ಗೋಣಿತುಮಕೂರು ಗ್ರಾ.ಪಂ. ಅಧ್ಯಕ್ಷರಾಗಿ ಜಯಲಕ್ಷ್ಮಮ್ಮಸಿದ್ದೇಗೌಡ ಆಯ್ಕೆ
ತುರುವೇಕೆರೆ : ತಾಲೂಕಿನ ಗೋಣಿತುಮಕೂರು ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಜಯಲಕ್ಷ್ಮಮ್ಮ ಸಿದ್ದೇಗೌಡ ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದೆ ಅಧ್ಯಕ್ಷರಾಗಿದ್ದ ಬೇಬಿತ್ಯಾಗರಾಜು ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆಗುರುವಾರ ಚುನಾವಣೆ ನಡೆಯಿತು. 14 ಸದಸ್ಯಬಲವುಳ್ಳ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಜಯಲಕ್ಷ್ಮಮ್ಮ ಸಿದ್ದೇಗೌಡ ನಾಮಪತ್ರ ಸಲ್ಲಿಸಿದರು. ಅಂತಿಮವಾಗಿ ಕಣದಲ್ಲಿ ಉಳಿದ ಜಯಲಕ್ಷö್ಮಮ್ಮ ಸಿದ್ದೇಗೌಡರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಶಿರಸ್ತೆದಾರ್ ಕಲ್ಲೇಶಪ್ಪ ಘೋಷಣೆ ಮಾಡಿದರು.
ನೂತನ ಅಧ್ಯಕ್ಷೆ ಜಯಲಕ್ಷ್ಮಮ್ಮಸಿದ್ದೇಗೌಡ ಮಾತನಾಡಿ ನಾನು ಅವಿರೋಧವಾಗಿ ಆಯ್ಕೆಯಾಗಲು ಪ್ರಮಖ ರೂವಾರಿಯಾದ ಮುಖಂಡರಾದ ತ್ಯಾಗರಾಜ್ ಅವರಿಗೆ ವಿಶೇಷ ಕೃತಜ್ಞತೆ ಸಲ್ಲಿಸುತ್ತೇನೆ. ಮುಖಂಡ ತ್ಯಾಗರಾಜ್ ಅವರ ಮಾರ್ಗದರ್ಶನದಂತೆ ನಮ್ಮ ಪಂಚಾಯಿತಿಯ ಸರ್ವ ಸದಸ್ಯರುಗಳು ನನ್ನನ್ನು ಒಮ್ಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದನ್ನು ಗೌರವಪೂರ್ವಕವಾಗಿ ಸ್ಮರಿಸುತ್ತೇನೆ. ಮುಂದಿನ ದಿನಗಳಲ್ಲಿ ಎಲ್ಲಾ ಸದಸ್ಯರ ಸಲಹೆ ಸಹಕಾರದೊಂದಿಗೆ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ಅಭಿವೃದ್ದಿ ಪಡಿಸುತ್ತೇನೆ ಎಂದರು.
ನೂತನ ಅಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ನೂತನ ಅಧ್ಯಕ್ಷರು ಬೃಹತ್ ಕೇಕ್ ಕತ್ತರಿಸುವ ಮೂಲಕ ಗ್ರಾಮಸ್ಥರು ಹಾಗೂ ಅಭಿಮಾನಿಗಳೊಂದಿಗೆ ಸಂಭ್ರಮ ಹಂಚಿಕೊಂಡರು. ನೂತನ ಅಧ್ಯಕ್ಷರಾಗಿ ಆಯ್ಕೆಯಾಗಲು ಪರೋಕ್ಷವಾಗಿ ಸಹಕರಿಸಿದ ಹಿತೈಷಿಗಳನ್ನು ಅಭಿನಂದಿಸಿದರು.
ನೂತನ ಅಧ್ಯಕ್ಷರನ್ನು ನಿಕಟಪೂರ್ವ ಅಧ್ಯಕ್ಷರಾದ ಬೇಬಿತ್ಯಾಗರಾಜ್, ಉಪಾಧ್ಯಕ್ಷರಾದ ಲಕ್ಷ್ಮಮ್ಮ,ಸಹಸದಸ್ಯರುಗಳಾದ ನಾಗೇಂದ್ರ, ರವಿಕುಮಾರ್, ನಾಗರತ್ನ, ಕಲ್ಪನಾ,ಮಂಜುನಾಥ್,ನಾಗಮ್ಮ,ಚಂದ್ರಯ್ಯ,ಶಂಕರ್,ಕೃಷ್ಣಯ್ಯ, ನೇತ್ರಾವತಿ, ಶ್ರೀನಿವಾಸ್, ಪಿ.ಡಿ.ಓ. ಸಿದ್ದೇಶ್ ಮತ್ತು ಸಿಬ್ಬಂಧಿ ಅಭಿನಂದಿಸಿ ಶುಭಕೋರಿದರು.