ಕೊಡಿಗೇನಹಳ್ಳಿ ಗ್ರಾಪಂನ ನೂತನ ಅಧ್ಯಕ್ಷರಾಗಿ ಎಂ.ಮಂಜುನಾಥ್ ರೆಡ್ಡಿ ಅವಿರೋಧ ಆಯ್ಕೆ
ಮಧುಗಿರಿ : ನಮ್ಮ ಗ್ರಾಪಂ ಸದಸ್ಯರು ನನ್ನ ಮೇಲೆ ವಿಶ್ವಾವಿಟ್ಟು ಅವಿರೋಧವಾಗಿ ಅಧ್ಯಕ್ಷ ಸ್ಥಾನವನ್ನು ನೀಡಿದ್ದು ಅವರ ವಿಶ್ವಾಸದಂತೆ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ನೂತನ ಗ್ರಾಪಂ ಅಧ್ಯಕ್ಷ ಎಂ ಮಂಜುನಾಥ್ ರೆಡ್ಡಿ ತಿಳಿಸಿದರು.
ಹೋಬಳಿಯ ಮುದ್ದೇನಹಳ್ಳಿ ಗ್ರಾಪಂನಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಿಗಧಿಯಾಗಿದ್ದು ಅಧ್ಯಕ್ಷರ ಸ್ಥಾನಕ್ಕೆ ಎಂ ಮಂಜುನಾಥ್ ರೆಡ್ಡಿ ಎಂಬುವರು ಎಕೈಕ ಅಭ್ಯಾರ್ಥಿ ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಸುರೇಶ್ ಆಚಾರ್ ಫಲಿತಾಂಶ ಘೋಷಣೆ ಮಾಡಿದರು.
ಗ್ರಾಪಂ ಸದಸ್ಯ ಸುರೇಶ್ ಬಾಬು ಮಾತನಾಡಿ ಸುಮಾರು 30 ವರ್ಷಗಳಿಂದ ಈ ಗ್ರಾಪಂನಲ್ಲಿ ಅಧ್ಯಕ್ಷ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಿರುವ ಇತಿಹಾಸವಿದೆ, ಮಾಜಿ ಶಾಸಕರಾದ ಕೆ.ಎನ್ ರಾಜಣ್ಣನವರ ಆಶಯದಂತೆ ಎಲ್ಲಾ ಸಮುದಾಯಕ್ಕು ಸಮಾನವಾಗಿ ಅಧಿಕಾರ ಸಿಗುವಂತೆ ಎಂ ಮಂಜುನಾಥ್ ರೆಡ್ಡಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದರು.
ಕಾಂಗ್ರೆಸ್ ಯುವ ಮುಖಂಡ ಯಲ್ಲಯ್ಯ ಮಾತನಾಡಿ ಮುದ್ದೇನಹಳ್ಳಿ ಗ್ರಾಪಂನ ಇತಿಹಾಸದಲ್ಲೇ ಇದೇ ಮೊದಲ ಬಾರಿ ಮುದ್ದೇನಹಳ್ಳಿ ಗ್ರಾಮದ ಸ್ಥಳಿಯರಿಗೆ ಅಧ್ಯಕ್ಷರ ಸ್ಥಾನ ಸಿಕ್ಕಿರುವುದು ಹೆಮ್ಮೆಯ ವಿಚಾರ, ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಸಂದ್ಯಾ ಮಂಜುನಾಥ್, ಪಿಡಿಓ ನವೀನ್ ಕುಮಾರ್ ಜಿ, ಸದಸ್ಯರಾದ ಸುರೇಶ್ ಬಾಬು, ನರೇಂದ್ರ ರೆಡ್ಡಿ, ಹನುಂತರಾಯಪ್ಪ, ಲಕ್ಷ್ಣಣ್, ಪ್ರದೀಪ್, ರಾಮಂಜಿನಯ್ಯ, ಪ್ರಮೀಳಮ್ಮ, ನಾಗಮಣಿ, ಮಂಜುಳ, ಲಕ್ಷ್ಮನ್ಮ್ಮ, ಶಾರದಮ್ಮ, ಮುಖಂಡರಾದ ಲಕ್ಷ್ಮಿನರಸೇಗೌಡ, ಚಲಪತಿ, ಬಾಬುರೆಡ್ಡಿ, ವಿಜಯ ಕುಮಾರ್ ರೆಡ್ಡಿ, ಟಿಜೆ ವೇಣುಗೋಪಾಲ ಹಾಜರಿದ್ದರು.