ಕೊರಟಗೆರೆರಾಜ್ಯಲೇಖನ

ನರಸಿಂಹಗಿರಿ ಸುಕ್ಷೇತ್ರ ರಾಜ್ಯಾಧ್ಯಂತ ಪ್ರಜ್ವಲಿಸುತ್ತಿದೆ : ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ಕಾಯಕ ಯೋಗಿ ಡಾ. ಶ್ರೀ ಹನುಮಂತನಾಥಸ್ವಾಮೀಜಿ…

ಇಂದು ಡಾ. ಶ್ರೀ ಹನುಮಂತನಾಥಸ್ವಾಮೀಜಿಯವರ ೪೦ ನೇ ವರ್ಧಮಾನ ಜಯಂತಿ

ಕೊರಟಗೆರೆ : ನರಸಿಂಹಗಿರಿ ಕ್ಷೇತ್ರ ಎಂದೇ ಹೆಸರುವಾಸಿಯಾಗಿರುವ ಕುಂಚಿಟಿಗ ಮಹಾಸಂಸ್ಥಾನದಲ್ಲಿ ಶ್ರೀ ಹನುಮಂತನಾಥಶ್ರೀಗಳ ಆಗಮನದಿಂದ ಇಂದು ರಾಜ್ಯವಲ್ಲದೇ ನೆರೆರಾಜ್ಯದಲ್ಲೂ ಹೆಸರು ಮಾಡಿದೆ.

ಶ್ರೀಗಳು ಆದಿಚುಂಚನಗಿರಿ ಮಠದಲ್ಲಿ ಪ್ರಾಥಮಿಕ ವಿದ್ಯಾಬ್ಯಾಸವನ್ನು ಪ್ರಾರಂಭಿಸಿ ಸಂಸ್ಕೃತಿ ಎಂ.ಎ, ಕೃಷ್ಣ ಯಜರ್ ವೇದ ವಿದ್ವತ್ತು, ಶೈವಾಗಮ ಪ್ರವರ ಮತ್ತು ಪ್ರವೀಣ ಅದ್ಯಯನ ಮಾಡಿ ಆಧಿಚುಂಚನಗಿರಿ ಬಾಲಗಂಗಾಧರನಾಥ ಸ್ವಾಮೀಜಿಯವರ ಪ್ರಾಭಾವಕ್ಕೋಗಾಗಿ 2010ರ ಜುಲೈ-25 ರಂದು ಶ್ರೀಗಳಿಂದ ಸನ್ಯಾಸತ್ವ ದೀಕ್ಷೆ ಪಡೆದು ನಂತರ ಕೊರಟಗೆರೆ ತಾಲೂಕಿನಲ್ಲಿ ಅವರ ಮನೆ ದೇವರಾದ ವೀರನಾಮ್ಮ ದೇವಾಲಯದಲ್ಲಿ ಕೆಲವು ದಿವಸ ನೆಲಸಿ ನಂತರ ಅಖಿಲ ಕುಂಚಿಟಿಗರ ಮಹಾಮಂಡಲದ ಅಧ್ಯಕ್ಷ ದೇವರಾಜಯ್ಯ ಶ್ರೀಗಳ ಪ್ರಭಾವಕ್ಕೊಳಗಾಗಿ ಎಲೇರಾಂಪುರದಲ್ಲಿ 9 ಎಕರೆ ಜಮೀನು ನೀಡಿ ಮಠನಿರ್ಮಾಣಕ್ಕೆ 2011 ರ ಫೆ.11 ರಂದು ಗುದ್ದಲಿ ಪೂಜೆ(ಶಂಕುಸ್ಥಾಪನೆ) ನಡೆದಿ 2012 ಫೆ.3 ರಂದು ಮಠ ಉದ್ಘಾಟನೆಗೊಂಡಿತು ನಂತರ ಮಠ ಸ್ಥಾಪನೆಯಾಗಿ 4 ವರ್ಷದಲ್ಲೇ ಶ್ರೀಗಳು ನಮ್ಮ ನಡತೆ ಹಾಗೂ ವಿಚಾರಗಳಿಂದ ಜನಮನ್ನಣೆಯಿಂದ ಎಲ್ಲಾ ಸಮುದಾಯದವರ ಪ್ರೀತಿಗೆ ಪಾತ್ರರಾಗಿದ್ದಾರೆ.

