ನೀಡುವ ಗೌರವವನ್ನು ಕಂಡು ಕೆ.ಎನ್.ಆರ್. ಬುದ್ದಿ ಕಲಿಯಬೇಕು. ಪಾಪ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಗಾಂಧಿ ಪ್ರತಿಮೆಯ ಮುಂದೆ ಕೆ.ಎನ್.ಆರ್. ಒಂದು ದಿನ ಉಪವಾಸ ಮಾಡಲಿ ಎಂದರು.
ಜೆ.ಡಿ.ಎಸ್.ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎಸ್.ಆರ್.ಲಕ್ಷ್ಮಮ್ಮ, ಐ ಟಿ ವಿಂಗ್ ನ ರಾಧ, ಪುರಸಭಾ ಸದಸ್ಯ ಎಂ.ಎಲ್.ಗಂಗರಾಜು ಕೆ.ನಾರಾಯಣ್, ಎಂ.ಎಸ್.ಚಂದ್ರಶೇಖರ್ ಬಾಬು, ತಾಲೂಕು ಅಧ್ಯಕ್ಷ ಬಸವರಾಜು, ಮುಖಂಡರಾದ ಬಿ.ಎಸ್.ಶ್ರೀನಿವಾಸ್, ಹೆಚ್ ಎಂ ಹನುಮಂತರಾಯಪ್ಪ, ನಾಸೀರ್, ಭಾವಿಮನೆ ಕಾಂತಣ್ಣ, ಸಿಡದರ ಗಲ್ಲು ಶ್ರೀನಿವಾಸ್, ಕೀರ್ತಿಶ್ರೀ, ಎಸ್.ಮೋಹನ್, ಕಂಬತ್ತನಹಳ್ಳಿ ರಘು, ಡಿ.ವಿ.ಹಳ್ಳಿ ರಾಮು, ನರಸಪ್ಪ, ಪ್ರಭು, ಶಫೀಕ್, ನಾಸೀರ್, ಮಂಜು, ವೆಂಕಟಾಪುರ ಗೋವಿಂದರಾಜು, ದೇವರಾಜು, ಬಜ್ಜ, ರಾಜ್ಯ ವಕ್ಕಲಿಗರ ಸಂಘದ ನಿರ್ದೇಶಕ ಹನುಮಂತರಾಯಪ್ಪ ಇದ್ದರು.