ಬಿಜೆಪಿ ಸರ್ಕಾರ ರಾಜಕೀಯ ಪಿತೂರಿಗೆ ಈ.ಡಿ.ಬಳಸಿ ಪ್ರಜಾಪ್ರಭುತ್ವಕ್ಕೆ ದ್ರೋಹ ಮಾಡುತ್ತಿದೆ : ಶಾಸಕ ಡಾ.ಜಿ.ಪರಮೇಶ್ವರ್
ಕೊರಟಗೆರೆ : ಕೇಂದ್ರ ಸರ್ಕಾರ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಿಚಾರದಲ್ಲಿ ತನ್ನ ಅಧಿಕಾರ ದುರುಪಯೋಗ ಮಾಡಿಕೊಂಡು ಪ್ರಜಾಪ್ರಭುತ್ವಕ್ಕೆ ದ್ರೋಹ ಮಾಡುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.
ಅವರ ಪಟ್ಟಣದಲ್ಲಿ ಕಾಂಗ್ರೆಸ್ ಭವನ ಕಟ್ಟಡ ಕಾಮಗಾರಿ ವಿಕ್ಷಣೆ ಸಂದರ್ಭದಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಆಸ್ತಿ ವಿಚಾರದಲ್ಲಿ 2016 ರಲ್ಲಿ ನ್ಯಾಯಾಲಯ ರಾಹುಲ್‌ಗಾಂಧಿ ಸೋನಿಯಗಾಂಧಿಯವರಿಗೆ ನಿರ್ದೋಷಿಯಂದು ತೀರ್ಪುನೀಡಿತ್ತು. ಆದರೆ ಬಿಜೆಪಿ ಪಕ್ಷದ ಕೇಂದ್ರ ಸರ್ಕಾರ ತನ್ನ ರಾಜಕೀಯ ಪಿತೂರಿಗೆ ಈ.ಡಿ. ಯನ್ನು ಬಳಸಿಕೊಂಡು ಮತ್ತೆ ಅವರ ವಿರುದ್ದ ಕೇಸು ದಾಖಲಿಸಿ ಬಂಧಿಸುವ ಹುನ್ನಾರ ನಡೆಸಿದೆ, ಇದು ಪ್ರಜಾಪ್ರಭುತ್ವದಕ್ಕೆ ಬಿಜೆಪಿ ವರಿಷ್ಟರು ಮಾಡುತ್ತಿರುವ ಅನ್ಯಾಯ ಇದರ ವಿರುದ್ದ ಕಾಂಗ್ರೆಸ್ ಪಕ್ಷವು ರಾಜ್ಯ ಸೇರಿದಂತೆ ದೇಶದೆಲ್ಲಡೆ ನ್ಯಾಯಕ್ಕಾಗಿ ಹೊರಾಟ ಮಾಡುತ್ತೆದೆ ಎಂದರು.
ರಾಜ್ಯದಲ್ಲಿ ನಡೆದ ನಾಲ್ಕು ವಿಧಾನ ಪರಿಷತ್ ಚುಣಾವಣೆಯಲ್ಲಿ ಕಾಂಗ್ರೆಸ್ ಎರಡು ಸ್ಥಾನವನ್ನು ಪಡೆದು ಜಯಗಳಿಸಿದೆ, ಈ ಹಿಂದೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಇರಲ್ಲಿಲ್ಲ, ಅಂದರೆ ಬಿಜೆಪಿಯ ಆಡಳಿತ ಬೇಸತ್ತು ವಿದ್ಯಾವಂತರು ಕಾಂಗ್ರೆಸ್‌ವನ್ನು ಬಯಸುತ್ತಿದ್ದಾರೆ ಬರುವ ವಿಧಾನ ಸಭಾ ಚುಣಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಸ್ವಂತ ಬಲದಿಂದ ಅಧಿಕಾರಕ್ಕೆ ರಾಜ್ಯದಲ್ಲಿ ಬರಲಿದೆ ಎಂದರು.
ಜೂನ್ 20 ರಂದು ಪ್ರದಾನಿ ಮೋದಿಯವರು ಮೈಸೂರಿಗೆ ಬರುತ್ತಿದ್ದು ಅವರು ಉದ್ಘಾಟಿಸುವ ಬಹುತೇಕ ಕಾರ್ಯಕ್ರಮಗಳು ಹಿಂದೆ ಕಾಂಗ್ರೆಸ್ ಪಕ್ಷವು ನೀಡಿದ್ದು ಈಗ ಪೂರ್ಣವಾಗಿರುವ ಕೆಲಸಗಳು, ವಿಶ್ವ ಯೋಗ ದಿನಾಚರಣೆಯಲ್ಲಿ ಮೈಸೂರಿನಲ್ಲಿ ಭಾಗವಹಿಸುತ್ತಿರುವ ಪ್ರದಾನಿ ಮೋದಿಯವರ ಸರ್ಕಾರಿ ಕಾರ್ಯಕ್ರಮವಾದರೂ, ಬಿಜೆಪಿ ಪಕ್ಷ ಅದನ್ನು ವಿಧಾನ ಸಭಾ ಚುನಾವಣೆಗೆ ಬಳಸುವ ಹುನ್ನಾರ ಮಾಡಿದೆ ಅದರೆ ಕಾಂಗ್ರೆಸ್ ಪಕ್ಷವು ಇದರ ಬಗ್ಗೆ ತಲೆಕೆಡಿಸಿಕೊಳುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರುಗಳಾದ ಕೋಡ್ಲಹಳ್ಳಿ ಅಶ್ವಥನಾರಾಯಣ, ಅರಕೆರೆ ಶಂಕರ್, ಪ.ಪಂ ಸದಸ್ಯರಾದ ಎ.ಡಿ.ಬಲರಾಮಯ್ಯ, ನಾಗರಾಜು, ನಂದೀಶ್, ಮುಖಂಡರುಗಳಾದ ಮೈಲಾರಪ್ಪ, ಗೋಂದಿಹಳ್ಳಿ ರಂಗರಾಜು, ಜಯರಾಮ್, ಅಲ್ಲಾಭಕಾಷ್, ಟಿ.ಸಿ.ರಾಮಯ್ಯ, ನಾಸೀರ್, ಅರವಿಂದ್, ಕೆ.ಎಲ್.ಮಂಜುನಾಥ್, ಸೇರಿದಂತೆ ಇತರರು ಹಾಜರಿದ್ದರು.