ಶ್ರೀಗಳ ಸಾಮಾಜಿಕ ಕಳಕಳಿ:- ಅಸಹಾಯಕರಿಗೆ, ಬಡವರಿಗೆ ಆದರ್ಶ ವಿವಾಹದ ಹೆಸರಿಲ್ಲಿ ಮಠದ ವಾರ್ಷಿಕೋತ್ಸವದಂದು ಉಚಿತ ಸಾಮೂಹಿಕ ವಿವಾಹ, ಅಶಕ್ತ ಮತ್ತು ಅನಾಥ ಶಿಕ್ಷಣ ವಂಚಿತ ಮಕ್ಕಳಿಗೆ ಮಠದ ವತಿಯಿಂದ ಶಿಕ್ಷಣದ ವ್ಯಚ್ಚ ಬರಿಸುತ್ತಿದ್ದು ಇದರಲ್ಲಿ ಒರ್ವ ಡಾಕ್ಟರ್ ಇಂಜಿನೀಯರ್ ಸೇರಿದಂತೆ ಡಿಎಡ್, ಐಟಿಐ, ಪಿಯುಸಿ ವಿದ್ಯಾರ್ಥಿಗಳಿದ್ದಾರೆ. ಇದೇ ರೀತಿ ಪ್ರತೀ ಪರಿಸರ ದಿನಾಚರಣೆಯಂದು ಮಠದ ಆವರಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಲ್ಲಿ 10-ಸಾವಿರಕ್ಕೂ ಅಧಿಕ ಸಸಿಗಳನ್ನು ನೆಟ್ಟು ಬೆಳಸುತ್ತಿದ್ದಾರೆ. ಕುಡಿಯುವ ನೀರು ಮತ್ತು ನೀರಾವರಿ ಯೋಜನೆಗಳ ಜಾರಿಗಾಗಿ ಹೋರಾಟ ಪಾಯಾತ್ರೆಯ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದು, ಪ್ರತೀ ವರ್ಷ 20-ಅನಾಥ ಮತ್ತು ಅಂಧ ಮಕ್ಕಳ ಶಾಲೆಗೆ ಪ್ರತೀ ವರ್ಷ ದಾಸೋಹದ ವ್ಯವಸ್ಥೆಗಾಗಿ ದವಸ ದಾನ್ಯಗಳ ಪೂರೈಕೆ, ಕನ್ನಡ ಪರ ಹೋರಾಟಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಜನಮಾನಸದಲ್ಲಿ ನೆಲೆ ಮಾಡಿದ್ದಾರೆ.

   

ಧಾರ್ಮಿಕವಾಗಿ ಶ್ರೀಗಳ ಕಾರ್ಯ:- ಪ್ರತೀ ವರ್ಷ ಮಠದ ವತಿಯಿಂದ ಉಚಿತ ಅರ್ಚಕರ ತರಬೇತಿ, ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿನ ಮಾರಮ್ಮ ಮತ್ತು ತಮಿಳುನಾಡಿನ ಹೊಸೂರಿನಲ್ಲಿನ ವೀರನಾಗಮ್ಮ ದೇವಾಲಯಗಳ ಜೀರ್ಣೋದ್ದಾರ ಕಾಯಕಲ್ಪ ಮಾಡಿದ್ದಾರೆ, ಇದಲ್ಲದೇ 150 ಕ್ಕೂ ಹೆಚ್ಚು ದೇವಾಲಯಗಳಿಗೆ ಲೋಕಕಲ್ಯಾಣರ್ಥವಾಗಿ ಕುಂಬ ಕಳಸ ಸ್ಥಾಪನೆಯನ್ನು ಮಾಡಿರುವುದು ಶ್ರೀಗಳ ಹಿರಿಮೆ.

ಮಠದಲ್ಲಿ ಲಕ್ಷ್ಮೀನರಸಿಂಹಸ್ವಾಮೀ ನೂತನ ದೇವಾಲಯ:- ಅಖಿಲ ಕುಂಚಿಟಿಗರ ಮಹಾಮಂಡಲದ ಅಧ್ಯಕ್ಷ ಎನ್ ದೇವರಾಜಯ್ಯರ ಸಹಕಾ ಮತ್ತು ಭಕ್ತರ ಸಹಕಾರದಿಂದ ಮಠದ ಬಳಿ 1.5 ಲಕ್ಷ ಮೌಲ್ಯದ ಸಂಪೂರ್ಣ ಕಲ್ಲಿನಿಂದ ದೇವಾಲಯ ನಿರ್ಮಾಣವಾಗಿದ್ದು ಭಕ್ತರ ಆಕರ್ಷಣೀಯ ಧಾರ್ಮಿಕ ಕ್ಷೇತ್ರವಾಗಿದೆ.

 

ಶ್ರಿಗಳ ಮುಂದಿನ ಯೋಜನೆಗಳು:- ಮಠದ ಆವರಣದಲ್ಲಿ ವೃದ್ದಾಶ್ರಮ, ಅನಾಥಶ್ರಮ, ಸಾರ್ವಜನಿಕ ಸಮುಧಾಯ ಭವನ, ಗೋಶಾಲೆ, ಸಾರ್ವಜಿಕ ಗ್ರಂಥಾಲಯ, ಉಚಿತ ಸ್ವಯಂ ಉದ್ಯೋಗಕ್ಕೆ ತರಬೇತಿ ಮತ್ತು ಸಹಕಾರ, ಕುಂಚಿಟಿಗ ಸಮುದಾಯದ 48 ಕುಲಗಳ ಮನೆದೇವರುಗಳನ್ನು ಮಠದಲ್ಲಿ ನಿರ್ಮಿಸಿ ಶ್ರೀಮಠವನ್ನು ಕುಂಚಿಟಿಗ ಕಾಶಿ ಮಾಡಬೇಕು ಎಂಬ ಹೆಬ್ಬಯಕೆಯಿಂದ ದೇವಾಲಯಗಳ ನಿರ್ಮಾಣಕ್ಕೆ ಯೋಜನೆಗಳನ್ನು ರೂಪರೇಷಗಳು ತಯಾರಾಗಿವೆ.

