ಮೇ 28 ರಂದು ಅಮೃತ ಭಾರತಿಗೆ ಕನ್ನಡ ದಾರತಿ ಕಾರ್ಯಕ್ರಮ : ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ
ಮಧುಗಿರಿ : ಮೇ 28 ರಂದು ನಡೆಯುವ ಭಾರತ ಸ್ವಾತಂತ್ರ‍್ಯ ದ ಅಮೃತ ಮಹೋತ್ಸವ ಅಂಗವಾಗಿ ಅಮೃತ ಭಾರತಿಗೆ ಕನ್ನಡ ದಾರತಿ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸುವಂತೆ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ತಿಳಿಸಿದರು.
ಪಟ್ಟಣದ ತಾಪಂ ಕಚೇರಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಹಾಗೂ ಕನ್ನಡ ಪರ ಸಂಘಟನೆಗಳೊಂದಿಗೆ ಕರೆಯಲಾಗಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿ ಅವರು. ಸ್ವಾತಂತ್ರ‍್ಯದ 75 ನೇ ವರ್ಷದ ಸವಿ ನೆನಪಿಗಾಗಿ ಆಚರಿಸಲಾಗುತ್ತಿದ್ದು ದೇಶದ ಪ್ರತಿಯೊಬ್ಬ ನಾಗರೀಕನು ಹೆಮ್ಮೆಯಿಂದ ಗರ್ವದಿಂದ ಬಹಳ ಅರ್ಥಪೂರ್ಣವಾಗಿ ಭಾರತೀಯ ಪ್ರಜೆಯಾಗಿ ಈ ಕಾರ್ಯಕ್ರಮದಲ್ಲಿ ಸ್ವಇಚ್ಛೆಯಿಂದ ಪಾಲ್ಗೊಂಡು ಆಚರಿಸಬೇಕಾದ ಕಾರ್ಯಕ್ರಮವಾಗಿದೆ. ಕನ್ನಡ ಮತ್ತು ಸಂಸ್ಕೃತಿಯ ಇಲಾಖೆ ಹಾಗೂ ತಾಲ್ಲೂಕು ಆಡಳಿತ ವತಿಯಿಂದ ಆಯೋಜಿಸಲಾಗುತ್ತಿದ್ದು ಎಲ್ಲಾ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು ಒಂದು ವೇಳೆ ಯಾರಾದರೂ ಈ ಕಾರ್ಯಕ್ರಮಕ್ಕೆ ಗೈರಾದರೆ ಅವರ ಮೇಲೆ ಶಿಸ್ತು ಕ್ರಮ ವಹಿಸಿಲಾಗುತ್ತದೆ ಎಂದರು.
ತಹಶೀಲ್ದಾರ್ ಸುರೇಶ್ ಆಚಾರ್ ಮಾತನಾಡಿ ಸ್ವತಂತ್ರಕ್ಕಾಗಿ ಹೋರಾಡಿದ ಮಹಾನೀಯರಾದ ಮಹಾತ್ಮ ಗಾಂಧಿ, ಅಂಬೇಡ್ಕರ್, ಸುಭಾಸ್ ಚಂದ್ರಬೋಸ್, ಭಾವಚಿತ್ರಗಳನ್ನು ಇಟ್ಟು ಡೂಂ ಲೈಟ್ ವೃತ್ತದ ಬಳಿಯಿಂದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾ ಪ್ರಕಾರ ತಂಡಗಳೊಂದಿಗೆ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ರಾಜೀವ್ ಗಾಂಧಿ ಕ್ರೀಡಾಂಗಣಾದ ವರೆವಿಗೂ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸಲಾಗುವುದು ಹಾಗೂ ಇಲಾಖೆಯ ವತಿಯಿಂದ ಈಗಾಗಲೇ ನೀಡಲಾಗಿರುವ ನಾಮಫಲಕವನ್ನು ರಾಜೀವ್ ಗಾಂಧಿ ಕ್ರೀಡಾಂಗಣಾದಲ್ಲಿ ಆಳವಡಿಕೆ, ನಾಡಗೀತೆ ಗಾಯನ, ಸಾಕ್ಷ್ಯಚಿತ್ರ ಪ್ರದರ್ಶನ, ಮುಖ್ಯ ಅತಿಥಿಗಳ ಭಾಷಣ, ಕೊನೆಯಲ್ಲಿ ಸಂಕಲ್ಪ ಭೋದನೆ ಸರಕಾರದ ಸೂಚನೆಯಂತೆ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು.
ಸಭೆಯಲ್ಲಿ ಸರಕಾರಿ ನೌಕರ ಸಂಘದ ಅಧ್ಯಕ್ಷ ಹೆಚ್.ವಿ. ವೆಂಕಟೇಶಯ್ಯ, ಖಜಾಂಚಿ ಚಿಕ್ಕರಂಗಪ್ಪ, ಅಧಿಕಾರಿಗಳಾದ ಟಿ ಹೆಚ್ ಒ ರಮೇಶ್ ಬಾಬು, ಎಇಇ ರಾಜಗೋಪಾಲ್,ಸಿಡಿಪಿಓ ಅನಿತ, ರೇಷ್ಮೇ ಇಲಾಖೆಯ ಲಕ್ಷ್ಮೀನರಸಯ್ಯ, ಪ್ರಾಣೇಶ್, ತಾಪಂ ಎಡಿಓ ಗುರುಮೂರ್ತಿ, ಆಹಾರ ಶಿರಸ್ತೆದಾರ್ ಗಣೇಶ್ , ಕೃಷಿ ಮಾರುಕಟ್ಟೆಯ ಕಾರ್ಯದರ್ಶಿ ಆಶಾ, ಸಹಕಾರ ಇಲಾಖೆಯ ರಾಘವೇಂದ್ರ , ವಿ ಎ ಸುನೀಲ್ ಹಾಗೂ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹರಾಜು ಕನ್ನಡಪರ ಸಂಘಟನೆಯ ಪದಾಧಿಕಾರಿಗಳು, ಪತ್ರಕರ್ತರು ಇದ್ದರು.