ಕನ್ನಡ ಭಾಷೆ 2000 ವರ್ಷಗಳ ಇತಿಹಾಸ ಹೊಂದಿದೆ : ಡಾ.ಸಿ.ಎಂ.ರಾಜೇಶ್ ಗೌಡ
ಶಿರಾ ತಾಲ್ಲೂಕು ಲಕ್ಕನಹಳ್ಳಿ ಗ್ರಾಮದಲ್ಲಿ ಗಡಿನಾಡ ಸಾಂಸ್ಕೃತಿಕ ಉತ್ಸವ
ಶಿರಾ : ಕನ್ನಡ ಭಾಷೆ 2000 ವರ್ಷಗಳ ಇತಿಹಾಸ ಹೊಂದಿದೆ. ನಮ್ಮ ಇತಿಹಾಸಗಳ ಬಗ್ಗೆ ಜನರು ತಿಳಿದುಕೊಳ್ಳಬೇಕು. ಈ ನಿಟ್ಟಿನಲ್ಲಿ ಗಡಿ ಪ್ರದೇಶದಲ್ಲಿ ಕನ್ನಡದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಿರುವುದು ಶ್ಲಾಘನೀಯ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ಅವರು ತಾಲ್ಲೂಕಿನ ಗಡಿ ಗ್ರಾಮ ಲಕ್ಕನಹಳ್ಳಿ ಗ್ರಾಮದ ಅರುಣೋದಯ ವಿದ್ಯಾಸಂಸ್ಥೆಯ ಆವರಣದಲ್ಲಿ ಗುರುವಾರ ಬೆಜ್ಜೆಹಳ್ಳಿ ಶ್ರೀ ವಿನಾಯಕ ಸಾಂಸ್ಕೃತಿಕ ಕಲಾ ಸಂಘ ಹಾಗೂ ಕರ್ನಾಟಕ ಗಡಿ ಪ್ರದೇಶಾಭಿವೃದ್ದಿ ಪ್ರಾಧಿಕಾರ ಮತ್ತು ಅರುಣೋದಯ ವಿದ್ಯಾಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ 75ನೇ ಭಾರತ ಸ್ವಾತಂತ್ರö್ಯದ ಅಮೃತೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಗಡಿನಾಡ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿದರು. ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು, ಭಾಷೆಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕನ್ನಡ ನಾಡಿನ ಹಿರಿಮೆ ಗರಿಮೆಗಳನ್ನು ಆಚಾರ ವಿಚಾರಗಳನ್ನು ಕನ್ನಡ ಭಾಷೆಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಎತ್ತಿಹಿಡಿಯುವಲ್ಲಿ ಈ ರೀತಿಯಕಾರ್ಯಕ್ರಮ ಅನುಕೂಲ ಎಂದರು.
ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಮಲ್ಲಿಕಾರ್ಜನ ಕೆಂಕೆರೆ ಮಾತನಾಡಿ ವಿನಾಯಕ ಸಾಂಸ್ಕೃತಿಕ ಕಲಾ ಸಂಘ ಗಡಿ ನಾಡಿನ ಗ್ರಾಮೀಣ ಬಾಗದಲ್ಲಿ ಇಂತಹ ಕಾರ್ಯಕ್ರಮಗಳು ಕನ್ನಡ ನಾಡು ಭಾಷೆಯ ಬಗ್ಗೆ ಕಲಾ ಸಂಘ ಹೆಚ್ಚಿನ ಕಾಳಜಿವಹಿಸುವ ಮೂಲಕ ಶ್ರಮವಹಿಸಿದೆ ಎಂದರು.
ಅರುಣೋಧಯ ವಿದ್ಯಾಸಂಸ್ಥೆಯ ಅಧ್ಯಕ್ಷ ಲಕ್ಕನಹಳ್ಳಿ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ರೇಷ್ಮೆ ಉದ್ಯಮ ನಿಗಮ ಅಧ್ಯಕ್ಷ ಎಸ್‌ಆರ್.ಗೌಡ, ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತ ಡಾ.ಲಕ್ಷö್ಮಣ್‌ದಾಸ್, ಅಚಲ ಭಜನೆ ಕಲಾ ಟ್ರಸ್ಟ್ ಅಧ್ಯಕ್ಷ ಬ್ಯಾವರಪ್ಪ, ಶಾಲಾ ಆಡಳಿತಾಧಿಕಾರಿ ಲಕ್ಷ್ಮೀ, ಶ್ರೀ ವಿನಾಯಕ ಸಾಂಸ್ಕೃತಿಕ ಕಲಾ ಸಂಘದ ಕಾರ್ಯದರ್ಶಿ ರಾಜು ಜಲಧಿ, ಮುಖಂಡರಾದ ಮುಕುಂದೇಗೌಡ, ನಿಡಗಟ್ಟೆ ಚಂದ್ರಶೇಖರ್, ಮೂಡಲಗಿರಿಯಪ್ಪ, ಗ್ರಾಪಂ ಸದಸ್ಯ ಬಿ.ಹರೀಶ್, ರವಿ, ಸಣ್ಣಿರಪ್ಪ, ಮಾರುತೇಶ್, ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಸುಧಾಕರ್ ಗೌಡ, ಸಾಹಿತಿಗಳಾದ ಬರಗೂರು ಚಂದ್ರಚಾರ್, ಶೇಖ್‌ಮಹಮ್ಮದ್ ಆಲಿ, ಶಿವು ಚಂಗಾವರ, ಸಕ್ಕರ ನಾಗರಾಜು, ಮುಖ್ಯ ಶಿಕ್ಷಕ ನಾಗೇಶ್ ಸೇರಿದಂತೆ ಹಲವರು ಹಾಜರಿದ್ದರು.