ಕುಂಚಿಟಿಗ ಸಮುದಾಯಕ್ಕೆ ಶ್ರೀಗಳ ಕಾರ‍್ಯ:- ಪ್ರತೀ ತಾಲೂಕಿನಲ್ಲಿ ಸಂಘ ಸ್ಥಾಪನೆ ಮಾಡಿದ್ದು, ಈಗಾಗೇ ಕೊರಟಗೆರೆ ತಾಲೂಕಿನಲ್ಲಿ ಕುಂಚಶ್ರೀ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕ್ ಸ್ಥಾಪನೆ ಮಾಡಿ, ಸಾರ್ವಜನಿಕರಿಂದ ಶೇರುಗಳನ್ನು ಸಂಗ್ರಹಿಸಿ ಬ್ಯಾಂಕ್‌ನ್ನು ಸ್ಥಾಪನೆ ಮಾಡಿದ್ದಾರೆ ಮಾಡಿ ಧರ್ಮಜಾಗೃತಿ ಕಾರ್ಯಗಳಲ್ಲಿ ಸಂಘಟನೆ ಮಾಡುವುದು ಮತ್ತು ಕುಂಚಿಟಿಗ ಸಮುದಾಯವನ್ನು ಪ್ರವರ್ಗ 1 ಅಥವಾ 2 ಕ್ಕೆ ತರಲು ಸರ್ಕಾರ ಮಟ್ಟದಲ್ಲಿ ಹೋರಾಟ ಮಾಡಲು ಶ್ರೀಗಳು ಸಮುದಾಯ ಸಂಘಟನೆ ಮುಂದಾಗಿದ್ದಾರೆ.

ಸಂಸ್ಕೃತ ಪಾಠಶಾಲೆ ಅಸ್ಥಿತ್ವಕ್ಕೆ:-ಈಗಾಗಲೇ ಮಠದಲ್ಲಿ ಸಂಸ್ಕೃತ ಶಾಲೆಯು ಪ್ರಾರಂಭ ಹಂತಕ್ಕೆ ತಲುಪಿದ್ದು ವಿದ್ಯಾರ್ಥಿಗಳ ದಾಖಲಾತಿ ಪ್ರಾರಂಭವಾಗಿದೆ. ಶ್ರೀಗಳು ಸಹ ಸಂಸ್ಕೃತ ಎಂ.ಎ ಶಿಕ್ಷಣ ಪದೆದವರಾಗಿದ್ದು ನಮ್ಮ ಸಂಸ್ಕೃತಿಯನ್ನು ಉಳಿಸಬೇಕು ಮತ್ತು ದೇವ ಭಾಷೆ ಸಂಸ್ಕೃತ ಉಳಿಯಬೇಕು ಎನ್ನುವ ಹಿನ್ನೆಲೆಯಲ್ಲಿ ಮಠದಲ್ಲಿ ಸಂಸ್ಕೃತ ವೇದ ಪಾಠಶಾಲೆಯನ್ನುಪ್ರಾರಂಭಿಸಿದ್ದಾರೆ.

ಶ್ರೀಗಳ ಸಮಾಜಿಕ ಕಳಕಳಿಯಿಂದ ಮುಖ್ಯಮಂತ್ರಿಗಳು, ಸಚಿವರುಗಳು ಎಲ್ಲಾ ಪಕ್ಷಗಳ ರಾಜಕೀಯ ಮುಖಂಡರುಗಳು ಸರ್ಕಾರಿ ಅಧಿಕಾರಿಗಳು ಮಠದಕ್ಕೆ ಬೇಟಿ ನೀಡಿದ್ದು ಶ್ರೀಗಳ ಯೋಜನೆಗಳಿಗೆ ಸಹಕಾರ ನೀಡುವುದಾಗಿ ಭರವಸೆಗಳನ್ನು ನೀಡಿದ್ದಾರೆ, ಈ ಹಿನ್ನೆಲೆಯಲ್ಲಿ ಶ್ರೀಗಳು 39 ವಸಂತಗಳನ್ನು ಪೂರೈಸಿ 40 ವಸಂತಗಳಿಗೆ ಕಾಲಿರಿಸುತ್ತಿದ್ದು ಇದೇ ರೀತಿ ಸಾಮಾಜಿ ಕಾರ್ಯಗಳಲ್ಲಿ ತೊಡಗಿ 100 ವಸಂತಗಳನ್ನು ಪೂರೈಸಲಿ ಎಂಬುದು ಎಲ್ಲರ ಆಶಯ.

ವಿಶೇಷ ವರದಿ: ಲಕ್ಷ್ಮಿಕಾಂತ ಕೆ.ಎಸ್

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker