ತುರುವೇಕೆರೆ : ಮಾಜಿ ಶಾಸಕ ಹಾಗೂ ಚಿತ್ರನಟ ಜಗ್ಗೇಶ್ ರವರಿಗೆ ಬಿ.ಜೆ.ಪಿ. ಪಕ್ಷವು ರಾಜ್ಯಸಭೆಗೆ ಟಿಕೇಟ್ ನೀಡಿದ ಹಿನ್ನಲೆಯಲ್ಲಿ ತುರುವೇಕೆರೆ ಪಟ್ಟಣದಲ್ಲಿ ಶಾಸಕ ಮಸಾಲಜಯರಾಮ್ ಹಾಗೂ ಬಿ.ಜೆ.ಪಿ. ಕಾರ್ಯಕರ್ತರುಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಶಾಸಕ ಮಸಾಲಜಯರಾಮ್ ಮಾತನಾಡಿ ತಮ್ಮ ಕ್ಷೇತ್ರದ ಮಾಜಿ ಶಾಸಕರಾದ ಜಗ್ಗೇಶ್‌ರವರು ಪಕ್ಷಕ್ಕಾಗಿ ಸಲ್ಲಿಸಿದ ವಿಶಿಷ್ಟ ಸೇವೆಯನ್ನು ಗುರುತಿಸಿ ಮೇಲ್ಮನೆಗೆ ಟಿಕೇಟ್ ನೀಡಿರುವ ಹೈ ಕಮಾಂಡ್‌ಗೆ ಕ್ಷೇತ್ರದ ಜನತೆಯ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ. ತುರುವೇಕೆರೆಯ ಮಣ್ಣಿನಮಗ ಜಗ್ಗೇಶ್ ರವರಿಗೆ ಮೇಲ್ಮನೆ ಟಿಕೇಟ್ ದೊರಕಿರುವುದು ನನಗೆ ವಿಶೇಷ ಶಕ್ತಿ ಬಂದAತಾಗಿದೆ. ಜಗ್ಗೇಶ್‌ರವರ ಸಹಕಾರದಿಂದ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ದಿ ಪಥದತ್ತ ಕೊಂಡೊಯ್ಯುವೆ. ವಿಶೇಷವಾಗಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಜಗ್ಗೇಶ್‌ರವರನ್ನು ಮನ್ನಣೆ ನೀಡುವ ಬಿ.ಜೆ.ಪಿ. ಒಂದೇ ಜಾತಿಗೆ ಸೀಮಿತವಲ್ಲ ಎಂಬುದನ್ನು ಸಾಬೀತು ಪಡಿಸಿದೆ ಎಂದರು ಹರ್ಷ ವ್ಯಕ್ತಪಡಿಸಿದರು.
ರಾಜಕೀಯ ಪುನರ್ಜನ್ಮ:
ತುರುವೇಕೆರೆ ವಿಧಾನಸಭಾ ಕ್ಷೇತ್ರದ ಜಗ್ಗೇಶ್‌ರವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ನನಗೆ ಹಾಗೂ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದರು. ಅಂದು ಜಗ್ಗೇಶ್ ರಾಜೀನಾಮೆ ನೀಡುವ ಮೂಲಕ ಸ್ಥಾನ ತ್ಯಾಗ ಮಾಡದಿದ್ದರೇ ಎಂ.ಟಿ.ಕೃಷ್ಣಪ್ಪನವರು ಮೂಲೆ ಗುಂಪಾಗುತ್ತಿದ್ದರು. ಆನಂತರದಲ್ಲಿ ನಾನೂ ಸಹ ಬಿ.ಜೆ.ಪಿ. ಯಿಂದ ಶಾಸಕನಾಗಿರುವುದನ್ನು ಮರೆಯಲಾರೆ ಎಂದರು.
ಬಿ.ಜೆ.ಪಿ. ವಕ್ತಾರ ಮುದ್ದೇಗೌಡ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಕೊಂಡಜ್ಜಿವಿಶ್ವನಾಥ್, ವಿ.ಟಿ.ವೆಂಕಟರಾಮ್, ಅರಳೀಕರೆ ಶಿವಯ್ಯ, ಮೋಹನ್, ಮಹಾವೀರಬಾಬು, ವಿ.ಬಿ.ಸುರೇಶ್,ಅನಿತಾನಂಜುಂಡಯ್ಯ ಸೇರಿದಂತೆ ಅನೇಕರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.